ಹೊನ್ನಾವರ;
ಪಟ್ಟಣದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ ದಿ 2ರಂದು ಶಾಲಾ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸಲಾಯಿತು. ಶಾಲೆಯು 1930 ಜೂನ್ 2 ರಂದು ಶ್ರೀ ರಾಮ ಮಂದಿರದಲ್ಲಿ ಕೇವಲ 75 ಮಕ್ಕಳಿಂದ ಆರಂಭವಾಗಿ, 87 ಸಂವತ್ಸರಗಳನ್ನು ಪೂರೈಸಿದ್ದು, ಪ್ರಸಕ್ತ ವಿದ್ಯಾಲಯದಲ್ಲಿ 1600 ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಡಳಿತ ಮಂಡಳಿಯ ಅಧ್ಯಕ್ಷರಾದ ಜೆ.ಟಿ. ಪೈ ವಹಿಸಿದ್ದರು. ಶಾಲೆಯ ಇತಿಹಾಸವನ್ನು ತಿಳಿಸಿ, ಶಾಲೆಯ ಸಂಸ್ಥಾಪನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಶ್ರೀಯುತರುಗಳಾದ ಎ.ಜೆ. ಗೊನ್ಸಾಲ್ವಿಸ್, ಎಲ್.ಕೆ. ಶಾನಭಾಗ್ ಸರಾಫ್, ರಂಗರಾವ್ ಕಾಸರಕೋಡ್ ಮತ್ತಿತರರ ಮಹನೀಯರ ಸೇವೆ, ತ್ಯಾಗಗಳನ್ನು ಸ್ಮರಿಸಿದರು. ಸಂಸ್ಥಾಪಕರಿಗೆ ಪುಷ್ಪನಮನ ಸಲ್ಲಿಸಲಾಯಿತು. ಮುಖ್ಯಾಧ್ಯಾಪಕ ವಿ.ಎಸ್. ಅವಧಾನಿ ಪ್ರಸ್ಥಾವಿಕ ಮಾತನಾಡಿ ಸ್ವಾಗತಿಸಿದರು. ಶಿಕ್ಷಕ ರಾಘವೇಂದ್ರ ಹೆಗಡೆ ನಿರೂಪಿಸಿದರು. ಯಶವಂತ ಮೇಸ್ತ ವಂದಿಸಿದರು. ವಿದ್ಯಾರ್ಥಿಗಳಿಗೆ ದಿನಾಚರಣೆಯ ಅಂಗವಾಗಿ ಆರ್. ಜೆ. ಶಾನಭಾಗ, ರಾಘವ ವಿ. ಬಾಳೇರಿ, ಅಶೋಕ ನಾಯ್ಕ ಮತ್ತು ಪುಷ್ಪಾ ಭಂಡಾರಕರ್ ಅವರು ಸಿಹಿ ಹಂಚಿದರು.
Leave a Comment