ಕಾರವಾರ:ಕುಮಟಾದ ಹಿರೆಗುತ್ತಿಯಲ್ಲಿ ಮನೆಗೆ ನುಗ್ಗಿ ಹಲ್ಲೆ ನಡೆಸಿದ ಪೊಲೀಸರ ವಿರುದ್ಧ ದೂರು ದಾಖಲಿಸಿದರು ಯಾವುದೇ ಕ್ರಮವಾಗಿಲ್ಲ. ಆದರೆ ಇದೀಗ ಅದೇ ಪೊಲೀಸರು ಮತ್ತೆ ಮನೆಗೆ ಬಂದು ದೂರು ವಾಪಸ್ಸ್ ಪಡೆಯುವಂತೆ ಪಿಡಿಸುತ್ತಿದ್ದು, ಜತೆಗೆ ಜೀವಬೇದರಿಕೆ ಕೂಡ ಹಾಕಿದ್ದಾರೆ ಎಂದು ಆರೋಪಿಸಿ ಹಲ್ಲೆಗೋಳಗಾದ ಕುಟುಂಬದವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಬುಧವಾರ ದೂರು ನೀಡಿದ್ದಾರೆ. ಟ್ರಾಫಿಕ್ ಪೊಲೀಸರಾದ ಮೋಹನ್ ಗೌಡ ಮತ್ತು ನಿತ್ಯ ಎಂಬುವವರು ಅಪರಿಚಿತ ಮೂವರ … [Read more...] about ಮನೆಗೆ ನುಗ್ಗಿ ಹಲ್ಲೆ ನಡೆಸಿದ ಪೊಲೀಸರ ವಿರುದ್ಧ ದೂರು
ಕುಮಟಾ
ಅಘನಾಶಿನಿ ಅಳಿವೆಗೆ ಎದುರಾಗಿದೆ ದೊಡ್ಡ ಅಪಾಯ
ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಮೂರು ತಾಲೂಕುಗಳ ಮೂಲಕ ಹಾದುಹೋಗುವ ರಮ್ಯ ರಮಣೀಯ ಅಘನಾಶಿನಿ ನದಿ ಯಾವುದೇ ಅಡೆ-ತಡೆಯಿಲ್ಲದೆ ಹರಿಯುವ ನದಿಯಾಗಿದೆ.ಅಘನಾಶಿನಿಯ ಅಕ್ಕ-ಪಕ್ಕದಲ್ಲಿ ಯಾವುದೇ ಕೈಗಾರಿಕೆಯಿಲ್ಲ ಅಥವಾ ನದಿಗೆ ಅಡ್ಡಲಾಗಿ ಎಲ್ಲಿಯೂ ಯಾವುದೇ ಜಲಾಶಯ ನಿರ್ಮಿಸಲಾಗಿಲ್ಲ. ನದಿ ತಟದಲ್ಲಿ ಎಲ್ಲಿಯೂ ಜನವಸತಿಯೂ ಇಲ್ಲ. ಪಶ್ಚಿಮಘಟ್ಟದಲ್ಲಿ ಉಗಮವಾಗುವ ಅಘನಾಶಿನಿ ತನ್ನೊಂದಿಗೆ ಸುಮಾರು 80 ಜಲಚರಗಳಿಗೆ ಹಾಗೂ 120 ಜಾತಿಯ ಹಕ್ಕಿಗಳಿಗೆ ಅಗತ್ಯವಿರುವ ನದಿಮುಖದ ಪೋಷಕಾಂಶಗನ್ನು … [Read more...] about ಅಘನಾಶಿನಿ ಅಳಿವೆಗೆ ಎದುರಾಗಿದೆ ದೊಡ್ಡ ಅಪಾಯ
ಎಸ್.ಎಸ್.ಎಲ್.ಸಿ. : ವಿನಯಾ ನಾಯ್ಕ ರಾಜ್ಯಕ್ಕೆ 7ನೇ ರ್ಯಾಂಕ್
ಹೊನ್ನಾವರ:ಇಲ್ಲಿಯ ನ್ಯೂ ಇಂಗ್ಲಿಷ್ ಸ್ಕೂಲ್ನ ಆಂಗ್ಲ ಮಾಂಧ್ಯಮ ವಿದ್ಯಾರ್ಥಿನಿ ವಿನಯ ಅಶೋಕ ನಾಯ್ಕ ಈಕೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ. 99.4 ಅಂಕ ಪಡೆದು ರಾಜ್ಯಕ್ಕೆ 7ನೇ ರ್ಯಾಂಕ್ ಪಡೆಯುವುದರ ಮೂಲಕ ಜಿಲ್ಲೆಗೆ ಅಭಿಮಾನ ಮೂಡಿಸಿದ್ದಾಳೆ. ಕುಮಟಾ ತಾಲೂಕಿನ ಹೊಳೆಗದ್ದೆಯ ಶಿಕ್ಷಕ ದಂಪತಿ ಅಶೋಕ ನಾಯ್ಕ ಹಾಗೂ ಭಾರತಿ ನಾಯ್ಕ ಅವರ ಮಗಳಾದ ಈಕೆ ತಾನು ನರಶಾಸ್ತ್ರದಲ್ಲಿ ಸಂಸೋಧನೆ ಮಾಡಬೇಕೆಂದು ಆಸೆ ಪಟ್ಟಿರುವುದಾಗಿ ತಿಳಿಸಿದ್ದಾಳೆ. ಇವಳ ಸಾಧನೆಗೆ ಹೊನ್ನಾವರ … [Read more...] about ಎಸ್.ಎಸ್.ಎಲ್.ಸಿ. : ವಿನಯಾ ನಾಯ್ಕ ರಾಜ್ಯಕ್ಕೆ 7ನೇ ರ್ಯಾಂಕ್
ಪ್ರವಾಸಕ್ಕೆ ಬಂದ ವಿದ್ಯಾರ್ಥಿಗಳು ನೀರುಪಾಲು
ಕುಮಟಾ:ಪ್ರವಾಸಕ್ಕೆಂದು ಕುಮಟಾದ ವನ್ನಳ್ಳಿ ಬೀಚ್ಗೆ ಆಗಮಿಸಿದ್ದ ಐವರು ವಿದ್ಯಾರ್ಥಿಗಳ ಪೈಕಿ ಇಬ್ಬರು ನೀರುಪಾಲಾಗಿರುವ ಘಟನೆ ನಡೆದಿದೆ.ಹಳಿಯಾಳ ಮೂಲದ ಪ್ರಜ್ವಲ್ ಲೋಪಿಸ್ (19), ಫ್ರಾನ್ಸಿಸ್ ಬ್ರಿಗೆನ್ಸಾ (18) ನೀರುಪಾಲಾದವರು. ಇವರು ಇನ್ನು ಮೂರು ವಿದ್ಯಾರ್ಥಿಗಳನ್ನೊಡಗೂಡಿ ಸಮುದ್ರದಲ್ಲಿ ಈಜಲು ತೆರಳಿದ ವೇಳೆ ನೀರಿನಲ್ಲಿ ಮುಳುಗಿದ್ದಾರೆ. ಮೂವರನ್ನು ಸ್ಥಳೀಯರು ರಕ್ಷಿಸಿದ್ದು, ಇನ್ನಿಬ್ಬರಿಗಾಗಿ ಕರಾವಳಿ ಕಾವಲು ಪಡೆಯ ಸಿಬ್ಬಂದಿ ತೀವ್ರ ಶೋಧ ನಡೆಸಿದ್ದಾರೆ. … [Read more...] about ಪ್ರವಾಸಕ್ಕೆ ಬಂದ ವಿದ್ಯಾರ್ಥಿಗಳು ನೀರುಪಾಲು
ಕರಾವಳಿ ಭಾಗದಲ್ಲಿ ನೀರಿನ ಸಮಸ್ಯೆ
ಕಾರವಾರ:ಕರಾವಳಿ ಭಾಗದಲ್ಲಿ ನೀರಿನ ಸಮಸ್ಯೆ ತೀವ್ರಗೊಂಡಿದೆ. ಸಿಹಿ ನೀರಿನ ಬಾವಿ ಸೇರಿದಂತೆ ಕೃಷಿ ಭೂಮಿಗಳಿಗೆ ಉಪ್ಪು ನೀರು ನುಗ್ಗುತ್ತಿದ್ದು, ಬರ ಪರಿಸ್ಥಿತಿ ನಡುವೆ ಇದು ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ. ಒಂದು ಮಗ್ಗುಲಲ್ಲಿ ಉಪ್ಪು ನೀರಿನ ಬೃಹತ್ ಆಗರವನ್ನೆ ಹೊಂದಿರುವ ಕರಾವಳಿ ತಾಲೂಕುಗಳು ಇದೀಗ ಅದರಿಂದಲೇ ತೀವ್ರ ಸಮಸ್ಯೆ ಎದುರಿಸುವಂತಾಗಿದೆ. ಸಮುದ್ರದಲ್ಲಿ ಉಬ್ಬರವಿಳತವಾದಾಗ ನದಿ ಮೂಲಕ ಹಿಮ್ಮುಕವಾಗಿ ಹರಿಯುವ ಉಪ್ಪು ನೀರು ಈ ಭಾಗದ … [Read more...] about ಕರಾವಳಿ ಭಾಗದಲ್ಲಿ ನೀರಿನ ಸಮಸ್ಯೆ