ದಿನಾಂಕ:-13-4-17 ರಂದು ಶ್ರೀ ಆರ್ಯದುರ್ಗಾ ಗೆಳೆಯರ ಬಳಗ ಹಿಣಿಇವರಆಶ್ರಯದಲ್ಲಿಹಿಣಿಗ್ರಾಮದಕ್ರೀಡಾಂಗಣದಲ್ಲಿನಡೆದಕಬಡ್ಡಿ ಪಂದ್ಯಾವಳಿ ಅತ್ಯಂತಅದ್ಧೂರಿಯಲ್ಲಿಅನಾವರಣಗೊಂಡಿತು.
ಈ ಪಂದ್ಯಾವಳಿಯನ್ನು ಉದ್ಘಾಟಿಸಿದ ದಿನಕರ ಶೆಟ್ಟಿಅವರುಈ ಭಾಗದಲ್ಲಿತನ್ನಅವಧಿಯಲ್ಲಿತೆಗೆದುಕೊಂಡ ವಿವಿಧಅಭಿವೃದ್ಧಿಕಾರ್ಯಗಳಲ್ಲದೇ ಇನ್ನೂ ಹೆಚ್ಚಿನಅಭಿವೃದ್ಧಿಯಅಗತ್ಯವಿದೆಎಂದು ಪ್ರತಿಪಾದಿಸಿ ಈ ಪಂದ್ಯಾವಳಿಯನ್ನು ಆಯೋಜಿಸಿದ ಎಲ್ಲ ಸಂಘಟಕರನ್ನು ಅಭಿನಂದಿಸಿದರು.
ಇದೇ ಸಂದರ್ಭದಲ್ಲಿಕಾರ್ಯಕ್ರಮದಅಧ್ಯಕ್ಷರಾದ ಬೆಳಕು ಗ್ರಾಮೀಣಾಭಿವೃದ್ಧಿಟ್ರಸ್ಟ್ಅಧ್ಯಕ್ಷರಾದನಾಗರಾಜ ನಾಯಕತೊರ್ಕೆ ಮಾತನಾಡಿಕ್ರೀಡೆ ಮನುಷ್ಯನ ಅವಿಭಾಜ್ಯ ಅಂಗ.ಕ್ರೀಡೆಯಿಂದ ಮಾನಸಿಕ ಹಾಗೂ ದೈಹಿಕವಾಗಿ ಸದೃಢವಾಗಲು ಸಾಧ್ಯ ಅಷ್ಟೇ ಅಲ್ಲದೆಜೀವನದಲ್ಲಿ ಸೋಲು ಗೆಲವುಗಳಸಮಾನಮನೋಭಾವವನ್ನುಕ್ರೀಡೆ ತಿಳಿಸಿ ಕೊಡುತ್ತದೆ.ಹಿಂದುಳಿದ ವರ್ಗದವರನ್ನು ಹೊಂದಿರುವ ಈ ಹಿಂದುಳಿದ ಪ್ರದೇಶದಲ್ಲಿಅತ್ಯಂತಅದ್ಧೂರಿಯಾಗಿಕಾರ್ಯಕ್ರಮ ಸಂಘಟಿಸಿದ್ದಕ್ಕೆ ಈ ಯುವಕರನ್ನು,ಆರ್ಯದುರ್ಗಾ ಗೆಳೆಯರ ಬಳಗ ಹಿಣಿ ಸದಸ್ಯರನ್ನು ನಾಗರಿಕರನ್ನು ಮುಕ್ತ ಕಂಠದಿಂದ ಹಾರೈಸಿದರು.ಇಂತಹ ಕಾರ್ಯಕ್ರಮಗಳು ಹೆಚ್ಚು ನಡೆಯುವುದರಿಂದಯುವ ಪ್ರತಿಭೆಗೆ ಹೆಚ್ಚು ಅವಕಾಶ ನೀಡುವುದರಿಂದಜೀವನದಲ್ಲಿ ಸರ್ವಾಂಗೀಣವಾಗಿ ಮುಂದುವರಿಯಲು ಸಾಧ್ಯಎನ್ನುತ್ತ ಈ ಪಂದ್ಯಾವಳಿಗೆಯಶಸ್ಸನ್ನುಕೋರಿದರು.
ಈ ಸಂದರ್ಭದಲ್ಲಿರಾಜೇಶಎಮ್ ಹರಿಕಾಂತ, ಸೈನಿಕರು, ಹೊಲನಗದ್ದೆಇವರಿಗೆ ಸನ್ಮಾನಕಾರ್ಯಕ್ರಮಆಯೋಜಿಸಲಾಗಿತ್ತು.ಅಂಕಣಉದ್ಘಾಟಕರಾಗಿ ಸುಬ್ರಾಯಎಸ್ ವಾಳ್ಕೆ,ಟ್ರೋಫಿ ಅನಾವರಣಗೊಳಿಸಿದ ಪ್ರದೀಪ ನಾಯಕದೇವರಭಾವಿ,ಶ್ರೀಮತಿ ಪಾರ್ವತಿ ಪಟಗಾರ,ಸುನೀಲ ಎಸ್ ಹರಿಕಾಂತಇನ್ನಿತರರು ಉಪಸ್ಥಿತರಿದ್ದರು.
Leave a Comment