ಹೊನ್ನಾವರ:
ಹೊನ್ನಾವರದ ಮಾರ್ ಥೋಮ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ 10 ನೇ ತರಗತಿಯ ವಿದ್ಯಾರ್ಥಿನಿಯಾದ ಕುಮಾರಿ. ಪ್ರಮಥಾ ಗಜಾನನ ಭಟ್ ಈಕೆಯು 2016-17 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ 3ನೇ ಸ್ಥಾನವನ್ನು ಮತ್ತು ಕುಮಾರಿ ಬಿ ಎಸ್ ಸಿಂಚನಾ ರಾಜ್ಯ ಮಟ್ಟದಲ್ಲಿ 8ನೇ ಸ್ಥಾನವನ್ನು ಗಳಿಸುವುದರ ಮೂಲಕ ಮಾರ್ ಥೋಮ ಶಾಲೆಯ ಕಿರೀಟವನ್ನು ಮತ್ತೆರಡು ಮುತ್ತುಗಳಿಂದ ಅಲಂಕರಿಸಿರುತ್ತಾರೆ. ಸತತವಾಗಿ 3 ವರ್ಷಗಳಿಂದ ಮಾರ್ ಥೋಮ ಶಾಲೆಯ ವಿದ್ಯಾರ್ಥಿಗಳು ರಾಜ್ಯ ಮಟ್ಟದಲ್ಲಿ ಸ್ಥಾನವನ್ನು ಗಳಿಸುವ ಮೂಲಕ ಶಾಲೆಯ ಕೀರ್ತಿ ಪತಾಕೆಯನ್ನು ಉತ್ತುಂಗಕ್ಕೆ ಏರಿಸಿರುತ್ತಾರೆ. 46 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಪಾಸಾಗಿದ್ದು, ಅವರಲ್ಲಿ 28 ವಿದ್ಯಾರ್ಥಿಗಳು ಶೇಕಡಾ 90ಕ್ಕಿಂತ ಹೆಚ್ಚು ಅಂಕ ಗಳಿಸಿದ್ದು, 64 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಮತ್ತು 6 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಮತ್ತು 1 ವಿದ್ಯಾರ್ಥಿ ತೃತೀಯ ದರ್ಜೆಯಲ್ಲಿ ಪಾಸಾಗುವ ಮೂಲಕ ಕಲಿತ ಶಾಲೆಗೆ, ಕಲಿಸಿದ ಶಿಕ್ಷಕರಿಗೆ ಹಾಗೂ ಪಾಲಕರಿಗೆ ಕೀರ್ತಿಯನ್ನು ತಂದಿರುತ್ತಾರೆ. ಶಾಲೆಗೆ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿರುವ ಎಲ್ಲಾ ವಿದ್ಯಾರ್ಥಿಗಳಿಗೆÉ ಮಾರ್ ಥೋಮ ಶಾಲೆಯ ಆಡಳಿತ ಮಂಡಳಿ, ಪ್ರಾಂಶುಪಾಲರಾದ ರೆ|| ಜೋನ ಉಮ್ಮನ್, ಖಜಾಂಚಿಗಳಾದ ಕೆ ಸಿ ವರ್ಗೀಸ್, ಶೈಕ್ಷಣಿಕ ನಿರ್ದೇಶಕರಾದ ಹೆಚ್ ಎನ್ ಪೈ, ಶಿಕ್ಷಕ/ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿರುತ್ತಾರೆ.
Leave a Comment