ಕಾರವಾರ:
ಪ್ರೀತಿ ಮಾಯೆ ಹುಷಾರು ಅಂತಾರೆ. ಪ್ರೀತಿಗಾಗಿ ಏನ್ ಮಾಡೋಕೂ ರೆಡಿ ಇರ್ತಾರೆ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ. ತನ್ನ ಪ್ರಿಯತಮನಿಗಾಗಿ ತಾಯಿಯ ಮಾಂಗಲ್ಯ ಸರವನ್ನೇ ಕದ್ದು ನೀಡಿದ ಆ ಯುವತಿ ಈಗ ವಂಚನೆಗೊಳಗಾಗಿ ನ್ಯಾಯಕ್ಕಾಗಿ ಅಲೆಯುತಿದ್ದಾಳೆ.
ಹೌದು, ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಕರ್ಕಿಯ ತಪ್ಪಲಕೇರಿಯ ನೇತ್ರಾವತಿ, ಹುಟ್ಟುತ್ತಾನೆ ತಂದೆ-ತಾಯಿಯನ್ನೇ ಕಳೆದುಕೊಂಡು ಚಿಕ್ಕಮ್ಮನ ಆಶ್ರಯದಲ್ಲಿ ಬೆಳೆದವಳು. ಸಾಕು ಮಗಳು ಚೆನ್ನಾಗಿ ಓದ್ಲಿ ಅಂತಾ ಕಾಲೇಜಿಗೆ ಕಳಿಸಿದ್ರು. ಆದ್ರೆ ಈಕೆ ಹೊನ್ನಾವರದ ಈಶ್ವರ್ ಎಂಬಾತನನ್ನು ಲವ್ ಮಾಡಿದ್ಲು. ಆತ ಕೂಡ ಈಕೆಯನ್ನು ಮದ್ವೆಯಾಗ್ತೀನಿ ಅಂತಾ ಹೇಳಿದ್ದ. ಕಷ್ಟದಲ್ಲಿದ್ದೀನಿ ಸಹಾಯ ಮಾಡು ಅಂತಾ ಹೇಳಿದವನಿಗೆ ಈಕೆ ತನ್ನ ಸಾಕು ತಾಯಿಯ ತಾಳಿ ಸರವನ್ನೇ ಕದ್ದು ಕೊಟ್ಟಿದ್ದಾಳೆ. ಆದ್ರೆ ಆತ ನೇತ್ರಾವತಿಯನ್ನು ವಂಚಿಸಿ ಎಸ್ಕೇಪ್ ಆಗಿದ್ದಾನೆ.
ಈ ವಿಚಾರ ತಿಳಿದ ನೇತ್ರಾವತಿ ತಾಯಿ ಈ ಮುಂಚೆಯೇ ದೂರು ನೀಡಿದ್ರು. ಆದ್ರೆ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ದಕ್ಷಿಣ ವಲಯದ ಐಜಿಪಿಯವರಿಗೆ ದೂರು ನೀಡಿ ವಂಚನೆ ಮಾಡಿದ ಹುಡುಗನ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಒಟ್ಟಿನಲ್ಲಿ ಪ್ರೀತಿಗಾಗಿ ತಾಯಿಯ ತಾಳಿಯನ್ನೇ ಕದ್ದು ನೀಡಿದ ಈಕೆ ಈಗ ಮೋಸ ಹೋಗಿದ್ದು, ಪೊಲೀಸರು ಈಕೆಗೆ ನ್ಯಾಯ ಕೊಡಿಸುತ್ತಾರೋ ಅನ್ನೋದನ್ನು ಕಾದು ನೋಡಬೇಕು.

Leave a Comment