ಕಾರವಾರ: ಬ್ಯಾಂಕ್ ಸಿಬ್ಬಂದಿ ಸಹಕಾರದಿಂದ ಮಲ್ಲಾಪುರ ಸಿಂಡಿಕೇಟ್ ಬ್ಯಾಂಕ್ನ ಗ್ರಾಹಕರು ನಕಲಿ ಚಿನ್ನಾಭರಣಗಳ ಮೇಲೆ ಲಕ್ಷಾಂತರ ರೂ ಸಾಲ ಪಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸಿಂಡಿಕೇಟ್ ಬ್ಯಾಂಕ್ ನವರು ರಾಮಚಂದ್ರ ಶೇಟ್ ಎಂಬಾತರನ್ನು ಆಭರಣ ಪರೀಕ್ಷೆಗಾಗಿ ನೇಮಿಸಿಕೊಂಡಿದ್ದರು. ಗ್ರಾಹಕರು ಅಡವಿಡುವ ನಕಲಿ ಬಂಗಾರವನ್ನು ಕೂಡ ಅಸಲಿ ಎಂದು ಪ್ರಮಾಣಿಕರಿಸಿ ಸಾಲಕ್ಕಾಗಿ ಶಿಫಾರಸ್ಸು ಮಾಡುತ್ತಿದ್ದ ಆರೋಪ ರಾಮಚಂದ್ರ ಶೇಟ್ ಮೇಲಿದೆ. ಆರೋಪಿಯೇ ಕೆಲ ಗ್ರಾಹಕರನ್ನು … [Read more...] about ನಕಲಿ ಚಿನ್ನಾಭರಣಗಳ ಮೇಲೆ ಲಕ್ಷಾಂತರ ರೂ ಸಾಲ
ಮೇಲೆ
ಅರ್ಚಕರ ನಾಲ್ವರು ಪುತ್ರಿಯರ ಮೇಲೆ ಮಾರಣಾಂತಿಕವಾಗಿ ಹಲ್ಲೆ
ಕಾರವಾರ: ಅರ್ಚಕರ ಮೇಲೆ ದ್ವೇಷದ ಕಾರಣ ದೇವಸ್ಥಾನ ಆಡಳಿತ ಮಂಡಳಿ ಕೆಲ ಸದಸ್ಯರು ಅರ್ಚಕರ ನಾಲ್ವರು ಪುತ್ರಿಯರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಅವರ್ಸಾದ ಭೂದೇವಿ ದೇವಸ್ಥಾನ ಆವರಣದಲ್ಲಿ ಸಂಭವಿಸಿದೆ. ಕಳೆದ ಕೆಲವು ದಿನಗಳ ಹಿಂದೆ ತಾಯಿಯ ಪುಣ್ಯತಿಥಿಗಾಗಿ ಹೊನ್ನಾವರದಿಂದ ಅಂಕೋಲಾ ತಾಲೂಕಿನ ಅವರ್ಸಾದ ತವರು ಮನೆಗೆ ಆಗಮಿಸಿದ್ದ ಅನುಸೂಯಾ, ಶಂಕರಿ, ಜಯಲಕ್ಮಿ, ಸುಮಂಗಲಾ ಎಂಬಾತರ ಮೇಲೆ ಹಲ್ಲೆ ನಡೆದಿದೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಭೂದೇವಿ ದೇವಸ್ಥಾನ ಅರ್ಚಕ … [Read more...] about ಅರ್ಚಕರ ನಾಲ್ವರು ಪುತ್ರಿಯರ ಮೇಲೆ ಮಾರಣಾಂತಿಕವಾಗಿ ಹಲ್ಲೆ
ಮೂರು ಪ್ರಕರಣಗಳನ್ನು ನ್ಯಾಯಾಲಯ ವಜಾ
ಕುಮಟಾ: ಬರ್ಗಿಯಲ್ಲಿರುವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಹಿಂದಿನ ಮೋಕೇಸ್ತರು ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ದಾಖಲಿಸಿದ್ದ ಐದು ಪ್ರಕರಣಗಳ ಪೈಕಿ ಮೂರು ಪ್ರಕರಣಗಳನ್ನು ನ್ಯಾಯಾಲಯ ವಜಾ ಮಾಡಿದೆ. ಮಹಾಲಿಂಗೇಶ್ವರ ದೇವಸ್ಥಾನವೂ ಮುಜರಾಯಿ ಇಲಾಖೆಗೆ ಸೇರಿದ್ದಾಗಿದ್ದು, 2018ರ ಸೆಪ್ಟೆಂಬರ್ 8ರಂದು ಮುಜರಾಯಿ ಇಲಾಖೆಯ ಸಹಾಯಕ ಆಯುಕ್ತರು ಹೊಸದಾಗಿ ವ್ಯವಸ್ಥಾಪನಾ ಸಮಿತಿ ರಚಿಸಿದ್ದರು. 2017ರ ಅಗಷ್ಟ್ 22 ರಂದು ಪುನ: ನೂತನ ಸಮಿತಿ ಅಸ್ತಿತ್ವಕ್ಕೆ ಬಂದಿದೆ. ಹಿಂದಿನ … [Read more...] about ಮೂರು ಪ್ರಕರಣಗಳನ್ನು ನ್ಯಾಯಾಲಯ ವಜಾ
ರೋಗಿಗಳನ್ನು ಮಲಗಿಸುವ ಹಾಸಿಗೆಗಳ ಮೇಲೆ ಆಶ್ರಯ ಪಡೆದಿರುವ ಬೆಕ್ಕುಗಳು
ಕಾರವಾರ: ಇಲ್ಲಿನ ಜಿಲ್ಲಾಸ್ಪತ್ರೆಯ ಸಿಬ್ಬಂದಿ ನಿರ್ಲಕ್ಷದಿಂದ ರೋಗಿಗಳಿಗೆ ಸರಿಯಾದ ಚಿಕಿತ್ಸೆ ದೊರೆಯುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಇದರ ಬೆನ್ನಲ್ಲೆ ಜಿಲ್ಲಾಸ್ಪತ್ರೆಯಲ್ಲಿ ರೋಗಗಳನ್ನು ಮಲಗಿಸುವ ಹಾಸಿಗಗಳ ಮೇಲೆ ಬೆಕ್ಕುಗಳು ಮಲಗಿರುವ ಚಿತ್ರ ವೈರಲ್ ಆಗಿದೆ. ನಗರದ ಹಬ್ಬುವಾಡ ನಿವಾಸಿ ಸತ್ಯಾನಂದ ಪ್ರಭು ಎಂಬಾತರು ಈಚೆಗೆ ಮಗನೊಂದಿಗೆ ಬೈಕ್ನಲ್ಲಿ ತೆರಳುತ್ತಿದ್ದಾಗ ಅಪಘಾತವಾಗಿತ್ತು. ಪರಿಣಾಮ ಅವರು ಹಾಗೂ ಪುತ್ರ ಗಾಯಗೊಂಡಿದ್ದರು. ಹೀಗಾಗಿ ಜಿಲ್ಲಾಸ್ಪತ್ರೆಗೆ … [Read more...] about ರೋಗಿಗಳನ್ನು ಮಲಗಿಸುವ ಹಾಸಿಗೆಗಳ ಮೇಲೆ ಆಶ್ರಯ ಪಡೆದಿರುವ ಬೆಕ್ಕುಗಳು
ನೆತ್ರಾಣಿ ನಡುಗಡ್ಡೆ ಮೇಲೆ ಶಸ್ತ್ರಾಭ್ಯಾಸ
ಕಾರವಾರ: ಕಾರವಾರ ನೌಕಾನೆಲೆಯ ಸಿಬ್ಬಂದಿಗಳು ಸೆಪ್ಟಂಬರ್ 4 ಮತ್ತು 5 ರಂದು ನೆತ್ರಾಣಿ ನಡುಗಡ್ಡೆ ಮೇಲೆ ಬೆಳಗ್ಗೆ 10 ರಿಂದ 12 ರವರೆಗೆ ಮತ್ತು ಮದ್ಯಾಹ್ನ 3.30 ರಿಂದ ಸಂಜೆ 5.30 ರವರೆಗೆ ಶಸ್ತ್ರಾಭ್ಯಾಸ ನಡೆಸಲಿದ್ದಾರೆ. ಮೀನುಗಾರರು ಈ ಅವದಿಯಲ್ಲಿ ನೆತ್ರಾಣಿ ನಡುಗಡ್ಡೆ ಪ್ರದೇಶದಿಂದ 16 ನಾಟಿಕಲ್ ಮೈಲು ದೂರದಲ್ಲಿರುವಂತೆ ನೌಕಾನೆಲೆಯ ಅಧಿಕಾರಿಗಳು ತಿಳಿಸಿದ್ದಾರೆ. … [Read more...] about ನೆತ್ರಾಣಿ ನಡುಗಡ್ಡೆ ಮೇಲೆ ಶಸ್ತ್ರಾಭ್ಯಾಸ