ಹೊನ್ನಾವರ :
ಶ್ರೀ ಮಾರುತಿ ರೆಸಿಡೆನ್ಸಿಯಲ್ ಸ್ಕೂ¯ ಬಂಗಾರಮಕ್ಕಿಯ 2016-17ನೇ ಶೈಕ್ಷಣಿಕ ವರ್ಷದ CBSE ಹತ್ತನೇ ತರಗತಿಯ ಪರೀಕ್ಷೆಗೆ ಹಾಜರಾದ 21 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಕುಮಾರಿ ಸಫಾ ಶೇಖ್ CGPA 9.6% ಅಂಕಗಳಿಸಿ ಪ್ರಥಮ ಸ್ಥಾನ ಗಳಿಸಿದ್ದಾಳೆ. CGPA 8.8% ಅಂಕ ಪಡೆದ ಕುಮಾರ ಪ್ರಮುಖ ಹೆಗಡೆ ದ್ವಿತೀಯ ಸ್ಥಾನ ಹಾಗೂ CGPA 7.4% ಪಡೆದ ತಜನೂರ್ ಮುಕ್ತೇಸರ್ ಹಾಗೂ ಕುಮಾರಿ ಬೀಬಿ ತಯ್ಯಬಾ ತೃತೀಯ ಸ್ಥಾನ ಗಳಿಸಿದ್ದಾರೆ. ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪ್ರಥಮ ಹಾಗೂ ದ್ವಿತೀಯ ವರ್ಗದಲ್ಲಿ ಉತ್ತೀರ್ಣರಾಗಿದ್ದಾರೆ.
ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷರಾದ ಪರಮಪೂಜ್ಯ ಶ್ರೀ ಮಾರುತಿ ಗುರೂಜಿಯವರು ಸಂತೋಷ ವ್ಯಕ್ತಪಡಿಸಿ ಶುಭಹಾರೈಸಿದರು ಹಾಗೂ ಸಂಸ್ಥೆಯ ಕಾರ್ಯದರ್ಶಿಯವರಾದ ಅರ್ಪಿತಾ ಮಾರುತಿ ಗುರೂಜಿ, ಟ್ರಸ್ಟಿ ರಾಮಚಂದ್ರ ಭಟ್ಟರು, ಶೈಕ್ಷಣಿಕ ನಿರ್ದೇಶಕರಾದ ಎಸ್.ಜೆ.ಕೈರನ್, ಆಡಳಿತ ನಿರ್ದೇಶಕರಾದ ಜಿ.ಟಿ.ಹೆಗಡೆ, ಪ್ರಾಂಶುಪಾಲರಾದ ರಾಜೇಶ್ವರಿ ಕೇ. ಹಾಗೂ ಎಲ್ಲಾ ಶಿಕ್ಷಕ-ಶಿಕ್ಷಕಿಯರು, ಸಿಬ್ಬಂದಿ ವರ್ಗದವರು ಶುಭ ಹಾರೈಸಿದ್ದಾರೆ.
Leave a Comment