ಯಲ್ಲಾಪುರ:ಎಟಿಎಂನಿಂದ ಹಣ ತೆಗೆಯಲು ಸಹಾಯ ಮಾಡುವ ನೆಪದಲ್ಲಿ ಕಾರ್ಡ್ ಬದಲಿಸಿ, ಹಣ ಡ್ರಾ ಮಾಡುತ್ತಿದ್ದ ಅಂತರ್ ರಾಜ್ಯ ಕಳ್ಳನನ್ನು ಯಲ್ಲಾಪುರ ಪೊಲೀಸರು ಬಂಧಿಸಿದ್ದಾರೆ.ಬಂಧಿತನನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ವೇಣುಗೋಪಾಲ ಕೃಷ್ಣ ರೆಡ್ಡಿ ಎಂದು ಗುರುತಿಸಲಾಗಿದೆ. ಈತ 2019 ರ ಡಿಸೆಂಬರ್‍ನಲ್ಲಿ ಯಲ್ಲಾಪುರದ ವ್ಯಕ್ತಿಯೋರ್ವರಿಗೆ ಎಟಿಎಂನಲ್ಲಿ ಹಣ ತೆಗೆಯಲು ಸಹಾಯ ಮಾಡುವ ನೆಪದಲ್ಲಿ ಅವರಿಂದ ಕಾರ್ಡ್ ಪಡೆದು, ಅದನ್ನು ಬದಲಿಸಿ ಬೇರೆ ಕಾರ್ಡನ್ನು … [Read more...] about ಎಟಿಎಂ ಕಾರ್ಡ್ ಬದಲಿಸಿ ಹಣ ಡ್ರಾ ಮಾಡುತ್ತಿದ್ದ ಕಳ್ಳನ ಬಂಧನ
Yellapur
ಕಡಿಮೆ ಹಣಕ್ಕೆ ಕಾರು ಕೊಡಿಸುತ್ತೇನೆಂದು ನಂಬಿಸಿ;ಹಣ ಪಡೆದು ವಂಚನೆ
ಯಲ್ಲಾಪುರ:ಕಡಿಮೆ ಹಣಕ್ಕೆ ಇನೋವಾ ಕಾರು ಕೊಡಿಸುತ್ತೇನೆಂದು ನಂಬಿಸಿ, ಹಣ ಪಡೆದು ವಂಚಿಸುತ್ತಿದ್ದ ಅಂತರ್ರಾಜ್ಯ ಕಳ್ಳನನ್ನು ಯಲ್ಲಾಪುರ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.ಬಂಧಿತನನ್ನು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಮಂಜುನಾಥ.ಬಿ.ಎಸ್ ಎಂದು ಗುರುತಿಸಲಾಗಿದೆ. ಈತ ಪಟ್ಟಣದಲ್ಲಿ ಕೆಲವರಿಗೆ ಹೊಸ ಇನೋವಾ ಕಾರನ್ನು ಕಡಿಮೆ ದರದಲ್ಲಿ ನೀಡುವುದಾಗಿ ಹೇಳಿ, ಹಣ ಪಡೆದುಕೊಂಡಿದ್ದ. ಆದರೆ ಕಾರನ್ನೂ ಕೊಡದೇ, ಹಣವನ್ನೂ ಕೊಡದೇ ವಂಚಿಸಿದ ಕುರಿತು ದೂರಿನ … [Read more...] about ಕಡಿಮೆ ಹಣಕ್ಕೆ ಕಾರು ಕೊಡಿಸುತ್ತೇನೆಂದು ನಂಬಿಸಿ;ಹಣ ಪಡೆದು ವಂಚನೆ
ಹಳ್ಳದ ನೀರು ನುಗ್ಗಿ ಬೆಳೆಹಾನಿ
ಯಲ್ಲಾಪುರ:ತಾಲೂಕಿನ ಚಿಪಗೇರಿಯ ಮಜ್ಜಿಗೆಹಳ್ಳದ ಬಳಿ ದಾಕ್ಲು ದೊಯಿಪೊಡೆ ಅವರ ಭತ್ತದ ಗದ್ದೆಗೆ ಹಳ್ಳದ ನೀರು ನುಗ್ಗಿ ಪ್ರತಿ ವರ್ಷ ಬೆಳೆಹಾನಿಯಾಗುತ್ತಿರುವ ಪ್ರದೇಶಕ್ಕೆ ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಭೇಟಿ ನೀಡಿ ಪರಿಶೀಲಿಸಿದರು.ಪ್ರತಿ ವರ್ಷ ಗದ್ದೆಗೆ ಹಳ್ಳದ ನೀರು ನುಗ್ಗಿ ಬೆಳೆಹಾನಿ ಉಂಟಾಗುತ್ತಿದ್ದು, ಹಳ್ಳ ಬೇರೆಡೆಯಿಂದ ಹರಿಯುವಂತೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡುವಂತೆ ಗ್ರಾಮಸ್ಥರು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಂತಾರಾಮ ಸಿದ್ದಿ, ಈ … [Read more...] about ಹಳ್ಳದ ನೀರು ನುಗ್ಗಿ ಬೆಳೆಹಾನಿ
ಅಕ್ರಮವಾಗಿ ಸಾಗಿಸುತ್ತಿದ್ದ 6 ಜಾನುವಾರುಗಳ ರಕ್ಷಣೆ;ಮೂವರ ಬಂಧನ
ಯಲ್ಲಾಪುರ:ಮಿನಿ ಲಾರಿಯೊಂದರಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 6 ಜಾನುವಾರುಗಳನ್ನು ಪಟ್ಟಣದ ಜೋಡುಕೆರೆ ಬಳಿ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ 3 ಜನರನ್ನು ಬಂಧಿಸಲಾಗಿದೆ.ಬಂಧಿತರನ್ನು ಹರಿಯಾಣದ ಬಿವಾಣಿಯ ಮನಪೂಲ್‍ಸಿಂಗ್ ಜಗನ್ನಾಥ, ಈಶ್ವರ ಸಿಂಗ್ ವಿಜಯ ಸಿಂಗ್ ಹಾಗೂ ಕೇರಳದ ರಿಜಿ ಫಿಲೀಫ್ ಎಂದು ಗುರುತಿಸಲಾಗಿದೆ.ಇವರು ಹರಿಯಾಣದಿಂದ ಕೇರಳದ ಕಡೆಗೆ ಮಿನಿ ಲಾರಿಯಲ್ಲಿ 5 ಎಮ್ಮೆಗಳು ಹಾಗೂ ಒಂದು ಹಸುವನ್ನು ಹಿಂಸಾತ್ಮಕವಾಗಿ … [Read more...] about ಅಕ್ರಮವಾಗಿ ಸಾಗಿಸುತ್ತಿದ್ದ 6 ಜಾನುವಾರುಗಳ ರಕ್ಷಣೆ;ಮೂವರ ಬಂಧನ
ಗಿಡಗಂಟಿಗಳನ್ನು ಸ್ವಚ್ಛಗೊಳಿಸಿ ಮಾದರಿಯಾದ ಶಿಕ್ಷಕ ;ಆರ್.ಐ.ನಾಯ್ಕ
ಯಲ್ಲಾಪುರ:ಪಟ್ಟಣದ ತಾಲೂಕು ಪಂಚಾಯಿತಿ ಆವಾರದ ಹಿಂದೆ ಬೆಳೆದು ನಿಂತ ಪೊದೆ, ಗಿಡಗಂಟಿಗಳನ್ನು ಗಣಪತಿಗಲ್ಲಿ ಶಾಲೆಯ ಮುಖ್ಯಾಧ್ಯಾಪಕ ಆರ್.ಐ. ನಾಯ್ಕ ಸ್ವಚ್ಛಗೊಳಿಸುವ ಮೂಲಕ ಮಾದರಿಯಾಗಿದ್ದಾರೆ.ತಾ.ಪಂ ಆವರಣದಲ್ಲಿರುವ ಗಾಂಧಿ ಕುಟೀರ, ಸಾಮಥ್ರ್ಯಸೌಧ ಹಾಗೂ ಶಾಸಕರ ಭವನದ ಹಿಂದೆ ನಿರ್ವಹಣೆಯಿಲ್ಲದೇ ಅಪಾರ ಪ್ರಮಾಣದಲ್ಲಿ ಗಿಡಗಂಟಿಗಳು ಬೆಳೆದು ನಿಂತಿತ್ತು. ವರ್ಷಗಳೇ ಕಳೆದರೂ ಅದನ್ನು ಸ್ವಚ್ಛಗೊಳಿಸುವ ಬಗೆಗೆ ಸಂಬಂಧಪಟ್ಟವರು ಗಮನ ಹರಿಸಿರಲಿಲ್ಲ. ಇದನ್ನು ಗಮನಿಸಿದ ಶಿಕ್ಷಕ … [Read more...] about ಗಿಡಗಂಟಿಗಳನ್ನು ಸ್ವಚ್ಛಗೊಳಿಸಿ ಮಾದರಿಯಾದ ಶಿಕ್ಷಕ ;ಆರ್.ಐ.ನಾಯ್ಕ




