ಹೊನ್ನಾವರ/ಕರ್ಕಿ:
ಡಾ ಭೀಮರಾವ ಅಂಬೇಡ್ಕರರವರ 126 ನೇ ಪುಣ್ಯತಿಥಿಯ ಅಂಗವಾಗಿ ಕರ್ಕಿಯ ಚನ್ನಕೇಶವ ಪ್ರೌಢಶಾಲೆಯ ಆವರಣದಲ್ಲಿ (14-4-17) ಇತ್ತೀಚೆಗೆ ನಾದನಮನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ತಾಲೂಕಿನ ಹಿಂದು ಮುಕ್ರಿ ಸಮಾಜ ಹಿತರಕ್ಷಣಾ ಅಭಿವೃದ್ಧಿ ಸಂಘದ ವತಿಯಿಂದ ಹಮ್ಮಿಕೊಂಡ ವೇದಿಕೆಯಲ್ಲಿ ಕತಗಾಲದ ರೋಹಿಣಿ ಭಟ್ಟರ ಭಕ್ತಿಗೀತೆ ಹಾಗು ಹೊನ್ನಾವರದ ವಿನೋದ ಮುಕ್ರಿಯವರಿಂದ ಬಾನ್ಸುರಿ ವಾದನ ಗಮನಸೆಳೆಯಿತು.
ಕತಗಾಲದ ಕಲಾಶ್ರೀ ಸಾಂಸ್ಕøತಿಕ ವೇದಿಕೆಯ ಅಧ್ಯಕ್ಷ, ಸಂಸ್ಕøತ-ಸಂಗೀತ ವಿದ್ವಾನ್ ಡಾ ಕೆ ಗಣಪತಿ ಭಟ್ಟರ ಮಾರ್ಗದರ್ಶನ ಹಾಗು ಕವಲಕ್ಕಿಯ ರಾಘವೇಂದ್ರ ಭಾರತಿ ಸಂಸ್ಕøತ ಮಹಾವಿದ್ಯಾಲಯದ ಉದ್ಯೋಗಿ ಈಶ್ವರ ಮುಕ್ರಿಯವರ ಸಂಯೋಜಕತ್ವದಲ್ಲಿ ಜರುಗಿದ ಸಂಗೀತ ಸಮಾರಾಧನೆಯ ಆರಂಭದಲ್ಲಿ ವಿನೋದ ಮುಕ್ರಿಯವರು ಹಂಸಧ್ವನಿ ರಾಗದಲ್ಲಿ ಮುತ್ತುಸ್ವಾಮಿ ದೀಕ್ಷಿತರ ಕೃತಿ ವಾತಾಪಿ ಗಣಪತಿಂ ಭಜೇ ಎಂಬ ಪದ್ಯವನ್ನು ಹಾಗು ಭೂಪರಾಗದಲ್ಲಿ ಧುನ್ ನುಡಿಸಿದರು.
ರೋಹಿಣಿ ಭಟ್ಟರು ಸರಸ್ವತಿ ರಾಗದಲ್ಲಿ ಜಯತಿ ಜಯತಿ ಶಾರದೇ ಎಂಬ ಪದ್ಯವನ್ನು ಏಕತಾಲದ ದ್ರುತ ಲಯದಲ್ಲಿ ಹಾಡಿದರು. ಯಮನರಾಗದಲ್ಲಿ ವೀಣಾಧರೆ ಶಾರದೆ ಪದ್ಯವನ್ನು ತೀನತಾಲದಲ್ಲಿ ಹಾಗು ಕನಕದಾಸರ ನೀ ಮಾಯೆಯೊಳಗೋ ಪದ್ಯವನ್ನು ಝಪತಾಲದಲ್ಲಿ, ಹಂಸಧ್ವನಿ ರಾಗದಲ್ಲಿ ರಸವತಿ ರಸನಾಲೋಲೇ ಎಂಬ ಸಂಸ್ಕøತಪದ್ಯವನ್ನು ಮತ್ತು ಮಾಲಕಂಸ ರಾಗದಲ್ಲಿ ಗಜಾನನ ಸುಖಕರ ಮಂಗಲ ಧಾಮ ಎಂಬ ಮರಾಠಿ ಅಭಂಗವನ್ನು ಭಜನಠೇಕಾ ತಾಲದಲ್ಲಿ ಹಾಡಿ ಸಂಸ್ಕøತಾಭಿಮಾನಿ ಡಾ ಅಂಬೇಡ್ಕರರಿಗೆ ನಾದಸೇವೆ ಸಮರ್ಪಿಸಿದರು. ಶಿಕ್ಷಕ ಹರಿಶ್ಚಂದ್ರ ನಾಯಕ ಸಂವಾದಿನಿ ಹಾಗು ಪ್ರದೀಪ ಕೋಟೆಮನೆ ತಬಲಾ ಸಾಥ ನೀಡಿದರು. ಸಂಘದ ಅಧ್ಯಕ್ಷ ಮಂಜುನಾಥ ಮುಕ್ರಿ ಕಲಾಕಾರರಿಗೆ ಗೌರವ ಸಮರ್ಪಿಸಿದರು.
Leave a Comment