ದಾಂಡೇಲಿ :ನಗರದ ಲೆನಿನ್ ರಸ್ತೆಯಲ್ಲಿರುವ ಎಸ್.ಬಿ.ಐ ಬ್ಯಾಂಕಿನಲ್ಲಿ ಗ್ರಾಹಕರ ಸಭೆಯು ಶುಕ್ರವಾರ ಜರುಗಿತು.ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಎಸ್.ಬಿ.ಐ ಬ್ಯಾಂಕಿನ ಮುಖ್ಯ ವ್ಯವಸ್ಥಾಪಕ ಯೋಗೇಶ ಕರ್ಕೇರ ಅವರು ಬ್ಯಾಂಕಿನ ಎ.ಟಿ.ಎಂ, ಆನ್‍ಲೈನ್ ಲಭ್ಯತೆಯ ಬಗ್ಗೆ, ಆಧಾರ ಜೋಡಣೆ, ಸಾಲಗಳ ವಿಚಾರವಾಗಿ ವಿವರಿಸಿದರು. ಕ್ಯಾಶ್ ಲೆಸ್ ಬ್ಯಾಕಿಂಗ್ ಬಗ್ಗೆ ಗ್ರಾಹಕರು ಹೆಚ್ಚಿನ ಅರಿವನ್ನು ಹೊಂದಿರಬೇಕು. ಈ ನಿಟ್ಟಿನಲ್ಲಿ ಗ್ರಾಹಕರು ಹೆಚ್ಚಾಗಿ ಎಟಿಎಂ, ಆನ್‍ಲೈನ್, … [Read more...] about ಎಸ್.ಬಿ.ಐ ನಲ್ಲಿ ಗ್ರಾಹಕರ ಸಭೆ
ದಾಂಡೇಲಿ
ಪಕ್ಷದ ಅಭ್ಯರ್ಥಿ ಬಗ್ಗೆ ಗೊಂದಲವಿಲ್ಲ- ರಾಜು ಧೂಳಿ
ದಾಂಡೇಲಿ:ಹಳಿಯಾಳ-ಜೊಯಿಡಾ ವಿಧಾನ ಸಭಾ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಪಕ್ಷದ ಅಭ್ಯರ್ಥಿ ಬಗ್ಗೆ ಯಾವುದೆ ಗೊಂದಲವಿಲ್ಲ. ಪಕ್ಷದ ವರಿಷ್ಟರು ಯಾರನ್ನು ಅಭ್ಯರ್ಥಿಯನ್ನಾಗಿಸಿದರೂ ಪಕ್ಷದ ಗೆಲುವಿಗಾಗಿ ಹಗಲಿರುಳು ಶ್ರಮಿಸಲು ಟೊಂಕಕಟ್ಟಿದ್ದೇವೆ. ಇತ್ತೀಚೆಗೆ ಪಕ್ಷಕ್ಕೆ ಸೇರ್ಪಡೆಗೊಂಡ ಜಿ.ಆರ್.ಪಾಟೀಲರು ಕ್ಷೇತ್ರದಲ್ಲಿ ಸಂಚರಿಸಿ ತಾನೇ ಅಭ್ಯರ್ಥಿ ಎಂದು ಎಲ್ಲಿಯೂ ಹೇಳಿಕೊಂಡಿಲ್ಲ. ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ. ಈ ಬಗ್ಗೆ ಯಾವುದೆ ಗೊಂದಲಬೇಡ ಎಂದು ಬಿಜೆಪಿ … [Read more...] about ಪಕ್ಷದ ಅಭ್ಯರ್ಥಿ ಬಗ್ಗೆ ಗೊಂದಲವಿಲ್ಲ- ರಾಜು ಧೂಳಿ
ದಾಂಡೇಲಿ ತಾಲೂಕು ಸಮಗ್ರ ಅಭಿವೃದ್ಧಿಯ ಹೋರಾಟ ಸಮಿತಿಯ ಉದ್ಘಾಟನೆ
ದಾಂಡೇಲಿ :ನಗರದ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ದಾಂಡೇಲಿ ತಾಲೂಕು ಸಮಗ್ರ ಅಭಿವೃದ್ಧಿಯ ಹೋರಾಟ ಸಮಿತಿಯ ಉದ್ಘಾಟನಾ ಸಮಾರಂಭ ನೆರವೇರಿತು. ಉತ್ತರ ಕರ್ನಾಟಕ ಸಮಗ್ರ ಅಭಿವೃದ್ಧಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾಗೂ ಕಾರ್ಮಿಕರ ಮುಖಂಡರಾದ ಎಂ.ಬಿ ಕಟ್ಟಿ ಸಮಿತಿಯ ಉದ್ಘಾಟನೆ ನೆರವೇರಿಸಿ ಸಮಿತಿಯೂ ಪಕ್ಷಾತೀತವಾಗಿ ಹಾಗೂ ಜಾತಾತೀತವಾಗಿ ಕಾರ್ಯ ನಿರ್ವಹಿಸಿ ದಾಂಡೇಲಿ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ಶ್ರಮಿಸಲು ಮುಂದಾಗಲಿ ಎಂದರು. ಮುಖ್ಯ … [Read more...] about ದಾಂಡೇಲಿ ತಾಲೂಕು ಸಮಗ್ರ ಅಭಿವೃದ್ಧಿಯ ಹೋರಾಟ ಸಮಿತಿಯ ಉದ್ಘಾಟನೆ
ದಾಂಡೇಲಿಯಲ್ಲಿ ರೂ. 500 ಕೋಟಿ ವೆಚ್ಚದಲ್ಲಿ ಶ್ರೇಷ್ಠತಾ ಕೇಂದ್ರದ ಸ್ಥಾಪನೆ : ಆರ್‍ವಿಡಿ
ದಾಂಡೇಲಿ :ನಗರದ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರ(ಜಿಟಿಟಿಸಿ)ವನ್ನು ರಾಜ್ಯ ಸರ್ಕಾರದ ಹಾಗೂ ಬೆಂಗಳೂರಿನ ಸೀಮೆನ್ಸ್ ಇಂಡಸ್ಟೀ ಸಾಫ್ಟವೇರ್ ಉದ್ಯಮದ ಸಹಯೋಗದಲ್ಲಿ ಶ್ರೇಷ್ಠತಾ ಕೇಂದ್ರವಾಗಿ ಅಭಿವೃದ್ಧಿಗೊಳಿಸಲಾಗುವುದೆಂದು ಸಚಿವ ಆರ್.ವಿ ದೇಶಪಾಂಡೆ ನುಡಿದರು. ಅವರು ನಗರದಲ್ಲಿ ಸ್ಥಳೀಯ ಜಿಟಿಟಿಸಿ ಕೇಂದ್ರದಲ್ಲಿ ಸಂಸ್ಥೆಯ ಹಿರಿಯ ಅಧಿಕಾರಿಗಳು ಹಾಗೂ ಸೀಮನ್ಸ್‍ನ ಉನ್ನತ ಉತ್ಪಾದನಾ ಘಟಕದ ಮುಖ್ಯಸ್ಥರೊಂದಿಗೆ ಶ್ರೇಷ್ಠತೆ ಕೇಂದ್ರ ಸ್ಥಾಪನೆಯ ಪ್ರಗತಿ … [Read more...] about ದಾಂಡೇಲಿಯಲ್ಲಿ ರೂ. 500 ಕೋಟಿ ವೆಚ್ಚದಲ್ಲಿ ಶ್ರೇಷ್ಠತಾ ಕೇಂದ್ರದ ಸ್ಥಾಪನೆ : ಆರ್‍ವಿಡಿ
ಜೂನ್: 21 ಕ್ಕೆ ಯೋಗ ಕಾರ್ಯಕ್ರಮ
ದಾಂಡೇಲಿ;ಅಂತರಾಷ್ಟ್ರೀಯ ಯೋಗ ದಿನಾಚರಣೆಯ ನಿಮಿತ್ತ ನಗರದ ಅರಿವು ಫೌಂಡೇಶನ್ ಆಶ್ರಯದಲ್ಲಿ ಜೂನ್: 21 ರಂದು ಬೆಳಿಗ್ಗೆ 6.30 ರಿಂದ 8 ಗಂಟೆಯವರೆಗೆ ಸ್ಥಳೀಯ ಸುಭಾಸ ನಗರದಲ್ಲಿರುವ ಒಳ ಕ್ರೀಡಾಂಗಣದಲ್ಲಿ ಯೋಗ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕಾಗದ ಕಾರ್ಖಾನೆಯ ಮಾನವ ಸಂಪನ್ಮೂಲ ವಿಭಾಗದ ಉಪಾಧ್ಯಕ್ಷ ಎಸ್.ಎನ್.ಪಾಟೀಲ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಅಂಕಣಕಾರ ಹಾಗೂ ಉಪನ್ಯಾಸಕ ಡಾ: ಆರ್.ಜಿ.ಹೆಗಡೆ, ಡಿವೈಎಸ್ಪಿ ಡಿ.ಎಸ್.ಪವಾರ್, ಹಿರಿಯ ವಕೀಲ … [Read more...] about ಜೂನ್: 21 ಕ್ಕೆ ಯೋಗ ಕಾರ್ಯಕ್ರಮ