ಕಾರವಾರ:
ಕಾರವಾರದ ಮಹಾತ್ಮಾಗಾಂಧಿ ರಸ್ತೆಯಲ್ಲಿರುವ ಮಿಲಿಟರಿ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ 2017-18 ನೇ ಸಾಲಿಗೆ ಮಾಜಿ ಸೈನಿಕರ ಮತ್ತು ಯುದ್ಧದಲ್ಲಿ ಮಡಿದ ಯೋಧರ ಮಕ್ಕಳಿಗೆ ವಿದ್ಯಾರ್ಥಿ ನಿಲಯದಲ್ಲಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
5 ನೇ ತರಗತಿಯಿಂದ ಪಿ.ಯು.ಸಿ. ಪಾಲಿಟೆಕ್ನಿಕ್ ಹಾಗೂ ಐ.ಟಿ.ಐ ತರಗತಿಗಳಿಗೆ (ನೇರವಾಗಿ ಎಸ್.ಎಸ್.ಎಲ್.ಸಿ ಯ ನಂತÀರ ಪ್ರವೇಶ ಪಡೆದವರು) ಕಾರವಾರ ವ್ಯಾಪ್ತಿಗೊಳಪಡುವ ವಿದ್ಯಾಸಂಸ್ಥೆಗಳಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಮಾತ್ರ ನಿಲಯದಲ್ಲಿ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಮೇ 25 ಕೊನೆಯ ದಿನವಾಗಿದೆ. ಅರ್ಜಿ ನಮೂನೆ ಹಾಗೂ ಮಾಹಿತಿಗಾಗಿ ಉಪನಿರ್ದೇಶಕರು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಕಾರವಾರ ದೂರವಾಣಿ ಸಂಖ್ಯೆ: 08382-226538 ಸಂಪರ್ಕಿಸಬಹುದಾಗಿದೆ.
Leave a Comment