ಹೊನ್ನಾವರ:ಪಟ್ಟಣದ ಮಾರ್ಥೋಮಾ ಶಾಲೆಯ ವಿದ್ಯಾರ್ಥಿನಿ ಪ್ರಮಥಾ ಜಿ. ಭಟ್ಟ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ 625 ಕ್ಕೆ 623 ಅಂಕ (ಶೇ. 99.68) ಗಳಿಸಿ ರಾಜ್ಯಕ್ಕೆ ಮೂರನೇ ಸ್ಥಾನ ಪಡೆದಿದ್ದಾಳೆ. ಹೊನ್ನಾವರದ ಎಸ್‍ಡಿಎಂ ಕಾಲೇಜಿನಲ್ಲಿ ಹಾಗೂ ಪ್ರಸ್ತುತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಡಾ. ಜಿ.ಎನ್.ಭಟ್ಟ ಹಾಗೂ ಮಾರ್ಥೋಮಾ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಶಾಂತಿ ಭಟ್ಟ ಅವರ ಪುತ್ರಿಯಾಗಿರುವ … [Read more...] about ಪ್ರಮಥಾ ಭಟ್ಟಗೆ ,ಶೇ. 99.68 ಫಲಿತಾಂಶ
ರಾಜ್ಯ
ಉತ್ತರಕನ್ನಡ ಜಿಲ್ಲೆಯ ಮೂರು ವಿದ್ಯಾರ್ಥಿಗಳು 624 ಅಂಕ ಪಡೆದು ಸಾಧನೆ
ಕುಮಟಾ : ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟವಾಗಿದ್ದು ಜಿಲ್ಲೆಯ ಮೂವರು ವಿಧ್ಯಾರ್ಥಿಗಳು 625 ಕ್ಕೆ 624 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ದ್ವಿತೀಯ ಸ್ಥಾನ ಗಳಿಸಿದ್ದಾರೆ. ನಂದಿನಿ ಎಮ್ ನಾಯ್ಕ್ (ನಿರ್ಮಲಾ ಕೊನ್ಮೆಂಟ್ ಕುಮಟಾ)ಈಶ್ವರ್ ಸಾಂತಾರಾಮ್ (ಪ್ರಗತಿ ವಿದ್ಯಾಲಯ ಮುರೂರ್ ಕುಮಟಾ)ಹೇಮಂತ್ ಲಕ್ಷ್ಮೀನಾರಾಯಣ ರಾಜರಾಜೇಶ್ವರಿ ಹೈಸ್ಕೂಲ್ ಮಂಚಿಕೇರಿ.ಯಲ್ಲಾಪುರರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ … [Read more...] about ಉತ್ತರಕನ್ನಡ ಜಿಲ್ಲೆಯ ಮೂರು ವಿದ್ಯಾರ್ಥಿಗಳು 624 ಅಂಕ ಪಡೆದು ಸಾಧನೆ
ಮೇ 14 ರಂದು ಇ.ಪಿ.ಎಫ್. ಪಿಂಚಣಿದಾರರ ರಾಜ್ಯ ಮಟ್ಟದ ಮಹಾಸಭೆ
ಕಾರವಾರ:ನಗರದ ಕನ್ನಡ ಭವನದಲ್ಲಿ ಮೇ 14 ರಂದು ಇ.ಪಿ.ಎಫ್. ಪಿಂಚಣಿದಾರರ ರಾಜ್ಯ ಮಟ್ಟದ ಮಹಾಸಭೆಯನ್ನು ಆಯೋಜಿಸಲಾಗಿದೆ ಎಂದು ಭಾರತ್ ಆರ್.ಟಿ.ಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಬು ಜೆ. ಅಂಬಿಗ ತಿಳಿಸಿದ್ದಾರೆ. ಸಭೆಗೆ ರಾಜ್ಯಾಧ್ಯಕ್ಷ ಜೈಶಂಕರ ರೆಡ್ಡಿ, ಕಾರ್ಯಾಧ್ಯಕ್ಷ ಕೆ.ಪಿ.ಮಂದಾಲೆ, ಕೊಟರೆ ಗೌಡ ಮೊದಲಾದ ಪದಾಧಿಕಾರಿಗಳು ಆಗಮಿಸಲಿದ್ದಾರೆ. ಈ ಸಭೆಗೆ ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳು ಹಾಗೂ ಗೋವಾ ರಾಜ್ಯದ ಎಲ್ಲ ಇ.ಪಿ.ಎಫ್ ಪಿಂಚಣಿದಾರರು ಹಾಗೂ … [Read more...] about ಮೇ 14 ರಂದು ಇ.ಪಿ.ಎಫ್. ಪಿಂಚಣಿದಾರರ ರಾಜ್ಯ ಮಟ್ಟದ ಮಹಾಸಭೆ
32 ವೇಸ್ ಟು ಲೀಡ್ ಸ್ಮಾರ್ಟ ಲೈಫ್” ಎಂಬ ವಿದ್ಯುನ್ಮಾನ ಇ-ಪುಸ್ತಕ ಬಿಡುಗಡೆ
ಭಟ್ಕಳ:ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನ ಉಪನ್ಯಾಸಕರು, ರ್ಯಾಂಕ್ ವಿಜೇತರು ಹಾಗೂ ವಿದ್ಯಾರ್ಥಿಗಳು ಒಡಗೂಡಿ ರಚಿಸಿದ "32 ವೇಸ್ ಟು ಲೀಡ್ ಸ್ಮಾರ್ಟ ಲೈಫ್" ಎಂಬ ವಿದ್ಯುನ್ಮಾನ ಇ-ಪುಸ್ತಕವನ್ನು ಬೆಂಗಳೂರಿನ ವಿವಿಧ್ ಸ್ಪೇಸ್ ಕಂಪನಿಯ ಪ್ರಧಾನ ತಂತ್ರಜ್ಞರಾದ ವಿನಾಯಕ ಶಾನಭಾಗ ಬಿಡುಗಡೆಗೊಳಿಸಿದರು. 32 ಲೇಖಕರು ರಚಿಸಿದ 32 ವಿಷಯಗಳನ್ನೊಳಗೊಂಡ ಪಿ.ಡಿ.ಎಫ್. ಮಾದರಿಯ "ಇ" ಪುಸ್ತಕ ಹೊಂದಿದ್ದು, ಕೇಂದ್ರ, ರಾಜ್ಯ ಸರಕಾರ ಹಾಗೂ ಸರಕಾರೇತರ ಸಂಸ್ಥೆಗಳು … [Read more...] about 32 ವೇಸ್ ಟು ಲೀಡ್ ಸ್ಮಾರ್ಟ ಲೈಫ್” ಎಂಬ ವಿದ್ಯುನ್ಮಾನ ಇ-ಪುಸ್ತಕ ಬಿಡುಗಡೆ
ಭಟ್ಕಳ,ಕಾರ್ಮಿಕರ ದಿನಾಚರಣೆ ಆಚರಣೆ
ಭಟ್ಕಳ:ದೇಶದ ಅಭಿವೃದ್ಧಿಗಾಗಿ ಯಾರೆಲ್ಲ ಶ್ರಮಿಸುತ್ತಿದ್ದಾರೋ ಅಂತಹವರಿಗಾಗಿ ಕಾರ್ಮಿಕರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದು ತಾಲೂಕು ಕಾನೂನು ಸೇವಾ ಸಮಿತಿ ಚೇರ್‍ಮೆನ್ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ರಾಘವೇಂದ್ರ ಡಿ. ಹೇಳಿದರು. ಅವರು ಇಲ್ಲಿನ ಸತ್ಕಾರ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಸಮಿತಿ, ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಭಟ್ಕಳ, ಅಭಿಯೋಜನೆ ಇಲಾಖೆ, ಕಾರ್ಮಿಕರ ಇಲಾಖೆ, ಮಹಿಳಾ … [Read more...] about ಭಟ್ಕಳ,ಕಾರ್ಮಿಕರ ದಿನಾಚರಣೆ ಆಚರಣೆ