ಹಳಿಯಾಳ ;ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ ಸಮುದಾಯ ಭವನವನ್ನು ಹಳಿಯಾಳ ಪಟ್ಟಣದ ದಲಿತ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿರುವ ಇಂದಿರಾನಗರದ ಮುಂದಿನ ಮೌರ್ಯ ಹೋಟೆಲ್ ಪಕ್ಕದ ನಿವೇಶನದಲ್ಲಿಯೇ ನಿರ್ಮಿಸಬೇಕೆಂದು ಆಗ್ರಹಿಸಿ ಕಳೆದ 9 ದಿನಗಳಿಂದ ದಲಿತ ಸಂಘಟನೆಗಳ ಒಕ್ಕೂಟ ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನೆಯನ್ನು ಸಚಿವ ಆರ್.ವಿ.ದೇಶಪಾಂಡೆ ಅವರ ಭರವಸೆಯೊಂದಿಗೆ ಹಿಂದಕ್ಕೆ ಪಡೆಯಲಾಗಿದೆ. ಹಳಿಯಾಳ ಕ್ಷೇತ್ರದ ವಿವಿಧ ಅಭಿವೃದ್ದಿ … [Read more...] about 9 ದಿನಗಳಿಂದ ಅಹೋರಾತ್ರಿ ನಡೆದ ಧರಣಿಯನ್ನು ಸಚಿವ ದೇಶಪಾಂಡೆ ಅವರ ಭರವಸೆಯೊಂದಿಗೆ ಮುಕ್ತಾಯ
ಕಾಮಗಾರಿ
ಹೊನ್ನಾವರ ಪಟ್ಟಣದ ಬಾಂದೇಗದ್ದೆಯಲ್ಲಿ ಗುಣಮಟ್ಟವಿಲ್ಲದ ಒಳಚರಂಡಿ ಯೋಜನೆ ಕಾಮಗಾರಿ
ಹೊನ್ನಾವರ:ಪಟ್ಟಣದ ವ್ಯಾಪ್ತಿಯಲ್ಲಿ 29 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಒಳಚರಂಡಿ ಯೋಜನೆ ಕಾಮಗಾರಿ ಗುಣಮಟ್ಟದ್ದಾಗದೇ ಕಳಪೆ ಕಾಮಗಾರಿ ನಡೆಯುತ್ತಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ. ಈ ಯೋಜನೆಯ ಕಾಮಗಾರಿ ಆರಂಭದಲ್ಲಿ ಕಾಮಗಾರಿ ಗುಣಮಟ್ಟದ್ದಿಲ್ಲ ಎಂದು ಪಟ್ಟನ ಪಂಚಾಯತಿ ಅಧ್ಯಕ್ಷ, ಸದಸ್ಯರು ಸಾಮಾನ್ಯ ಸಭೆ ಬಹಿಷ್ಕರಿಸಿ ಪ್ರತಿಭಟನೆ ಮಾಡಿದ್ದರು. ಅಲ್ಲದೇ ಕಳಪೆ ಕಾಮಗಾರಿಯನ್ನು ಸ್ಥಗಿತಗೊಳಿಸಲು ವಿವಿಧ ಸಂಘಸಂಸ್ಥೆಗಳು ಬೆಂಬಲ ಸೂಚಿಸಿದ್ದರು. ಕೆಲವು … [Read more...] about ಹೊನ್ನಾವರ ಪಟ್ಟಣದ ಬಾಂದೇಗದ್ದೆಯಲ್ಲಿ ಗುಣಮಟ್ಟವಿಲ್ಲದ ಒಳಚರಂಡಿ ಯೋಜನೆ ಕಾಮಗಾರಿ
ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ
ಕಾರವಾರ:ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅವರು ಮೇ 12 ರಂದು ಸಂಜೆ 5ಗಂ. ಶಿರಸಿ ಆಗಮಿಸಿ ಸಾರ್ವಜನಿಕರ ಭೇಟಿ ಮಾಡಿದ ನಂತರ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುವರು. ರಾತ್ರಿ ಶಿರಸಿಯಲ್ಲಿ ವಾಸ್ತವ್ಯ ಹೂಡುವರು. ಮೇ 13 ರಂದು ಬೆಳಗ್ಗೆ 9.30ಗಂ. ಶಿರಸಿ ಪಟ್ಟಣದ ದೇವಿ ಕೆರೆಯ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವರು. ಬೆ.11 ಗಂ. ದಿ. ಶಿರಸಿ ಅರ್ಬನ್ ಸಹಕಾರಿ ಬ್ಯಾಂಕ್ ದಶಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಿ 12ಗಂಟೆಗೆ ಶಿರಸಿಯಿಂದ ನಿರ್ಗಮಿಸಿ … [Read more...] about ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ
ರಾಷ್ಟ್ರೀಯ ಹೆದ್ದಾರಿ ಕಾಮಗಾರಿ,ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ
ಭಟ್ಕಳ:ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆಯಾಗುತ್ತಿದ್ದು ಸರಿಪಡಿಸಿ ಯಥಾಸ್ಥಿತಿಯನ್ನು ಕಾಯ್ದುಕೊಂಡು ಹೋಗಬೇಕು ಎಂದು ನಾಗರೀಕ ವೇದಿಕೆಯ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಸಹಾಯಕ ಆಯುಕ್ತರ ಮೂಲಕ ಮನವಿ ನೀಡಲಾಯಿತು. ಮನವಿಯಲ್ಲಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ವೆಂಕಟಾಪುರ ಗ್ರಾಮದ ಮುರಿನಕಟ್ಟೆಯಲ್ಲಿರುವ ಧಾರ್ಮಿಕ ನಂಬಿಕೆಯ ಪ್ರತೀಕವಾಗಿರುವ ಕಟ್ಟೆಯನ್ನು ವಶಪಡಿಸಿಕೊಂಡಿದ್ದು ಇಲ್ಲಿನ ನಡೆಯಲಿರುವ ವಾರ್ಷಿಕ … [Read more...] about ರಾಷ್ಟ್ರೀಯ ಹೆದ್ದಾರಿ ಕಾಮಗಾರಿ,ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ
ಹೆದ್ದಾರಿ ಚತುಷ್ಪತ ಕಾಮಗಾರಿಯಿಂದ ಅನೇಕರಿಗೆ ತೊಂದರೆ
ಭಟ್ಕಳ:ಹೆದ್ದಾರಿ ಚತುಷ್ಪತ ಕಾಮಗಾರಿಯಿಂದ ಅನೇಕರಿಗೆ ತೊಂದರೆಯಾದರೂ ಸಹ ರಾಷ್ಟ್ರೀಯ ಹಿತದೃಷ್ಟಿಯಿಂದ ಯಾವುದೇ ರೀತಿಯಿಂದ ತೊಂದರೆ ಮಾಡದೇ ನೋವನ್ನೂ ನುಂಗಿ ಜನತೆ ಸಹಕರಿಸುತ್ತಿದ್ದಾರೆ. ಜನರ ಸಹನೆಯನ್ನು ಸಹ ಪರೀಕ್ಷಿಸುವಂತಹ ಕೆಲಸ ಐ.ಆರ್.ಬಿ. ಕಂಪೆನಿ ಮಾಡುತ್ತಿರುವುದು ಕೂಡಾ ಕೆಲವೆಡೆಗಳನ್ನು ಕಂಡು ಬಂದಿದೆ. ತಾಲೂಕಿನ ಬೆಳಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆದ್ರಕೇರಿಯ ರಮಾನಂದ ಅವಭೃತ ಅವರ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ 5 ಗುಂಟೆ ಜಾಗಾವನ್ನು … [Read more...] about ಹೆದ್ದಾರಿ ಚತುಷ್ಪತ ಕಾಮಗಾರಿಯಿಂದ ಅನೇಕರಿಗೆ ತೊಂದರೆ