ಕಾರವಾರ: ತಾಲೂಕು ಪಂಚಾಯಿತಿ ನಾಮನಿರ್ದೇಶಿತ ಸದಸ್ಯರು ನಾಮಕಾವಸ್ಥೆಗೆ ಮಾತ್ರ ಸೀಮಿತ ಎಂಬಂತಾಗಿದೆ. ಕೆಡಿಪಿ ಸಭೆಯಲ್ಲಿಯೂ ನಾಮನಿರ್ದೇಶಿತ ಸದಸ್ಯರಿಗೆ ಬೆಲೆಯೇ ಇಲ್ಲ. ಈ ಕುರಿತು ಸಭೆಯಲ್ಲಿಯೂ ಆಕ್ರೋಶ ವ್ಯಕ್ತವಾಗಿದೆ. ನಾಮ ನಿರ್ದೇಶಿತ ಸದಸ್ಯರಿಗೆ ಅಧಿಕಾರಿಗಳು ಗೌರವ ಕೊಡುವದಿಲ್ಲ. ಸದಸ್ಯರ ಹೆಸರು ಸೂಚಿಸುವ ನಾಮ ಫಲಕವನ್ನು ಹಾಕಿಲ್ಲ. ನಾಮನಿರ್ದೇಶಿತ ಸದಸ್ಯರು ನೀಡುವ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ನಾಮ ನಿರ್ದೇಶಿತರು ಗಮನಕ್ಕೆ ತಂದ ಒಂದೇ ಒಂದು … [Read more...] about ನಾಮನಿರ್ದೇಶಿತ ಸದಸ್ಯರಿಗೆ ಬೆಲೆಯೇ ಇಲ್ಲ;ಸಭೆಯಲ್ಲಿ ಆಕ್ರೋಶ
Karwar News
ಗೋಕರ್ಣದಲ್ಲಿ ಅಪಾಯದಲ್ಲಿದ್ದ ಪ್ರವಾಸಿಗರ ರಕ್ಷಣೆ
ಗೋಕರ್ಣ:ಇಲ್ಲಿನ ಮುಖ್ಯ ಕಡಲತೀರದಲ್ಲಿ ನೀರುಪಾಲಾಗುತ್ತಿದ್ದ ಪ್ರವಾಸಿಗರನ್ನು ಉತ್ತರ ಕನ್ನಡ ಜಿಲ್ಲಾಡಳಿತ ನೇಮಿಸಿದ ಜೀವ ರಕ್ಷಕ ಸಿಬ್ಬಂದಿ ಶನಿವಾರ ರಕ್ಷಿಸಿದರು. ಬೆಂಗಳೂರಿನಿಂದ ಏಳು ಜನ ವಿದ್ಯಾರ್ಥಿಗಳು ವಾರಾಂತ್ಯದ ಪ್ರವಾಸಕ್ಕಾಗಿ ಗೋಕರ್ಣಕ್ಕೆ ಬಂದಿದ್ದರು. ಇಲ್ಲಿನ ಸಮುದ್ರ ತೀರದಲ್ಲಿ ಆಟವಾಡುತ್ತಿದ್ದ ವೇಳೆ ಇಬ್ಬರು ಪ್ರವಾಸಿಗರು ಕೊಚ್ಚಿ ಹೋದರು. ಸಮಯ ಪ್ರಜ್ಞೆ ಮೆರೆದ ಜೀವರಕ್ಷಕ ಸಿಬ್ಬಂದಿ ಮೋಹನ ಅಂಬಿ, ರಾಜು ಅಂಬಿ, ಪುರುಷೋತ್ತಮ ಹರಿಕಂತ್ರ ಹಾಗೂ … [Read more...] about ಗೋಕರ್ಣದಲ್ಲಿ ಅಪಾಯದಲ್ಲಿದ್ದ ಪ್ರವಾಸಿಗರ ರಕ್ಷಣೆ
ಆನಂದ ಅಸ್ನೋಟಿಕರ್ ರಾಜಕೀಯ ಪ್ರವೇಶಕ್ಕೆ ಅಭಿಮಾನಗಳ ಒತ್ತಾಯ
ಕಾರವಾರ: ಕಳೆದ ನಾಲ್ಕುವರೆ ವರ್ಷಗಳಿಂದ ಜನರಿಂದ ದೂರವಿದ್ದ ಮಾಜಿ ಸಚಿವ ಆನಂದ ಅಸ್ನೋಟಿಕರ್ ಭಾನುವಾರ ನಗರದಲ್ಲಿ ದಿಡೀರ್ ಪ್ರತ್ಯಕ್ಷರಾಗುವ ಸಾದ್ಯತೆಯಿದೆ. ಕಾರಣ ಅವರ ಬೆಂಬಲಿಗರೇ ಅಸ್ನೋಟಿಕರ್ ಮನೆ ಮುಂದೆ ಭಾನುವಾರ ಪ್ರತಿಭಟನೆ ನಡೆಸಲಿದ್ದಾರೆ. ಗೊಂದಲದಲ್ಲಿರುವ ಜನತೆಗೆ ಆನಂದ ಅಸ್ನೋಟಿಕರ್ ತಮ್ಮ ರಾಜಕೀಯ ನಿಲುವು ತಿಳಿಸಬೇಕು ಎಂಬುದು ಅಭಿಮಾನಿಗಳ ಆಗ್ರಹವಾಗಿದೆ. 2013ರ ಚುನಾವಣೆಯಲ್ಲಿ ಪಕ್ಷೇತರ ಶಾಸಕ ಸತೀಶ್ ಸೈಲ್ ವಿರುದ್ದ ಸೋಲು ಕಂಡ ಆನಂದ ಅಸ್ನೋಟಿಕರ್ ಮತ್ತೆ … [Read more...] about ಆನಂದ ಅಸ್ನೋಟಿಕರ್ ರಾಜಕೀಯ ಪ್ರವೇಶಕ್ಕೆ ಅಭಿಮಾನಗಳ ಒತ್ತಾಯ
ಆಯುಧ ಅನುಜ್ಞಪ್ತಿ ನವೀಕರಣ ಆಂದೋಲನ ನವೆಂಬರ್ 15 ರಂದು
ಕಾರವಾರ: ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಹಶೀಲ್ದಾರ ಕಾರ್ಯಾಲಯದಲ್ಲಿ ಆಯುಧ ಅನುಜ್ಞಪ್ತಿ ನವೀಕರಣ ಆಂದೋಲನ ನವೆಂಬರ್ 15 ರಂದು ನಡೆಯಲಿದೆ. ಭಾರತೀಯ ಆಯುಧ ಕಾಯ್ದೆ 1959 ಮತ್ತು ಭಾರತೀಯ ಅಧಿನಿಯಮ 2016ರನ್ವಯ ಆಯುಧ ಅನುಜ್ಞಪ್ತಿ ನವೀಕರಣ ಕೋರಿ ಅರ್ಜಿಗಳು ಬರುತ್ತಿರುವ ಹಿನ್ನೆಲೆಯಲ್ಲಿ ಅರ್ಜಿಗಳ ಶೀಘ್ರ ವಿಲೇವಾರಿಗಾಗಿ ವಿಶೇಷ ಆಂದೋಲನ ಮಾಡುತ್ತಿದ್ದು, ಮುಂದಿನ ಮೂರು ತಿಂಗಳಿನಲ್ಲಿ ಅವಧಿ ಅಂತ್ಯವಾಗಲಿರುವ ಬೆಳೆ ಮತ್ತು ಸ್ವರಕ್ಷಣೆ ಅಯುಧ ಅನುಜ್ಞಪ್ತಿದಾರರು ನಿಗದಿತ … [Read more...] about ಆಯುಧ ಅನುಜ್ಞಪ್ತಿ ನವೀಕರಣ ಆಂದೋಲನ ನವೆಂಬರ್ 15 ರಂದು
ಜಿಲ್ಲಾ ರಂಗ ಮಂದಿರದಲ್ಲಿ ನಡೆದ ಟಿಪ್ಪು ಜಯಂತಿ – ಆಚರಣೆ ವಿರೋಧಿಸಿ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳ ಪ್ರತಿಭಟನೆ
ಕಾರವಾರ: ಟಿಪ್ಪು ಜಯಂತಿ ಆಚರಣೆ ವಿರೋಧಿಸಿ ಪ್ರತಿಭಟನೆ ನಡೆಸಿದದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು. ನಗರದ ಜಿಲ್ಲಾರಂಗಮಂದಿರದಲ್ಲಿ ಆಯೋಜಿಸಿದ್ದ ಟಿಪ್ಪು ಜಯಂತಿ ಆಚರಣೆ ಆರಂಭವಾದ ಮೇಲೆ ಸವಿತಾ ಸರ್ಕಲ್ ಬಳಿ ಸೇರಿದ ಬಿಜೆಪಿಗರು ರಾಜ್ಯ ಸರಕಾರ ಹಾಗೂ ಹಾಗೂ ಟಿಪ್ಪುವಿನ ವಿರುದ್ಧ ಘೋಷಣೆ ಕೂಗಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದು ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ದೂರಿದರು. ಮುಖ್ಯಮಂತ್ರಿಗಳ ಪ್ರತಿಕೃತಿ ದಹಿಸಲು ಮುಂದಾಗುತ್ತಿದ್ದಂತೆ … [Read more...] about ಜಿಲ್ಲಾ ರಂಗ ಮಂದಿರದಲ್ಲಿ ನಡೆದ ಟಿಪ್ಪು ಜಯಂತಿ – ಆಚರಣೆ ವಿರೋಧಿಸಿ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳ ಪ್ರತಿಭಟನೆ



