ಕಾರವಾರ:
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜೂನ್ 7ರಂದು ಕಾರವಾರಕ್ಕೆ ಬರಲಿದ್ದು, ಜನ ಸಂಪರ್ಕ ಅಭಿಯಾನ ನಡೆಸಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಜಿ ನಾಯ್ಕ ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ವೈಪಲ್ಯಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಯಡಿಯುರಪ್ಪ ರಾಜ್ಯಾದ್ಯಂತ ಪ್ರವಾಸ ನಡೆಸುತ್ತಿರುವದಾಗಿ ಹೇಳಿದರು. ಅಂದು ಬೆಳಗ್ಗೆ ಅಂಬೇಡ್ಕರ್ ಕಾಲನಿಯಲ್ಲಿರುವ ಮಾಲಾ ಹುಲಸ್ವರರ ಮನೆಯಲ್ಲಿ ಉಪಹಾರ ಸೇವಿಸಲಿರುವ ಅವರು ಮಾಲದೇವಿ ಮೈದಾನದಲ್ಲಿ ಸಭೆ ನಡೆಸುವರು. ಸಭೆಯಲ್ಲಿ 5ಸಾವಿರಕ್ಕೂ ಅಧಿಕ ಜನ ಭಾಗವಹಿಸುವರು ಎಂದರು. ಮರುದಿನ ಅಂಕೋಲಾದಲ್ಲಿ ದಲಿತ ಕೇರಿಗೆ ತೆರಳಿ ಅಲ್ಲಿ ಉಪಹಾರ ಸೇವಿಸುವರು. ಮದ್ಯಾಹ್ನ 3 ಗಂಟೆಗೆ ಕುಮಟಾಕ್ಕೆ ತೆರಳಿ ನಾಮಧಾರಿ ಸಭಾಭವನದಲ್ಲಿ ಪಕ್ಷದ ಕಾರ್ಯಕರ್ತರ ಸಭೆ ನಡೆಸಲಿದ್ದು, 5 ಗಂಟೆಗೆ ಅದೇ ಸ್ಥಳದಲ್ಲಿ ಸಾರ್ವಜನಿಕ ಸಭೆ ನಡೆಸಲಿದ್ದಾರೆ ಎಂದು ತಿಳಿಸಿದರು.
ಪಕ್ಷದ ಪ್ರಮುಖರಾದ ಗಣಪತಿ ಉಳ್ವೇಕರ್, ರೂಪಾಲಿ ನಾಯ್ಕ, ರಾಮು ರಾಯ್ಕರ್, ಪ್ರಸಾದ ಕಾರವಾರಕರ್, ರಾಜೇಶ ನಾಯ್ಕ, ನಾಗರಾಜ ಜೋಷಿ, ನಯನಾ ನೀಲಾವರ, ದೇವಿದಾಸ ನಾಯ್ಕ, ಗುರುನಾಥ ಉಳ್ವೇಕರ್, ಮನೋಜ ಭಟ್ ಜಗದೀಶ ನಾಯಕ ಮೊಗಟಾ ಇದ್ದರು.
Leave a Comment