• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಉತ್ತರ ಕನ್ನಡ ಜಿಲ್ಲಾ 20ನೇ ಕನ್ನಡ ಸಾಹಿತ್ಯ ಸಮ್ಮೇಳನ

April 28, 2017 by Sachin Hegde Leave a Comment

ಹಳಿಯಾಳ:

ಮಹಾತ್ಮಾ ಗಾಂಧಿ ಗ್ರಾಮ, ನಿರ್ಮಲ ಗ್ರಾಮ ಪುರಸ್ಕಾರ ಪಡೆದಿರುವ ಮಧ್ಯ, ಗುಟಕಾ ಮುಕ್ತ ಗ್ರಾಮದಲ್ಲಿ ದಿ.29, 30 ಎರಡು ದಿನಗಳ ಕಾಲ ಉತ್ತರ ಕನ್ನಡ ಜಿಲ್ಲಾ 20ನೇ ಕನ್ನಡ ಸಾಹಿತ್ಯ ಸಮ್ಮೇಳನ ವಿಶಿಷ್ಠ ರೀತಿಯಲ್ಲಿ ಗ್ರಾಮೀಣ ಸೊಗಡನ್ನು ಬಿಂಬಿಸುವ ನಿಟ್ಟಿನಲ್ಲಿ ಹಾಗೂ ವಿಜೃಂಭಣೆಯಿಂದ ನಡೆಸಲು ಸಿದ್ದತೆಗಳು ಅಂತಿಮ ಹಂತದಲ್ಲಿದ್ದು ಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಪಟ್ಟಣದಿಂದ 5 ಕೀಮಿ ಅಂತರದಲ್ಲಿರುವ ತೇರಗಾಂವ ಗ್ರಾಮದಲ್ಲೇ ಅಕ್ಷರ ಜಾತ್ರೆ ನಡೆಯಲಿದ್ದು ಉತ್ತರ ಕನ್ನಡ ಜಿಲ್ಲೆಯ ಇತಿಹಾಸದಲ್ಲೇ ಗ್ರಾಮೀಣ ಭಾಗದಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ ಇದೆ ಮೊದಲ ಬಾರಿಗೆ ನಡೆಯುತ್ತಿದ್ದು ಇದರ ಕೀರ್ತಿಯು ತೇರಗಾಂವ ಗ್ರಾಮದ ಮುಡಿಗೆರಲಿದೆ.
ಸುಮಾರು 5500 ಜನಸಂಖ್ಯೆ ಹೊಂದಿರುವ ತೇರಗಾಂವ ಗ್ರಾಮ ತಾಲೂಕಿನ ದೊಡ್ಡ ಗ್ರಾಮವು ಆಗಿದ್ದು ಎಲ್ಲ ಸಮುದಾಯದ ಜನರು ಸಹಬಾಳ್ವೆಯಿಂದ ವಾಸಿಸುವ ಗ್ರಾಮದ ಜನರು ಕೃಷಿಯನ್ನೇ ಅವಲಂಬಿಸಿದ್ದು ಈ ಗ್ರಾಮದವರು ಮಾಡುವ ಮಾವಿನ ಕಸಿ, ಸಸಿ ಮಾರಾಟ ಹೆಸರುವಾಸಿಯಾಗಿದ್ದು ರಾಜ್ಯ ಹೊರ ರಾಜ್ಯಗಳಿಂದ ಇಲ್ಲಿಯ ಮಾವಿನ ಸಸಿಯನ್ನೇ ತೆಗೆದುಕೊಂಡು ಹೊಗುವುದು ಪ್ರಸಿದ್ದಿಯಾಗಿದೆ. ಸಾಕಷ್ಟು ಅಕ್ಷರಸ್ಥರನ್ನು, ಸುಶಿಕ್ಷಿತರನ್ನು ಹೊಂದಿರುವ ಗ್ರಾಮದಲ್ಲಿ ಯಾವುದೇ ಕಾರ್ಯಕ್ರಮವಿರಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹಬ್ಬದ ರೀತಿಯಲ್ಲಿ ಆಚರಿಸುವುದು ಇತರರಿಗೂ ಮಾದರಿಯಾಗಿದೆ.
ಕಳೆದ 2-3 ವರ್ಷಗಳ ಹಿಂದೆ ಗ್ರಾಮದ ಊರಿನ ಹಿರಿಯರ ನಿರ್ಣಯ ಹಾಗೂ ಯುವಕರ ಸಹಕಾರದಿಂದ ಇಂದು ತೇರಗಾಂವ ಗ್ರಾಮದಲ್ಲಿ ಮದ್ಯ ಹಾಗೂ ಗುಟಕಾ ಮಾರಾಟಕ್ಕೆ ಸಂಪೂರ್ಣ ನಿಷೇಧ ಹೇರಲಾಗಿದ್ದು ಗ್ರಾಮದ ಒಳಿತಿಗಾಗಿ, ಸಮಾಜದಲ್ಲಿ ಸಾಮರಸ್ಯಕ್ಕಾಗಿ ಇಲ್ಲಿ ಹಿರಿಯರ ಪಂಚಾಯತಿ ನಿರ್ಣಯವೆಂದರೇ ವೇದವಾಕ್ಯವೆನ್ನುವುದು ಅಷ್ಟೇ ಸತ್ಯ ಇಂತಹ ಗ್ರಾಮದಲ್ಲಿ ದಿ.29 ಹಾಗೂ 30 2 ದಿನಗಳ ಕಾಲ ವಿಶಿಷ್ಠ ರೀತಿಯಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಯಲಿದೆ.
ಪಟ್ಟಣ, ನಗರಗಳಿಗೆ ಮಾತ್ರ ಸೀಮಿತವಾಗಿದ್ದ ಜಿಲ್ಲಾ ಸಮ್ಮೇಳನಗಳನ್ನು ಗ್ರಾಮೀಣ ಭಾಗಕ್ಕೂ ವಿಸ್ತರಿಸಬೇಕೆನ್ನುವ ಮಹತ್ವಾಕಾಂಕ್ಷೆಯಿಂದ ಇದೆ ಮೊದಲ ಬಾರಿಗೆ ಗ್ರಾಮೀಣ ಭಾಗದಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು ಈಗಾಗಲೇ ಅಂತರ್ಜಾಲ ಮೂಲಕವು ಸಾಕಷ್ಟು ಪ್ರಚಾರ ನೀಡಲಾಗಿದ್ದು ಸಾಮಾಜಿಕ ಜಾಲತಾಣ ಫೇಸ್‍ಬುಕ್ ಮೂಲಕ ಕವಿಗೊಷ್ಠಿಯನ್ನು ಮಾಡಲಾಗಿರುವುದು ವಿಶೇಷವಾಗಿದೆ.
ಸಮ್ಮೇಳನಕ್ಕೆ 120*120 ಅಡಿ ಅಳತೆಯ ಬೃಹತ್ ಪೆಂಡಾಲ್, 40*30 ಅಳತೆಯ ದೊಡ್ಡ ಸುಂದರ ವೇದಿಕೆ ಸಿದ್ದವಾಗಿದ್ದು 5 ಸಾವಿರ ಜನ ಸೇರುವ ನೀರಿಕ್ಷೆ ಇದ್ದು 2 ದಿನಗಳ ಕಾಲ ಹೆಸರು ಬೆಳೆ ಹಾಗೂ ಗೊದಿ ಪಾಯಸವನ್ನೊಳಗೊಂಡ ಸಿಹಿ ಊಟ ಊಣ ಬಡಿಸುವ ನಿರ್ಣಯವನ್ನು ಸಮೀತಿ ಮಾಡಿದ್ದು 150 ಸಾಹಿತಿಗಳು ಪಾಲ್ಗೊಳ್ಳಲಿರುವ ಸಮ್ಮೇಳನದಲ್ಲಿ ಗ್ರಾಮೀಣ ಭಾರತದ ಸೊಗಡನ್ನು ಬಿಂಬಿಸಲು ಸಾಹಿತ್ಯ ಪರಿಷತ್‍ನವರು ಸೇರಿ ಪ್ರಮುಖ ಗ್ರಾಮಸ್ಥರು ಪಂಚೆ, ಪೇಟದೊಂದಿಗೆ ಗ್ರಾಮೀಣ ದಿರಿಸನ್ನು ತೊಡಲಿದ್ದು ಹೆಜ್ಜೆ ಮಜಲು, ಡೊಳ್ಳು ಕುಣಿತ, ಕರಡಿ ಮಜಲಿನೊಂದಿಗೆ ರೈತರ ಸಂಸ್ಕøತೀಯನ್ನು ಬಿಂಬಿಸಲು ಶೃಂಗಾರಗೊಂಡಿರುವ ಚಕ್ಕಡಿಗಳ ಸಾಲು, 100 ಮಹಿಳೆಯರಿಂದ ಕುಂಭ ಮೇಳ, ರಸ್ತೆಗಳೆಲ್ಲ ಸಂಪೂರ್ಣ ರಂಗೋಲಿಯಿಂದ ಕಂಗೊಳಿಸಲಿದ್ದು ಸಾಹಿತಿ ಮಾಸ್ಕೇರಿ ಎಂಕೆ ನಾಯಕರ ಸರ್ವಾಧ್ಯಕ್ಷತೆಯಲ್ಲಿ ಸಮ್ಮೇಳನ ವಿಜೃಂಭಣೆಯಿಂದ ನಡೆಸಲು ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಈ ಕುರಿತು ಮಾಹಿತಿ ನೀಡಿದ ಜಿಲ್ಲಾ ಕಸಾಪ ಕಾರ್ಯಾಧ್ಯಕ್ಷ ಸಂತೋಷಕುಮಾರ ಮೆಹಂದಳೆ ಕಳೆದ 4-5 ವರ್ಷಗಳ ಹಿಂದೆ ತಮಗೆ ಬೇಕಾದ ಸಾಹಿತಿಗಳಿಗೆ ಮಾತ್ರ ವೇದಿಕೆಯಲ್ಲಿ ಅವಕಾಶ ನೀಡಲಾಗುತ್ತಿತ್ತು ಆದರೇ ಈ ಸಂಸ್ಕøತೀಯನ್ನು ಹೊಗಲಾಡಿಸಲು ಈ ಬಾರಿ ಸಾಕಷ್ಟು ಹೊಸಬರಿಗೆ ಅವಕಾಶ ನೀಡಲಾಗಿದ್ದು ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೊಡಿ, ಜಿಲ್ಲಾ ಸಹಕಾರ್ಯದರ್ಶಿ ಜಯಚಂದ್ರ, ತಾಲೂಕಾಧ್ಯಕ್ಷ ಉಪೇಂದ್ರ ಘೊರ್ಪಡೆ, ಕೋಶಾಧ್ಯಕ್ಷ ನಾಗೇಶ ನಾಯ್ಕ ನೇತೃತ್ವದಲ್ಲಿ 30 ಜನರ ತಂಡ ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸುತ್ತಿದ್ದು ಗ್ರಾಮಸ್ಥರ ಸಹಕಾರ ಅಭೂತಪೂರ್ವವಾಗಿದ್ದು ಸಮ್ಮೇಳನ ಅದ್ದೂರಿಯಿಂದ ಯಶಸ್ವಿಯಾಗಿ ನಡೆಯಲಿದೆ ಎಂದು ಮೆಹಂದಳೆ ತಿಳಿಸಿದರು.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Haliyal News, National News Tagged With: 20ನೇ, 40*30 ಅಳತೆ, ಇತಿಹಾಸ, ಉತ್ತರ ಕನ್ನಡ, ಕಂಗೊಳಿಸಲಿ, ಕನ್ನಡ, ಕರಡಿ, ಕುಣಿತ, ಕುಂಭ, ಗುಟಕಾ, ಗ್ರಾಮ, ಗ್ರಾಮೀಣ, ಜಿಲ್ಲಾ, ಡೊಳ್ಳು, ತೇರಗಾಂವ ಗ್ರಾಮ, ದೊಡ್ಡ, ನಿರ್ಮಲ, ಪಂಚೆ, ಪುರಸ್ಕಾರ, ಪೆಂಡಾಲ್, ಪೇಟ, ಬೃಹತ್, ಮಧ್ಯ, ಮಹಾತ್ಮಾ ಗಾಂಧಿ, ಮುಕ್ತ, ಮೇಳ, ಯಿಂದ, ಯುವಕ, ರಂಗೋಲಿ, ರಸ್ತೆ, ವೇದಿಕೆ, ಶೃಂಗಾರ, ಸಂಪೂರ್ಣ, ಸಮ್ಮೇಳನ, ಸಹಕಾರ, ಸಾವಿರ, ಸಾಹಿತಿ, ಸಾಹಿತ್ಯ, ಸಿದ್ದ, ಸುಂದರ, ಹಳಿಯಾಳ, ಹೆಜ್ಜೆ ಮಜಲು

Explore More:

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,057 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar