ಯಾರಿಗೆಲ್ಲಾ ಏನೆಲ್ಲಾ ಸೌಲಭ್ಯ ನೀಡಿದ್ದಾರೆ ಎಂಬುದನ್ನು ಅವರೇ ವಿವರಿಸಿದ್ದಾರೆ ಕೇಳಿ … [Read more...] about ವಿಶೇಷ ಪ್ಯಾಕೇಜ್ ;ಸಿಎಂ ಯಡಿಯೂರಪ್ಪ ಘೋಷಣೆ
Trending
ಗಾಳಿ ಮಳೆಗೆ ನೆಲಕಚ್ಚಿದ ಬಾಳೆ ಅಂದಾಜು 4-5 ಲಕ್ಷ ಬೆಳೆ ಹಾನಿ
ಭಟ್ಕಳ: ಇಷ್ಟುದಿನ ಜನರು ಕೋರೊನಾದಿಂದ ಸಂಕಷ್ಟ ಅನುಭವಿಸುತ್ತಿದ್ದು ಈಗ ವಾತಾವರಣದ ವೈಪರೀತ್ಯದಿಂದ ಉಂಟಾದ ತೌಕ್ತೆ ಹೆಸರಿನ ಚಂಡಮಾರುತದ ಪರಿಣಾಮದಿಂದಾಗಿ ಭಟ್ಕಳದ ಬೈಲೂರಿನ ಕ್ರಷಿಕನೋರ್ವರ ಒಂದೂವರೆ ಎಕರೆ ಜಮೀನಿನಲ್ಲಿ ಬೆಳೆದ ನೆಂದ್ರಾ ಬಾಳೆ ಗಾಳಿ ಮಳೆಗೆ ಸಂಪೂರ್ಣ ನೆಲಕಚ್ಚಿದ್ದು, ಸಾಲ ಮಾಡಿ ಬೆಳೆ ಹಾಕಿದ ರೈತನಿಗೆ ಲಕ್ಷಾಂತರ ರೂ.ನಷ್ಟ ಅನುಭವಿಸುವ ಪರಿಸ್ಥಿತಿ ಎದುರಾದಂತಾಗಿದೆ.ಸತತ ಎರಡನೇ ವರ್ಷ ಚಂಡಮಾರುತದ ಅಬ್ಬರ ಜನರನ್ನು ಕಂಗಾಲಾಗಿಸಿದ್ದು, ಈ ವರ್ಷ … [Read more...] about ಗಾಳಿ ಮಳೆಗೆ ನೆಲಕಚ್ಚಿದ ಬಾಳೆ ಅಂದಾಜು 4-5 ಲಕ್ಷ ಬೆಳೆ ಹಾನಿ
ತೌಕ್ತೆ ಚಂಡಮಾರುತದಿಂದ ಹಾನಿ ಸಂಭವಿಸಿದ ಪ್ರದೇಶಗಳಿಗೆ ಶಾಸಕ ಸುನೀಲ ನಾಯ್ಕ ಭೇಟಿ
ಹೊನ್ನಾವರ ; ತಾಲೂಕಿನ ಕಾಸರಕೋಡ್ ಟೊಂಕಾ ಭಾಗದಲ್ಲಿ ತೌಕ್ತೆ ಚಂಡಮಾರುತದಿಂದ ಹಾನಿ ಸಂಭವಿಸಿದ ಪ್ರದೇಶಗಳಿಗೆ ಶಾಸಕ ಸುನೀಲ ನಾಯ್ಕ ಭೇಟಿ ನೀಡಿದರು. ಸೋಮವಾರ ಟೊಂಕಾ ಭಾಗದಲ್ಲಿ ಹಾನಿಗೊಳಗಾದ ಮನೆ ಹಾಗೂ, ಮೀನುಗಾರಿಕಾ ಬಂದರು ಪ್ರದೇಶದ ಪರಿಕರಗಳನ್ನು ವೀಕ್ಷಿಸಿದ ಶಾಸಕರು ಹಾನಿ ಅಂದಾಜು ಪರೀಶೀಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲು ಕಂದಾಯ ಇಲಾಖೆಗೆ ಸೂಚಿಸಿದರು.ತಾಲೂಕಿನ ಮಂಕಿ, ಕಾಸರಕೋಡ್, ಟೊಂಕಾ ಭಾಗದಲ್ಲಿ ಚಂಡಮಾರುತದ ಗಾಳಿ, ಮಳೆಯಿಂದ ಮನೆಗಳಿಗೆ ಹಾನಿ … [Read more...] about ತೌಕ್ತೆ ಚಂಡಮಾರುತದಿಂದ ಹಾನಿ ಸಂಭವಿಸಿದ ಪ್ರದೇಶಗಳಿಗೆ ಶಾಸಕ ಸುನೀಲ ನಾಯ್ಕ ಭೇಟಿ
ತೌಕ್ತೆ ಚಂಡಮಾರುತ ಅಬ್ಬರ:ದೋಣಿಗಳ ನಡುವೆ ಸಿಲುಕಿ ಮೀನುಗಾರ ಸಾವು
ಭಟ್ಕಳ: ತೌಕ್ತೆ' ಚಂಡಮಾರುತ ಪ್ರಭಾವದಿಂದ ಅರಬ್ಬಿ ಸಮುದ್ರದಲ್ಲಿ ಭಾರಿ ಗಾತ್ರದ ಅಲೆಗಳು ಏಳುತ್ತಿವೆ. ಭಟ್ಕಳದ ಜಾಲಿಕೋಡಿಯಲ್ಲಿ ನೀರು ಪಾಲಾಗುತ್ತಿದ್ದ ದೋಣಿಯನ್ನು ದಡಕ್ಕೆ ತರಲು ಹೋದ ಮೀನುಗಾರ, ಎರಡು ದೋಣಿಗಳ ನಡುವೆ ಸಿಲುಕಿ ಮೃತಪಟ್ಟಿದ್ದಾರೆ .ಜಾಲಿಕೋಡಿ ನಿವಾಸಿ ಲಕ್ಷ್ಮಣ ಈರಪ್ಪ ನಾಯ್ಕ (60) ಮೃತರು. ದಡದಲ್ಲಿ ಲಂಗರು ಹಾಕಿದ್ದ ದೋಣಿಯೊಂದು ಅಲೆಗಳ ಹೊಡೆಕ್ಕೆ ನೀರು ಪಾಲಾಗುತ್ತಿತ್ತು. ಅದನ್ನು ತಡೆದು ದಡದಿಂದ ಮೇಲೆ ತರಲು ಅವರು ನೀರಿಗೆ ಇಳಿದ್ದರು. ಆಗ … [Read more...] about ತೌಕ್ತೆ ಚಂಡಮಾರುತ ಅಬ್ಬರ:ದೋಣಿಗಳ ನಡುವೆ ಸಿಲುಕಿ ಮೀನುಗಾರ ಸಾವು
ಮೀನುಗಾರಿಕೆಗೆ ತೆರಳಿ ಮುಳುಗುತ್ತಿದ್ದ ಪಾತಿ ದೋಣಿಯ ರಕ್ಷಣೆ
ಭಟ್ಕಳ : ತಾಲ್ಲೂಕಿನ ಆಳ್ವೇಕೋಡಿಯಿಂದ ಮೀನುಗಾರಿಕೆಗೆ ತೆರಳಿದ ಪಾತಿದೋಣಿಯೊಂದು ಕಾಗೆಗುಡ್ಡ ಸಮೀಪದಲ್ಲಿ ಗಾಳಿಯ ಹೊಡೆತಕ್ಕೆ ಸಿಲುಕಿ ಮುಳುಗುತ್ತಿದ್ದಾಗ ಕರಾವಳಿ ಕಾವಲು ಪಡೆಯ ಪೊಲೀಸರು ರಕ್ಷಣೆ ಮಾಡಿದ್ದಾರೆ. ಆಳ್ವೇಕೋಡಿ ಸಮುದ್ರ ತೀರದಿಂದ ಮೀನುಗಾರಿಕೆ ತೆರಳಿದ ಶಿರಾಲಿ ಮೊಗೇರಕೇರಿ ನಿವಾಸಿ ಮಂಜುನಾಥ ಬೈರಾ ಮೊಗೇರ ಎನ್ನುವವರ ಪಾತಿದೋಣಿ ಕಾಗೆಗುಡ್ಡ ಸಮೀಪ ಗಾಳಿಯ ಹೊಡೆತಕ್ಕೆ ಸಿಲುಕಿ ಮುಳುಗಡೆಯಾಗಿತ್ತು. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಕರಾವಳಿ … [Read more...] about ಮೀನುಗಾರಿಕೆಗೆ ತೆರಳಿ ಮುಳುಗುತ್ತಿದ್ದ ಪಾತಿ ದೋಣಿಯ ರಕ್ಷಣೆ




