ಬೆಳ್ತಂಗಡಿ :
ಮಗಳ ಮದುವೆಯನ್ನು ಸಂಭ್ರಮದಿಂದ ನೋಡುತ್ತಾ ಸಂತಸದಲ್ಲಿದ್ದ ತಾಯಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ದಾರುಣ ಘಟನೆ ಗುರುವಾರ ನಡೆದಿದೆ .
ಬೆಳ್ತಂಗಡಿಯ ಪಿಲಿಗೂಡು ನಿವಾಸಿ ತನಿಯಪ್ಪ ಎನ್ನುವವರ ಪತ್ನಿ ವಾರಿಜಾ (50 ) ಎನ್ನುವವರು ಮಗಳ ಮದುವೆ ಮುಗಿದ ಬಳಿಕ ಕುಸಿದು ಬಿದ್ದಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲು ಕರೆದೊಯ್ಯಲಾಯಿತಾದರೂ ಮಾರ್ಗ ಮಧ್ಯೆ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು.
ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ನವ್ಯ ಮತ್ತು ಆನಂದ ಅವರ ವಿವಾಹ ನೆರವೇರಿತ್ತು . ಸಂಭ್ರಮದಿಂದ ನಲಿಯಬೇಕಾಗಿದ್ದ ಮನೆಯಲ್ಲೀಗ ಸೂತಕ ಆವರಿಸಿಕೊಂಡಿದೆ
Leave a Comment