ಗೋಕರ್ಣದಿಂದ ಮೂರು ಕುಟುಂಬ ಉತ್ತರದ ಕೇದಾರ ಬದ್ರಿ ಹರಿದ್ವಾರ ಕೈಲಾಸನಾಥ ಪರ್ವತ ಕ್ಷೇತ್ರಗಳಿಗೆ ಯಾತ್ರೆಗೆ ತೆರಳಿದ್ದು ಸುರಕ್ಷಿತವಾಗಿ ಗೋಕರ್ಣಕ್ಕೆ ಬರಲು ನವದೆಹಲಿಗೆ ತಲುಪಿದ ಸುದ್ದಿ ತಿಳಿದು ಬಂದಿದೆ. ಬದರಿನಾಥದಲ್ಲಿ ವಿಹಂಗಮ ತಾಣ ವೀಕ್ಷಿಸಿ ನಂತರದ ಕೈಲಾಸನಾಥನ ಸನ್ನಿಧಿಗೆ ಸಾಗಲು ಕಡಿದಾದ ಬೆಟ್ಟದ ದಾರಿ ಸಾಗುವಾಗ ಗೋಕರ್ಣದ ಯಾತ್ರಿಕರು ಸಾಗುವ ಸ್ಥಳದಿಂದ ಕೇವಲ 50 ಮೀಟರ್ ಸಮೀಪ ಗುಡ್ಡ ಕುಸಿದು 150 ಮೀಟರ್ ಪ್ರಪಾತಕ್ಕೆ ದೊಡ್ಡ ದೊಡ್ಡ ಕಲ್ಲುಬಂಡೆ ಬಿದ್ದ ದೃಷ್ಯ ಅತೀವ ಭಯಾನಕವಾಗಿತ್ತು ಎಂಬ ಬಗ್ಗೆ ದೂರವಾಣಿಯಲ್ಲಿ ತಿಳಿಸಿ ಅಲ್ಲಿನ ಗುಡ್ಡ ಕುಸಿತದ ದೃಷ್ಯಾವಳಿ ಪೆÇೀಟೋ ಕ್ಲಿಕ್ಕಿಸಿ ಕಳಿಸಿದ್ದಾರೆ.
“ಗಂಗಾನದಿಯ ಉಗಮ ಸ್ಥಾನ ಅಲ್ಲಿದ್ದು ಬಿಸಿನೀರಿನ ಬುಗ್ಗೆ ಅಲ್ಲಿದೆ ಹಿಮಾಲಯ ಪರ್ವತದ ಪ್ರಾರಂಬ ಅದಾಗಿದೆ. ಅಲ್ಲಿ ಮಜುಗಡ್ಡೆ ಹಿಮ ಹಾಗು ದೊಡ್ಡ ದೊಡ್ಡ ಬಂಡೆಗಲ್ಲುಗಳ ಕಠಿಣತಮ ದಾರಿ ಸಾಗಬೇಕಾಗುತ್ತದೆ. ಇನ್ನು 20 ನಿಮಿಷ ನಾವು ಗಟ್ಟ ಏರಿದ್ದರೂ ನಾವು ಸಹ ಆ ಬಂಡೆಗಲ್ಲಿನಂತೆ 500 ಮೀಟರ್ ಪ್ರಪಾತಕ್ಕೆ ಬಿದ್ದು ನಮ್ಮ ಶವ ಹುಡುಕುವ ಪರಿಸ್ತಿತಿ ಬರುತ್ತಿತ್ತು” ಎಂದು ಜೀವನದ ಅತೀವ ಎಡ್ವೆಂಚರ್ ಕುರಿತು ಮಾತನಾಡಿದ್ದಾರೆ. ದೆಹಲಿಗೆ ಬಂದು ಮೂರುದಿನ ಕಳೆದಿದೆ. ಈ ಕ್ಷಣ ಹಾಗು ಆ ದಿನಗಳ ಕುರಿತು ತೀವೃ ತಮವಾದ ಆತಂಕದ ಜತೆಗೆ ಭಯದ ಮಾತನಾಡಿದ್ದಾರೆ. ಅಂದು ತಕ್ಷಣ ಜಾಗ್ರತರಾದ ಅಲ್ಲಿನ ಅರೆ ಸೇನಾ ಮಿಲ್ಟ್ರಿ ಪಡೆ ನಮ್ಮ ಸಾಗುವ ದಾರಿಯನ್ನು ತಡೆ ಹಿಡಿದು ಮುಂದೆ ಸಾಗುವ ನಮ್ಮ ಪ್ರಯತ್ನ ನಿಲ್ಲಿಸಿದ್ದಾರೆ. “48 ಕಿ.ಮಿ. ಕಾಲುದಾರಿ ಸಾಗಲೇ ಬೇಕಾಗಿದ್ದು ನಂತರ ಬದರಿ ಕೈಲಾಸ ಮಾನಸ ಸರೋವರ ದರ್ಶನ ಮಾಡಬೇಕಾಗುತ್ತದೆ” ಎಂದಿದ್ದಾರೆ ಆದಾಗ್ಯೂ ಎರಡುದಿನ ಸುರಕ್ಷಿತವಾಗಿ ಸೇನಾ ಪಡೆ ಯೋಧರು ತಮ್ಮ ಸಾವಿನ ಭಯವನ್ನು ನುಂಗಿ ಹಗಲಿರುಳೂ ನಮ್ಮನ್ನು ಹಾಗು ನಮ್ಮ ಜತೆಗಿನ ಸಾವಿರಕ್ಕೂ ಹೆಚ್ಚಿನ ಯಾತ್ರಿಗಳನ್ನು ನೋಡಿಕೊಂಡು ಆತ್ಮೀಯ ಆರೈಕೆ ಮಾಡಿದ್ದಾರೆ. ಎನ್ನುತ್ತಾ ಯಾತ್ರೆಗೆ ಕುಟುಂಬ ಸಮೇತ ಗೆಳೆಯರೊಂದಿಗೆ ಸಾಗಿದ್ದ ಗೋಕರ್ಣದ ಪತ್ರಕರ್ತ ಮಿತ್ರ ರವಿಸೂರಿ ದೂರವಾಣಿಯಲ್ಲಿ ತಿಳಿಸಿದ್ದಾರೆ. ಅವರು ಮಾತು ಮುಂದುವರಿಸಿ “ಗೋಕರ್ಣದ ಮಹಾಬಲೇಶ್ವರ ಹಾಗು ಗ್ರಾಮ ಅಧಿದೇವತೆ ಭದ್ರಕಾಳಿ ನಮ್ಮನ್ನು ಆ ಭಯಾನಕದಿಂದ ರಕ್ಷಿಸುವದರ ಜತೆಗೆ ದೇಶದ ಗಡಿ ಹಾಗು ಯಾತ್ರಿಗಳನ್ನು ರಕ್ಷಿಸುವ ಕಾಯಕದಲ್ಲಿರುವವರಿಗೆ ಸಮೃದ್ದ ರಕ್ಷಣೆ ನೀಡಿ ಸುಖ ಶಾಂತಿ ನೆಮ್ಮದಿಯ ಬದುಕು ನೀಡಲಿ” ಎಂದಿದ್ದಾರೆ.


Leave a Comment