ದಾಂಡೇಲಿ :
ನಗರದ ಪಟೇಲ್ ನಗರದ ನೀರು ಶುದ್ದೀಕರಣ ಘಟಕದ ಆವರಣದಲ್ಲಿರುವ ಶ್ರೀ.ವೀರಾಂಜನೇಯ ದೇವಸ್ಥಾನದ 8 ನೇ ವರ್ಷದ ವಾರ್ಷಿಕೋತ್ಸವವು ಗುರುವಾರ ವಿಜೃಂಭಣೆಯಿಂದ ಜರುಗಿತು. ವಿವಿಧ ಪೂಜಾ ಕಾರ್ಯಕ್ರಮಗಳು ನಡೆದ ಬಳಿಕ ಮಧ್ಯಾಹ್ನ ಮಹಾಪ್ರಸಾಧ ವಿತರಣೆ ನಡೆಯಿತು. ಕಾರ್ಯಕ್ರಮದಲ್ಲಿ ನಗರ ಸಭೆಯ ಅಧ್ಯಕ್ಷ ಎನ್.ಜಿ.ಸಾಳೊಂಕೆ, ಪ್ರತಿಪಕ್ಷದ ನಾಯಕ ರಿಯಾಜ ಶೇಖ, ಸದಸ್ಯರುಗಳು, ನಗರ ಸಭೆಯ ಅಧಿಕಾರಿಗಳು, ಸ್ಥಳೀಯ ನಾಗರೀಕರು ಭಾಗವಹಿಸಿದ್ದರು.
Leave a Comment