ಕಾರವಾರ:ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆದ ಕಾನೂನು ಅರಿವು ಕಾರ್ಯಗಾರದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಟಿ. ಗೋವಿಂದಯ್ಯ ಉಪನ್ಯಾಸ ನೀಡಿದರು. ಕಷ್ಟಗಳನ್ನು ಎದುರಿಸಿ ಮುಂದೆ ಬಂದರೆ ಬದುಕಿನಲ್ಲಿ ಯಶಸ್ಸು ಸಿಗುತ್ತದೆ ಎಂದು ಅವರು ಹೇಳಿದರು. ನ್ಯಾಯವಾದಿಗಳ ಸಂಘದ ಅಧ್ಯಕ್ಷ ಉದಯ ನಾಯ್ಕ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಸಂಸ್ಕಾರ ಪಡೆದು ಒಳ್ಳೆಯ ನಾಗರಿಕರಾಗಬೇಕು ಎಂದು ಹೇಳಿದರು. ನ್ಯಾಯವಾದಿ ಜಿ.ಎನ್ ಜಾಂಬವಳಿಕರ್, ರಾಜೇಶ್ವರಿ ಕೆ.ವಿ ಇದ್ದರು. … [Read more...] about ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆದ ಕಾನೂನು ಅರಿವು ಕಾರ್ಯಗಾರ
Karwar News
ಕಾರವಾರ ಅರಣ್ಯ ವಿಭಾಗದಲ್ಲಿ 63ನೇ ವನ್ಯಜೀವಿ ಸಪ್ತಾಹ ಕಾರ್ಯಕ್ರಮ
ಕಾರವಾರ: ಭೂಮಿಯಲ್ಲಿ ಕಾಡುಜೀವಿಗಳಿಗೂ ವಾಸಿಸುವ ಹಕ್ಕಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಶಿವಕುಮಾರ ಹೇಳಿದರು. ಕಾರವಾರ ಅರಣ್ಯ ವಿಭಾಗದಲ್ಲಿ 63ನೇ ವನ್ಯಜೀವಿ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಾನವನ ರಕ್ಷಣೆಗೆ ಕಾನೂನಿದೆ. ಮಾನವ ಹಕ್ಕುಗಳು ಎಂಬ ನಿಯಮವಿದೆ. ಅದರಂತೆ ವನ್ಯಜೀವಿಗಳ ರಕ್ಷಣೆಗೂ ಕಾನೂನುಗಳಿದ್ದು ಅದನ್ನು ಮಾನವ ಗೌರವಿಸಬೇಕಿದೆ ಎಂದು ಹೇಳಿದರು. ವನ್ಯಜೀವಿಗಳ ವಿನಾಶ ಮಾನವ ಸಂಕುಲಕ್ಕೆ ಶಾಪವಾಗಲಿದೆ ಎಂಬುದನ್ನು ಅರಿಯಬೇಕು. ಪರಿಸರ … [Read more...] about ಕಾರವಾರ ಅರಣ್ಯ ವಿಭಾಗದಲ್ಲಿ 63ನೇ ವನ್ಯಜೀವಿ ಸಪ್ತಾಹ ಕಾರ್ಯಕ್ರಮ
ಶರದ್ ಸಂದ್ಯಾ ಕಾರ್ಯಕ್ರಮ
ಕಾರವಾರ: ಆರ್ಟ ಆಫ್ ಲಿವಿಂಗ್ ವತಿಯಿಂದ ಬುಧವಾರ ಸಂಜೆ ಇಲ್ಲಿನ ರಾಘವೇಂದ್ರ ಮಠದಲ್ಲಿ ಶರದ್ ಸಂದ್ಯಾ ಸತ್ಸಂಗ ಕಾರ್ಯಕ್ರಮ ನಡೆಯಿತು. ವೇದ ವಿಜ್ಞಾನ ಮಹಾ ವಿದ್ಯಾಪೀಠದ ಸ್ವಾಮಿ ಸೂರ್ಯಪಾದ ಭಜನೆ ಹಾಗೂ ದ್ಯಾನ ನಡೆಸಿಕೊಟ್ಟರು. ಗುರುಪ್ರಸಾದ ದ್ವನಿ ಗೂಡಿಸಿದರು. ಶ್ರೀವತ್ಸ ಭಟ್ಟ ತಬಲಾ ಸಾಥ್ ನೀಡಿದರು. ಡಾ. ಶೃತಿ ಅನೂಪ, ಕಾವ್ಯ, ಸುನಿಲಚಂದ್ರ ಹಾರ್ವೆ ಗಾಯನ ಪ್ರಸ್ತುತ ಪಡಿಸಿದರು. ಚಂದ್ರಶೇಖರ್ ರಾವ್ ಗುರು ವಂದನೆ ಮಾಡಿದರು. ಗಣೇಶ್ ಆಚಾರ್ಯ ಇತರರು ಸಂಘಟಿಸಿದ್ದರು. … [Read more...] about ಶರದ್ ಸಂದ್ಯಾ ಕಾರ್ಯಕ್ರಮ
ವ್ಯಕ್ತಿತ್ವ ವಿಕಸನ ಕಾರ್ಯಗಾರ
ರೋಟರಿ ಕ್ಲಬ್ ವತಿಯಿಂದ ಕಾರವಾರದ ಶಿರವಾಡ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ವ್ಯಕ್ತಿತ್ವ ವಿಕಸನ ಕಾರ್ಯಗಾರದಲ್ಲಿ ಡಾ. ಸಮೀರ್‍ಕುಮಾರ ನಾಯಕ ಉಪನ್ಯಾಸ ನೀಡಿದರು. ಪ್ರಮುಖರಾದ ಅಮರ್‍ನಾಥ್ ಶೆಟ್ಟಿ, ವಿ. ಎಸ್. ಸಕ್ಸನಾ, ಪ್ರಸನ್ನ ತೆಂಡೂಲ್‍ಕರ್, ಕೇಶವ ಕಾಮತ ಇದ್ದರು. ಕಾಲೇಜು ಪ್ರಾಚಾರ್ಯೆ ಅಂಜಲಿ ಬಾಂದೇಕರ್ ಅಧ್ಯಕ್ಷತೆ ವಹಿಸಿದ್ದರು. ರಾಜೇಶ್ ವೇರ್ಣೆಕರ್ ಸ್ವಾಗತಿಸಿದರು. ಎಲ್. ಎಸ್. ಫರ್ನಂಡಿಸ್ ನಿರ್ವಹಿಸಿದರು. … [Read more...] about ವ್ಯಕ್ತಿತ್ವ ವಿಕಸನ ಕಾರ್ಯಗಾರ
ಬೋಗಸ್ ರೇಶನ್ ಕಾರ್ಡ ರದ್ದು ನಂತರ 40ಮೆಟ್ರಿಕ್ ಟನ್ ಆಹಾರ ಸಾಮಗ್ರಿ ಉಳಿತಾಯ
ಕಾರವಾರ:ರಾಜ್ಯದಲ್ಲಿ ನಕಲಿ ಪಡಿತರ ಚೀಟಿಗಳನ್ನು ರದ್ದು ಮಾಡಿದ ಪರಿಣಾಮ ಪ್ರತಿ ತಿಂಗಳು 40 ಸಾವಿರ ಮೆಟ್ರಿಕ್ ಟನ್ ಅಕ್ಕಿ ಉಳಿತಾಯವಾಗುತ್ತಿದೆ. ಪಡಿತರ ವಿತರಣೆಯಲ್ಲಾಗುತ್ತಿದ್ದ ಸೋರಿಕೆಯನ್ನು ತಡೆಗಟ್ಟಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಯು.ಟಿ.ಖಾದರ್ ಹೇಳಿದರು. ಗುರುವಾರ ಆಹಾರ ಮತ್ತು ನಾಗರಿಕ ಸರವರಾಜು ಇಲಾಖೆ ಪ್ರಗತಿ ಪರಿಶೀಲನೆ ಸಭೆ ನಂತರ ಸುದ್ದಿಗೊಷ್ಟಿ ನಡೆಸಿ ಅವರು ಮಾತನಾಡಿದರು. ಹೊಸ ಪಡಿತರ ಚೀಟಿ ಪಡೆಯಲು ಇದ್ದ ಷರತ್ತು … [Read more...] about ಬೋಗಸ್ ರೇಶನ್ ಕಾರ್ಡ ರದ್ದು ನಂತರ 40ಮೆಟ್ರಿಕ್ ಟನ್ ಆಹಾರ ಸಾಮಗ್ರಿ ಉಳಿತಾಯ




