ಭಟ್ಕಳ :ಇಲ್ಲಿನ ತಾಲೂಕು ಪಂಚಾಯತ್‍ನಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸರಕಾರಿ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಕುರಿತೇ ಗಂಭೀರ ಚರ್ಚೆ ನಡೆದು ಠರಾವು ಮಾಡಿ ಸಿಬ್ಬಂದಿ ಭರ್ತಿಗೆ ಆಗ್ರಹಿಸಿ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಕಳುಹಿಸಲು ನಿರ್ಧರಿಸಲಾಯಿತು. ಸಭೆಯಲ್ಲಿ ಮಾಹಿತಿ ನೀಡಲು ಆಗಮಿಸಿದ್ದ ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಮಂಜುನಾಥ ಶೆಟ್ಟಿ ಮಾತನಾಡಿ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆಯಿಂದ ಸಮರ್ಪಕ ಕಾರ್ಯನಿರ್ವಹಣೆಗೆ … [Read more...] about ಸರಕಾರಿ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಕುರಿತು ಗಂಭೀರ ಚರ್ಚೆ
ಆರೋಗ್ಯ
ಜನಪರ ಸೇವೆಗೆ ಮೊದಲ ಆಧ್ಯತೆ ನೀಡಿದ್ದೇವೆ-ತಸ್ವರ್ ಸೌದಗರ್
ದಾಂಡೇಲಿ :ಅಂಜುಮಾನ್ ಫಲಾಹುಲ್ ಮುಸ್ಲಿಮಿನ್ ಸಂಸ್ಥೆಯು ಸಮುದಾಯವನ್ನು ಸದೃಢಗೊಳಿಸುವುದರ ಜೊತೆಗೆ ಸ್ವಸ್ಥ ಸಮಾಜ ನಿರ್ಮಾಣದ ಸಂಕಲ್ಪವನ್ನು ಹೊಂದಿದ್ದು, ಈ ನಿಟ್ಟಿನಲ್ಲಿ ನಮ್ಮ ಅವಧಿಯಲ್ಲಿ ಜನಪರ ಸೇವೆಗೆ ಮೊದಲ ಆಧ್ಯತೆ ನೀಡಿದ್ದೇವೆಯೆಂದು ನಗರದ ಅಂಜುಮನ್ ಫಲಾಹುಲ್ ಮುಸ್ಲಿಮಿನ್ ಸಂಸ್ಥೆಯ ನಿರ್ಗಮಿತ ಅಧ್ಯಕ್ಷ ತಸ್ವರ್ ಸೌದಗರ್ ಅವರು ಹೇಳಿದರು. ಅವರು ಮಂಗಳವಾರ ನಗರದ ಸ್ಟೇಟ್ ಎಂಪೊರಿಯಂ ವನತಿ ಗೃಹದಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಿದ್ದರು. ಈ … [Read more...] about ಜನಪರ ಸೇವೆಗೆ ಮೊದಲ ಆಧ್ಯತೆ ನೀಡಿದ್ದೇವೆ-ತಸ್ವರ್ ಸೌದಗರ್
ಜಿಲ್ಲಾ ಪಂಚಾಯತದಲ್ಲಿ ಆಯವ್ಯಯ ಮಂಡನೆ ನಡೆಯಿತು
ಕಾರವಾರ:ಉತ್ತರ ಕನ್ನಡ ಜಿಲ್ಲಾ ಪಂಚಾಯತ್‍ನ 2017-18ನೇ ಸಾಲಿನಲ್ಲಿ ಒಟ್ಟು 78388.18 ಲಕ್ಷ ರೂ. ಮೊತ್ತದ ಒಟ್ಟು ಆಯವ್ಯಯಕ್ಕೆ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಅನುಮೋದನೆ ನೀಡಲಾಯಿತು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜಯಶ್ರೀ ಮೊಗೇರ ಆಯವ್ಯಯವನ್ನು ಸಭೆಯಲ್ಲಿ ಮಂಡಿಸಿದರು. ಇದರಲ್ಲಿ ಜಿಲ್ಲಾ ಪಂಚಾಯತ್ ಕಾರ್ಯಕ್ರಮಗಳಿಗೆ 24654.89 ಲಕ್ಷ ರೂ. ಮತ್ತು ತಾಲೂಕು ಪಂಚಾಯತ್ ಕಾರ್ಯಕ್ರಮಗಳಿಗೆ ಲೆಕ್ಕ ಶೀರ್ಷಿಕೆಯಡಿಯಲ್ಲಿ ರೂ 51257.29 ಲಕ್ಷ ಹಾಗೂ ಗ್ರಾಮ ಪಂಚಾಯತ್ … [Read more...] about ಜಿಲ್ಲಾ ಪಂಚಾಯತದಲ್ಲಿ ಆಯವ್ಯಯ ಮಂಡನೆ ನಡೆಯಿತು
ಮೇ 6ರಂದು ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯೋಜಿಸಿರುವ ಜನಮನ ಕಾರ್ಯಕ್ರಮ
ಕಾರವಾರ:ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ಮೇ 6ರಂದು ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯೋಜಿಸಿರುವ ಜನಮನ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅವರು ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳೊಂದಿಗೆ ನೇರ ಸಂವಾದ ನಡೆಸಲಿದ್ದಾರೆ. ಬೆಳಗ್ಗೆ 10.30 ಗಂಟೆಗೆ ಜಿಲ್ಲಾ ರಂಗಮಂದಿರದಲ್ಲಿ 'ಜನಮನ' ಫಲಾನುಭವಿಗಳೊಂದಿಗೆ ನೇರ ಸಂವಾದ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಸರ್ಕಾರದ ವಿವಿಧ ಯೋಜನೆಗಳಾದ … [Read more...] about ಮೇ 6ರಂದು ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯೋಜಿಸಿರುವ ಜನಮನ ಕಾರ್ಯಕ್ರಮ
ಕಾಡಿಗೆ ಬಿಟ್ಟುರೂ ಜನವಸತಿ ಪ್ರದೇಶಕ್ಕೇ ಬರುವ ಜಿಂಕೆ ಮರಿ
ಮುಂಡಗೋಡ: ಕಾಡಿಗೆ ಬಿಟ್ಟು ಬಂದರೂ ಮತ್ತೆ ಮತ್ತೆ ಜನವಸತಿ ಪ್ರದೇಶಕ್ಕೇ ಬರುತ್ತಿದ್ದ ಜಿಂಕೆ ಮರಿಯೊಂದನ್ನು ಬುಧವಾರ ದಾವಣಗೆರೆ ಬಳಿಯ ಆನಗೋಡ ಪ್ರಾಣಿ ಸಂಗ್ರಹಾಲಯಕ್ಕೆ ಬಿಡಲಾಗಿದೆ.ಹದಿನೈದು ದಿನಗಳ ಹಿಂದೆ ತಾಲ್ಲೂಕಿನ ವಡಗಟ್ಟಾ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಈ ಜಿಂಕೆ ಮರಿ ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿ ಕಂಡುಬಂದಿತ್ತು. ಅದನ್ನು ರಕ್ಷಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಕೆಲದಿನಗಳವರೆಗೆ ಆರೈಕೆ ಮಾಡಿ, ಚೇತರಿಸಿಕೊಂಡ ನಂತರ ಕಾಡಿಗೆ ಬಿಟ್ಟಿದ್ದರು. ಆದರೆ, … [Read more...] about ಕಾಡಿಗೆ ಬಿಟ್ಟುರೂ ಜನವಸತಿ ಪ್ರದೇಶಕ್ಕೇ ಬರುವ ಜಿಂಕೆ ಮರಿ