ದಾಂಡೇಲಿ :
ನಗರದ ಕೆನರಾ ವೆಲ್ಪೇರ್ ಟ್ರಸ್ಟ್ ಬಿ.ಎಡ್.ಕಾಲೇಜಿನ ಮೂರನೇ ಸೆಮಿಸ್ಟರ್ನ ಫಲಿತಾಂಶದಲ್ಲಿ ಶೇಕಡಾ ನೂರಕ್ಕೆ ನೂರು ಸಾಧನೆ ಮಾಡಿ ಗಮನ ಸೆಳೆದಿದೆ.
ಪರೀಕ್ಷೆಗೆ ಹಾಜರಾದ 32 ವಿದ್ಯಾರ್ಥಿಗಳಲ್ಲಿ 26 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದು, 06 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಡೆಬೊರಾ ಜಲ್ದಿ ಶೇ 86.66 ಅಂಕ ಪಡೆದು ಪ್ರಥಮ ಸ್ಥಾನ, ರೇಣುಕಾ ಮಿರಾಶಿ ಶೇ 84.83 ಅಂಕ ಪಡೆದು ದ್ವಿತೀಯ ಹಾಗೂ ಸುಪ್ರಿಯಾ ಬೈಲೂರಕರ ಶೇ 83.16 ಅಂಕ ಪಡೆದು ತೃತೀಯ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ.
ಬಿ.ಎಡ್. ಪರೀಕ್ಷೆಯಲ್ಲಿ ನೂರಕ್ಕೆ ನೂರು ಫಲಿತಾಂಶ ತಂದು ಕಾಲೇಜಿಗೆ ಕೀರ್ತಿ ತಂದಿರುವ ಎಲ್ಲ ವಿದ್ಯಾರ್ಥಿಗಳನ್ನು ಕಾಲೇಜಿನ ಪ್ರಾಚಾರ್ಯೆ ಜಯಶ್ರೀ ಕೊರಟಿ, ಆಡಳಿತ ಮಂಡಳಿ, ಶಿಕ್ಷಕ ವೃಂದದವರು, ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳ ಪಾಲಕರು ಅಭಿನಂದಿಸಿದ್ದಾರೆ.
ಸುಪ್ರಿಯಾ ಬೈಲೂರಕರ ಡೆಬೊರಾ ಜಲ್ದಿ ರೇಣುಕಾ ಮಿರಾಶಿ
Leave a Comment