ಭಟ್ಕಳ:
ಇತ್ತಿಚೆಗೆ ದುಬೈಯಲ್ಲಿ ಜರುಗಿದ 12ನೇ ಕುರ್ಆನ್ ಸ್ಪರ್ಧೆಯಲ್ಲಿ ಭಟ್ಕಳ ಮೂಲದ ಇಬ್ಬರು ಸಹೋದರಿಯರು ಪ್ರಥಮ ಹಾಗೂ ತೃತೀಯ ಸ್ಥಾನ ಗಳಿಸುವ ಮೂಲಕ ವಿದೇಶದಲ್ಲಿ ಸಾಧನೆ ಮಾಡಿದ್ದಾರೆ.
ಭಟ್ಕಳ ಮೂಲದ ಫಾತಿಮಾ ಮೊಹತೆಶಮ್ ಹಾಗೂ ಆಯೀಶಾ ಮೊಹತೆಶಮ್ ಕ್ರಮವಾಗಿ ಪ್ರಥಮ ಹಾಗೂ ತೃತೀಯ ಸ್ಥಾನವನ್ನು ಗಳಿಸಿದವರಾಗಿದ್ದಾರೆ.
ಮುಹಮ್ಮದ್ ಬಿನ್ ರಾಷಿದ್ ಸೆಂಟರ್ ಫಾರ್ ಕಲ್ಚರಲ್ ಅಂಡ್ ಸೋಶಿಯಲ್ ಅಂಡರ್ಸ್ಟ್ಯಾಂಡಿಂಗ್ ಸಂಸ್ಥೆ ಆಯೋಜಿಸಿದ್ದ ಈ ಸ್ಪರ್ಧೆಯಲ್ಲಿ ಅರಬ್ ದೇಶದ ಹೊರತಾಗಿ ಭಾಗವಹಿಸಿದ್ದ ಕೆಲವೇ ಸ್ಪರ್ಧಾಳುಗಳಲ್ಲಿ ಈ ಸಹೋದರಿಯರಿದ್ದರು. ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿವಿಧ ದೇಶಗಳ ಸ್ಪರ್ಧಾಳುಗಳಲ್ಲಿ ಈ ಸಹೋದರಿಯರು ಪ್ರಥಮ ಹಾಗೂ ತೃತೀಯ ಸ್ಥಾನ ಗಳಿಸಿಕೊಳ್ಳುವಲ್ಲಿ ಯಾಶಸ್ವೀಯಾಗಿದ್ದಾರೆ.
ಸ್ಪರ್ಧಾ ವಿಜೇತ ಸಹೋದರಿಯರಿಗೆ ಅಲ್ಲಿನ ಶೇಖ್ ಸಈದ್ ಬಿನ್ ಹಷರ್ ಅಲ್-ಮಖ್ತೂಮ್ ದುಬೈ ಇಂಟರ್ ನ್ಯಾಶನಲ್ ಕಾರ್ಯಕ್ರಮದಲ್ಲಿ ಹೋಲಿ ಕುರ್ಆನ್ ಅವಾರ್ಡ ನೀಡಿ ಗೌರವಿಸಿದರು.
Leave a Comment