ಕಾರವಾರ:
ಕಾರವಾರದ ಹಳೆ ಮೀನುಮಾರುಕಟ್ಟೆ ಸುತ್ತಮುತ್ತಲಿನ ಕಟ್ಟಡವನ್ನು ಇಂದು ಮುಂಜಾನೆ ನಗರ ಸಭೆ ಅಧಿಕಾರಿಗಳು ತೆರವು ಮಾಡಿದರು.
ಮಾರುಕಟ್ಟೆ ಸುತ್ತಮುತ್ತಲಿನ ಶಿಥಿಲಾವಸ್ಥೆಯಲ್ಲಿದ್ದ ಕಟ್ಟಡವನ್ನು ಸ್ಥಳೀಯ ವ್ಯಾಪಾರಿಗಳ ವಿರೋಧದ ನಡುವೆಯೆ ತೆರವು ಕಾರ್ಯಾಚರಣೆ ನಡೆಯಿತು.
ತೆರವು ಕಾರ್ಯಾಚರಣೆ ವಿರುದ್ಧ ಅನೇಕ ವ್ಯಾಪಾರಿಗಳು ಕೋರ್ಟನಿಂದ ತಡೆಯಾಜ್ಞೆ ತಂದಿದ್ದರು. ತಡೆಯಾಜ್ಞೆಯ ಅವಧಿ ಮುಗಿದ ತಕ್ಷಣ ಎಚ್ಚೆತ್ತ ಅಧಿಕಾರಿಗಳು ತೆರವು ಕಾರ್ಯಾಚರಣೆ ಆರಂಭಿಸಿದ್ದರು.
ಸ್ಥಳದಲ್ಲಿ ಬಿಗುವಿನ ವಾತಾವರಣವಿದ್ದ ಕಾರಣ ಪೋಲಿಸ್ ಬದ್ರತೆ ಒದಗಿಸಲಾಗಿತ್ತು. ಈ ಸ್ಥಳದಲ್ಲಿ ಇನ್ನೂ ಅನೇಕ ನಗರಸಭೆಗೆ ಸೇರಿದ ಶಿಥಿಲಾಸ್ಥೆಯ ಕಟ್ಟಡಗಳಿದ್ದು ಅದನ್ನು ತೆರವುಮಾಡಿ ಈ ಜಾಗದಲ್ಲಿ ಬಹುಕೋಟಿ ವೆಚ್ಚದ ವ್ಯಾಪಾರ ಸಂಕೀರ್ಣ ಮಾಡುವುದಾಗಿ ನಗರಸಭೆ ಉದ್ದೇಶಿಸಿದೆ. ಈ ಕುರಿತು ಸಭೆ ನಡೆದಿದ್ದು ನೀಲಿನಕ್ಷೆ ಸಿದ್ಧವಾಗಿದ್ದು ಕಟ್ಟಡದ ಕಾಮಗಾರಿಗೆ ಚಾಲನೆ ನೀಡಬೇಕಿದೆ

Leave a Comment