ಕಾರವಾರ:
ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟವನ್ನು ಜೂನ್ 2 ಮತ್ತು 3 ರಂದು ಹೊನ್ನಾವರ ಸೈಂಟ್ ಅಂಥೋನಿ ಮೈದಾನದಲ್ಲಿ ಆಯೋಜಿಸಲಾಗಿದ್ದು ಭಾಗವಹಿಸಲು ಇಚ್ಛಿಸುವವರು ಹೆಸರು ನೊಂದಾಯಿಸಲು ಕೋರಲಾಗಿದೆ.
ಸದರಿ ಕ್ರೀಡಾ ಕೂಟದಲ್ಲಿ ಜಿಲ್ಲೆಯ ಒಬ್ಬ ನೌಕರರಿಗೆ ಗರಿಷ್ಠ 3 ಆಟದಲ್ಲಿ ಭಾಗವಹಿಸಲು ಅವಕಾಶವಿದೆ. ಕ್ರೀಡಾ ಕೂಟದಲ್ಲಿ ಭಾಗವಹಿಸಲು ಇಚ್ಚಿಸುವ ಸರಕಾರಿ ನೌಕರರು ಆಯಾ ತಾಲೂಕಿನ ನೌಕರರ ಸಂಘದ ಅಧ್ಯಕ್ಷರಲ್ಲಿ ನಿಗದಿತ ಅರ್ಜಿ ನಮೂನೆಯನ್ನು ಪಡೆದು ಭರ್ತಿ ಮಾಡಿದ ಅರ್ಜಿಯನ್ನು ಜಿಲ್ಲಾ ಯುವಜನಸಬಲಿಕರಣ ಮತ್ತು ಕ್ರೀಡಾ ಇಲಾಖೆ ಕಾರವಾರ ಅಥವಾ ತಾಲೂಕು ಕ್ರಿಡಾಧಿಕಾರಿಗಳಲ್ಲಿ ಮೇ 23 ರೋಳಗೆ ಸಲ್ಲಿಸುವಂತೆ ಕೋರಲಾಗಿದೆ.
ಭಾಗವಹಿಸುವ ಸರ್ಕಾರಿ ನೌಕರರು ಖಾಯಂ ಸರ್ಕಾರಿ ನೌಕರರಾಗಿರಬೇಕು. ಸ್ಪಧೆಗಳನ್ನು 45 ಒಳಗಿನ ಹಾಗೂ 45 ವರ್ಷ ಮೇಲ್ಪಟ್ಟ ಪುರುಷರಿಗಾಗಿ ಮತ್ತು 40ವರ್ಷ ಒಳಗಿನ ಮತ್ತು 40 ವರ್ಷ ಮೇಲ್ಪಟ್ಟ ಮಹಿಳೆಯರಿಗಾರಿ ಪ್ರತ್ಯೇಕ ವಿಭಾಗವಾಗಿ ಏರ್ಪಡಿಸಲಾಗುವದು.ವಿವಿಧ ಕ್ರೀಡೆಗಳು ಹಾಗೂ ಸಾಂಸ್ಕತಿಕ ಸ್ಪರ್ಧೆಗಳನ್ನು ನಡೆಸಲಾಗುವದು.
ಪ್ರವೇಶಪತ್ರ ಹಾಗೂ ಕ್ರೀಡೆಗಳ ವಿವರಗಳಿಗಾಗಿ ಯುವಜನಸಬಲಿಕರಣ ಮತ್ತು ಕ್ರೀಡಾ ಇಲಾಖೆಯ ಜಿಲ್ಲಾ ತರಬೇತುದಾರ 9880748821,ಸರ್ಕಾರಿ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ 944991629, ಜಿಲ್ಲಾ ಕ್ರೀಡಾ ಕಾರ್ಯದರ್ಶಿ 8951576080 ಕ್ರೀಡಾ ಕಾರ್ಯದರ್ಶಿ 8277624507, ಜಿಲ್ಲಾ ಯುವಜನಸಬಲಿಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು 9480886551 ಸಂಪರ್ಕಿಸುವದು.
Leave a Comment