• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಅಘನಾಶಿನಿ ಅಳಿವೆಗೆ ಎದುರಾಗಿದೆ ದೊಡ್ಡ ಅಪಾಯ

May 16, 2017 by Ganapati Hegde 2 Comments

ಕುಮಟಾ:
ಉತ್ತರ ಕನ್ನಡ ಜಿಲ್ಲೆಯ ಮೂರು ತಾಲೂಕುಗಳ ಮೂಲಕ ಹಾದುಹೋಗುವ ರಮ್ಯ ರಮಣೀಯ ಅಘನಾಶಿನಿ ನದಿ ಯಾವುದೇ ಅಡೆ-ತಡೆಯಿಲ್ಲದೆ ಹರಿಯುವ ನದಿಯಾಗಿದೆ.ಅಘನಾಶಿನಿಯ ಅಕ್ಕ-ಪಕ್ಕದಲ್ಲಿ ಯಾವುದೇ ಕೈಗಾರಿಕೆಯಿಲ್ಲ ಅಥವಾ ನದಿಗೆ ಅಡ್ಡಲಾಗಿ ಎಲ್ಲಿಯೂ ಯಾವುದೇ ಜಲಾಶಯ ನಿರ್ಮಿಸಲಾಗಿಲ್ಲ. ನದಿ ತಟದಲ್ಲಿ ಎಲ್ಲಿಯೂ ಜನವಸತಿಯೂ ಇಲ್ಲ. ಪಶ್ಚಿಮಘಟ್ಟದಲ್ಲಿ ಉಗಮವಾಗುವ ಅಘನಾಶಿನಿ ತನ್ನೊಂದಿಗೆ ಸುಮಾರು 80 ಜಲಚರಗಳಿಗೆ ಹಾಗೂ 120 ಜಾತಿಯ ಹಕ್ಕಿಗಳಿಗೆ ಅಗತ್ಯವಿರುವ ನದಿಮುಖದ ಪೋಷಕಾಂಶಗನ್ನು ಹೊತ್ತು ಸಾಗುತ್ತಾಳೆ. ಸುತ್ತಮುತ್ತಲಿರುವ ದಟ್ಟ ಮ್ಯಾಂಗ್ರೋವಗಳು ಹಾಗೂ ಇಲ್ಲಿನ ಜೀವವೈವಿಧ್ಯತೆ ಅಘನಾಶಿನಿ ಅಳಿವೆಯನ್ನು ಅಮೂಲ್ಯವಾಗಿಸಿವೆ. ಇಲ್ಲಿಂದ ಅನತಿ ದೂರದಲ್ಲಿಯೇ ತದಡಿ ಮೀನುಗಾರಿಕಾ ಬಂದರು ಕೂಡ ಇದೆ.ಇಂತಹ ಒಂದು ಅಳಿವೆಬಾಗಿಲಿನಲ್ಲಿ 2009ರಲ್ಲಿ ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯಾಭಿವೃದ್ಧಿ ನಿಗಮ ಒಂದು ಬಹು ಉದ್ದೇಶಿತ ಅಳಿವೆ ಬಂದರು ನಿರ್ಮಿಸುವ ಪ್ರಸ್ತಾಪ ಮಾಡಿತ್ತು. 2016ರಲ್ಲಿ ಪರಿಸರ ಹಾಗೂ ಅರಣ್ಯ ಸಚಿವಾಲಯದ ತಜ್ಞ ಸಮಿತಿಯೊಂದು ಈ ಯೋಜನೆಗೆ ಪರಿಸರ ಹಾಗೂ ಸಿಆರ್ಝೆಡ್ ಅನುಮತಿ ಪಡೆಯುವಂತೆ ಶಿಫಾರಸು ಮಾಡಿತ್ತು. ಇದೀಗ ಈ ಯೋಜನೆ ಸಚಿವಾಲಯದಿಂದ ಅನುಮತಿ ಪಡೆಯಲು ಒಂದು ಕೊನೆಯ ಹೆಜ್ಜೆಯಷ್ಟೇ ಬಾಕಿಯಿದೆ. ಪ್ರಕೃತಿಯ ಮೇಲೆ ಬೀರಬಹುದಾದ ಅಡ್ಡ ಪರಿಣಾಮಗಳನ್ನೂ ಲೆಕ್ಕಿಸದೇ ಅನುಮತಿ ದೊರೆಯುವ ಸಾಧ್ಯತೆಯೂ ಇದೆ.
*ಸಾರ್ವಜನಿಕ ಸಭೆಯಲ್ಲಿ ಕಳವಳ.*
 ನಾಗ್ಪುರದಲ್ಲಿರುವ `ನೀರಿ’ ಸಂಸ್ಥೆ ಈ ಯೋಜನೆ ಪರಿಸರದ ಮೇಲೆ ಬೀರಬಹುದಾದ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಿತ್ತು. ಮಾಲಿನ್ಯ ನಿಯಂತ್ರಣ ಮಂಡಳಿ ಮಾರ್ಚ್ 23, 2015ರಂದು ಸಾರ್ವಜನಿಕ ಸಮಾಲೋಚನಾ ಸಭೆಯೊಂದನ್ನು ಆಯೋಜಿಸಿತ್ತು. ಪ್ರಸ್ತಾವಿತ ಯೋಜನೆಯ ಪರಿಸರ ಪರಿಣಾಮ ಮೌಲ್ಯಮಾಪನಾ ವರದಿಯನ್ನು ಸಭೆಯಲ್ಲಿ ಟೀಕಿಸಲಾಗಿತ್ತೆಂಬುದು ಸಭೆಯಲ್ಲಿ ನಡೆದ ವಿದ್ಯಮಾನಗಳ ದಾಖಲಾತಿಯಿಂದ ತಿಳಿದುಬರುತ್ತದೆ. ಈ ಸಂದರ್ಭ ಮಾಲಿನ್ಯ ನಿಯಂತ್ರಣಮಂಡಳಿ ಸುಮಾರು 300 ಲಿಖಿತ ಮನವಿಗಳನ್ನೂ ಪಡೆದಿತ್ತು. ಹೆಚ್ಚಿನವರು ಪರಿಸರದ ಮೇಲೆ ಬೀರಬಹುದಾದ ಪರಿಣಾಮಗಳನ್ನು ಹಾಗೂ ಪ್ರಾಕೃತಿಕವಾಗಿ ಅಳಿವೆಬಾಗಿಲಿನ ಮಹತ್ವವನ್ನು ಈ ಪರಿಸರ ಪರಿಣಾಮ ಮೌಲ್ಯಮಾಪನಾ ವರದಿ ಸಿದ್ಧಪಡಿಸುವಾಗ ಪರಿಗಣಿಸಿಲ್ಲ ಎಂದು ದೂರಿದ್ದರು.ಪ್ರಸ್ತಾವಿತ ಬಂದರು ಒಂದು ಸರ್ವಋತು ಬಹುಉದ್ದೇಶಿತ ಬಂದರು ಆಗಿದ್ದು, 7 ಬರ್ತ್ ಹೊಂದಿರುತ್ತದೆ. ಇವುಗಳಲ್ಲಿ 6 ಬರ್ತುಗಳು ಕಲ್ಲಿದ್ದಲು, ಉಕ್ಕು ಹಾಗೂ ಕಬ್ಬಿಣ ಸರಕು ನಿರ್ವಹಣೆ ಮತ್ತು ಸಾಗಾಟಕ್ಕೆ ಮೀಸಲಾಗಿಡಲಾಗುವುದು. ಸಾಗರದ ಬಳಿ ನಿರ್ಮಿಸಲಾಗುವ ಬಂದರಿನಂತಿರದೆ ಅಳಿವೆ ಬಾಗಿಲೊಳಗೇ ಬಂದರು ನಿರ್ಮಾಣ ಕೈಗೆತ್ತಿಕೊಳ್ಳಲಾಗುವುದು. ಈ ಉದ್ದೇಶಕ್ಕೆ ನುಶಿಕೋಟೆ ಗ್ರಾಮದ ಸಮೀಪ ಕೆಎಸ್ಸೈಐಡಿಸಿ 1970ರ ದಶಕದಲ್ಲೇ ಸ್ವಾಧೀನಪಡಿಸಿರುವ 1400 ಎಕರೆ ಭೂಮಿ ಬಳಸಿಕೊಳ್ಳಲಾಗುವುದು. ಈ ಭೂಮಿ ಮೂಲತಃ ಗಜನಿ ಭೂಮಿಯಾಗಿದ್ದು ಕಗ್ಗ ಮಾದರಿಯ ಭತ್ತದ ಬೆಳೆಯ ಜೊತೆಮೀನು ಕೃಷಿಯನ್ನು ಈ ಭಾಗದ ರೈತರು ನಡೆಸುತ್ತಿದ್ದರು. ಆದರೆ ಇದೀಗ ಈ ಭೂಮಿ ಮುಳುಗಡೆಯಾಗಿದೆ ಹಾಗೂ ಉಬ್ಬರವಿಳಿತಾಂತರದ ಪ್ರದೇಶವಾಗಿ ಬಿಟ್ಟಿದೆ.ಬಂದರು ಅಭಿವೃದ್ಧಿಗಾಗಿ ಕರಾವಳಿ ನಿಯಂತ್ರಣ ವಲಯದ ಗಡಿ ಗುರುತು ಮಾಡಿದ್ದ ನ್ಯಾಷನಲ್ ಇನಸ್ಟಿಟ್ಯೂಟ್ ಆಫ್ ಓಶಿಯನೋಗ್ರಾಫಿ ಈ ವಿಷಯಗಳನ್ನು ಪರಿಗಣಿಸಿ ಈ ಪ್ರಸ್ತಾವಿತ ಬಂದರು ಪ್ರದೇಶವನ್ನು ಸಿಆರ್ಝೆಡ್ 1-ಎ (ಪ್ರಾಕೃತಿಕವಾಗಿ ಸೂಕ್ಷ್ಮ ಪ್ರದೇಶ) ಹಾಗೂ ಸಿಆರ್ಝೆಡ್ 1-ಬಿ (ಉಬ್ಬರವಿಳಿತಾಂತರದ ಪ್ರದೇಶ) ಎಂದು ವಿಭಾಗಿಸಿತ್ತು. ಬಂದರು ನಿರ್ಮಿಸಬೇಕಾದಲ್ಲಿ ಈ 2ನೇ ಅಳಿವೆ ಪ್ರದೇಶದಲ್ಲಿ ಸುಮಾರು 200 ಹೆಕ್ಟೇರ್ ಪ್ರದೇಶದಲ್ಲಿ ಹರಡಿಕೊಂಡಿರುವ ಸಮೃದ್ಧ ಮ್ಯಾಂಗ್ರೋವಗಳನ್ನು ನಾಶಪಡಿಸುವ ಅನಿವಾರ್ಯತೆ ಎದುರಾಗುತ್ತದೆ.ಸುತ್ತ್ತಲಿನ ಗ್ರಾಮದ ಜನತೆಗೆ ಸಂಕಷ್ಟಪ್ರಸ್ತಾವಿತ ಬಂದರು ನಿರ್ಮಾಣದಿಂದ ಕುಮಟಾ ತಾಲೂಕಿನ 25ಕ್ಕೂ ಹೆಚ್ಚಿನ ಗ್ರಾಮಗಳ ಜನರ ಜೀವನೋಪಾಯಕ್ಕೆ ಕೊಡಲಿಯೇಟು ಬೀಳಬಹುದು. ಇಲ್ಲಿನ ಸುಮಾರು 6000ದಷ್ಟು ನಿವಾಸಿಗಳು ಮೀನುಗಾರಿಕೆಯನ್ನೇ ಜೀವನೋಪಾಯಕ್ಕಾಗಿ ಅವಲಂಬಿಸಿದ್ದಾರಲ್ಲದೆ ಇಲ್ಲಿ ಸಮೃದ್ಧವಾಗಿರುವ ಮ್ಯಾಂಗ್ರೋವಗಳು ಮೀನು ಸಾಕಣೆಗೂ ಸಹಕಾರಿಯಾಗಿದೆ. ಏಡಿ, ಸಿಗಡಿ ಮುಂತಾದವುಗಳನ್ನು ಸಂಗ್ರಹಿಸುವವರಿಗೆ, ರೈತರಿಗೆ, ಚಿಪ್ಪು ಹುಡುಕುವವರಿಗೂ ಗಂಡಾಂತರವನ್ನು ಈ ಯೋಜನೆ ತಂದೊಡ್ಡಲಿದ್ದು ಇಲ್ಲಿಗೆ ಬರುವ ಹಡಗುಗಳಲ್ಲಿ ಸಾಗಾಟ ಮಾಡುವ ಕಬ್ಬಿಣ, ಉಕ್ಕುಗಳ ಕೆಲವು ಅಂಶಗಳು ನೀರಿಗೆ ಚೆಲ್ಲಿ ಕಲುಷಿತವಾಗುವ ಸಂಭವವೂ ಇದೆ.ಈ ಪ್ರಸ್ತಾವಿತ ಯೋಜನೆಯ ಬಗ್ಗೆ ಹೆಚ್ಚಿನ ಅಧ್ಯಯನಕ್ಕೆ ಡಿಸೆಂಬರ್ 2015ರಲ್ಲಿಯೇ ಸಲಹೆ ನೀಡಿರುವ ಹೊರತಾಗಿಯೂ ತಜ್ಞ ಸಮಿತಿ ಮುಂದೆ ಯೋಜನೆಗೆ ಅನುಮತಿ ನೀಡುವಂತೆ ಶಿಫಾರಸು ಮಾಡಿತ್ತು.ಕೆಎಸ್ಸೈಐಡಿಸಿ ಅಧ್ಯಯನವು ಸಾರ್ವಜನಿಕ ಸಮಾಲೋಚನೆಸಂದರ್ಭ ಎತ್ತಲಾಗಿದ್ದ ಕೆಲವು ಪ್ರಮುಖ ವಿಚಾರಗಳನ್ನು ನಿರ್ಲಕ್ಷ್ಯಿಸಿತ್ತೆನ್ನುವ ದೂರುಗಳೂ ಇವೆ.ಈ ಪ್ರಾಕೃತಿಕ ಸೂಕ್ಷ್ಮ ಪ್ರದೇಶವನ್ನು ಸಂರಕ್ಷಿಸುವ ಹಲವು ಪ್ರಯತ್ನಗಳು ವಿಫಲವಾಗಿವೆ. ಕಾಗಾಲ್ ಹಾಗೂ  ಮಾಸೂರು ಗ್ರಾಮಗಳ ಸಮೀಪವಿರುವ ಮ್ಯಾಂಗ್ರೋವ್ ಪ್ರದೇಶವನ್ನು ಜೀವವೈವಿಧ್ಯ ಪಾರಂಪರಿಕ ಸ್ಥಳವೆಂದು ಇಂಡಿಯನ್ ಇನಸ್ಟಿಟ್ಯೂಟ್ ಆಫ್ ಸಾಯನ್ಸ್ ಇಲ್ಲಿನ ಸೆಂಟರ್ ಫಾ ಇಕಲಾಜಿಕಲ್ ಸಾಯನ್ಸಸ್ ಮಾಡಿದ ಶಿಫಾರಸು ಕೂಡ ಫಲಗೂಡಿಲ್ಲ.ಇಂತಹ ಒಂದು ಯೋಜನೆ ಈ ಪ್ರದೇಶದಲ್ಲಿ ಅಗತ್ಯವಿದೆಯೇಎಂಬ ಪ್ರಶ್ನೆ ಅಂತಿಮವಾಗಿ ಮೂಡಿ ಬರುತ್ತದೆ. ಅದು ಕೂಡ ಹಾನಿಕರವೆಂದು ತಿಳಿಯಲಾದ ಗ್ರೀನ್ ಹೌಸ್ ಗ್ಯಾಸ್ ಹೊರಸೂಸುವ ಕೈಗಾರಿಕೆಗಳಿಗೆ ಅನುಕೂಲಕರವಾಗಲಿಯೆಂದೇ ಪರಿಸರ ಸೂಕ್ಷ್ಮ ಪ್ರದೇಶವೊಂದರಲ್ಲಿ ಇಂತಹ ಬಂದರು ನಿರ್ಮಾಣ ಅನಿವಾರ್ಯವೇ ? ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವಾಗ ಪರಿಸರ ವಿಚಾರಗಳನ್ನು ಸರಕಾರೀ ಏಜನ್ಸಿಗಳು ಗಣನೆಗೆ ತೆಗೆದುಕೊಳ್ಳುತ್ತಿಲ್ಲವೆಂಬುದಂತೂ ದಿಟ. ಪರಿಸ್ಥಿತಿ ಹೀಗಿರುವಾಗ ತದಡಿ ಬಂದರು ಯೋಜನೆಯನ್ನೇದಾರೂ ಕೈಗೆತ್ತಿಕೊಂಡಲ್ಲಿ ಅದು ಸ್ವಯಂ ವಿನಾಶಕಾರಿಯಾಗಬಹುದಲ್ಲದೆ ಮತ್ತಿನ್ನೇನೂ ಅಲ್ಲ.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Haliyal News, National News Tagged With: kumta, ಅಘನಾಶಿನಿ, ಅಪಾಯ, ಅಳಿವೆ, ಇನಸ್ಟಿಟ್ಯೂಟ್ ಆಫ್ ಸಾಯನ್ಸ್, ಉಕ್ಕು, ಉತ್ತರ ಕನ್ನಡ, ಎದುರಾಗಿದೆ, ಕಬ್ಬಿಣ, ಕಲ್ಲಿದ್ದಲು, ಕುಮಟಾ, ಗ್ಯಾಸ್, ಗ್ರೀನ್ ಹೌಸ್, ಜಲಚರ, ಜಾತಿ, ದೊಡ್ಡ, ನಿಯಂತ್ರಣ, ನಿರ್ವಹಣೆ, ಮಂಡಳಿ, ಮತ್ತು, ಮಾಲಿನ್ಯ, ಮೂಲಸೌಕರ್ಯಾಭಿವೃದ್ಧಿ, ರಮಣೀಯ, ರಮ್ಯ, ಸರಕು, ಸಾಗಾಟ, ಹಕ್ಕಿ, ಹಾಗೂ

Explore More:

Reader Interactions

Comments

  1. Raju says

    May 16, 2017 at 2:49 pm

    Namma aghanashini gramada nivashi nanu
    Helodu
    Namma aghanashini nadi ondu amulya
    illi yavude yojane bekkagilla
    Namma aghanashini nadi namgella Dari deepa illi naavu tumba ne channagiddivi
    Please nimma yojane bekkagilla.

    Reply
  2. Raju Krishna says

    May 16, 2017 at 2:51 pm

    Namma aghanashini gramada nivashi nanu
    Helodu
    Namma aghanashini nadi ondu amulya
    illi yavude yojane bekkagilla
    Namma aghanashini nadi namgella Dari deepa illi naavu tumba ne channagiddivi
    Please nimma yojane bekkagilla.

    Reply

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar