ವಿವಿಧ ಸಾಮಾಜಿಕ ಅಭಿವೃದ್ದಿಗಾಗಿ ದುಡಿಯುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯೂ ಈ ಬಾರಿ ನಾಲ್ಕು ಕೆರೆಗಳ ಅಭಿವೃದ್ದಿ ಕೆಲಸವನ್ನು ನಡೆಸಲಿದೆ ಎಂದು ಯೋಜನೆಯ ನಿರ್ದೇಶಕ ಲಕ್ಷ್ಮಣ ಎಂ ಹೇಳಿದರು.
ಮಂಗಳವಾರ ಸುದ್ದಿಗೊಷ್ಟಿ ನಡೆಸಿ ಮಾತನಾಡಿದ ಅವರು, ಯೋಜನೆಯ ಪೃಗತಿಯ ಬಗ್ಗೆ ವಿವರಿಸಿದರು.
ಈ ವರ್ಷ ನಾಲ್ಕು ಕೆರೆಗಳ ಹೂಳು ತೆಗೆಯುವ ಕುರಿತು ಪ್ರಸ್ತಾವನೆ ಕಳುಹಿಸಲಾಗಿದೆ. ಶೀಘ್ರದಲ್ಲಿ ಇದನ್ನು ಕಾರ್ಯರೂಪಕ್ಕೆ ತರಲಾಗುತ್ತದೆ ಎಂದು ಹೇಳಿದರು. ಉತ್ತರ ಕನ್ನಡ ಜಿಲ್ಲೆಯ 11 ತಾಲೂಕುಗಳಲ್ಲಿ ಯೋಜನೆ ಅನುಷ್ಠಾನಗೊಂಡಿದ್ದು, ಪ್ರಗತಿ ಬಂದು ಸ್ವ ಸಹಾಯ ಸಂಘಗಳಲ್ಲಿ ಈವರೆಗೆ ಒಟ್ಟು 48.49 ಕೋಟಿ ರೂ. ಉಳಿತಾಯವಾಗಿದೆ. ಜಿಲ್ಲೆಯಲ್ಲಿ 2005ರಲ್ಲಿ ಯೋಜನೆ ಪ್ರಾರಂಭಗೊಂಡಿದ್ದು ಇದುವರೆಗೆ 14807 ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ರಚನೆಯಾಗಿದೆ. ಸಂಘಗಳಲ್ಲಿ ಸದಸ್ಯರು ವಾರಕ್ಕೆ ತಲಾ 10 ರೂ 20 ರೂ ನಂತೆ ಸಣ್ಣ ಮೊತ್ತವನ್ನು ಉಳಿತಾಯ ಮಾಡುತ್ತ ಬರುತ್ತಿದ್ದಾರೆ. ಈ ಮೊತ್ತ ಈಗ 48 ಕೋಟಿ ರೂ ದಾಟಿದೆ ಎಂದರು.
ಸುಸ್ಥಿರ ಕೃಷಿಯಲ್ಲಿ ಹೆಚ್ಚಿನ ಪ್ರಾವಿಣ್ಯತೆ ಪಡೆಯಲು ಯೋಜನೆಯಿಂದ ಅದ್ಯಯನ ಪ್ರವಾಸ ಏರ್ಪಡಿಸಲಾಗುತ್ತಿದೆ. ಈವರೆಗೆ 132 ಕೃಷಿ ಅದ್ಯಯನ ಪ್ರವಾಸ, 6 ಅಂತಾರಾಜ್ಯ ಅದ್ಯಯನ ಪ್ರವಾಸ ಮಾಡಲಾಗಿದೆ. ಉತ್ತಮ ಬೀಜದ ಆಯ್ಕೆ, ಸುಸ್ಥಿರ ಕೃಷಿಯ ಬಗ್ಗೆ ಜ್ಞಾನ ಸೇರಿದಂತೆ ರೈತರು ಕೃಷಿಯಲ್ಲಿ ಅಭಿವೃದ್ಧಿ ಹೊಂದಲು ಪೂರಕವಾಗಿ ಈ ಪ್ರವಾಸ ಏರ್ಪಡಿಸಲಾಗುತ್ತಿದೆ. ಜಿಲ್ಲೆಯಲ್ಲಿ ಇದುವರೆಗೆ 5071 ರೈತರು ಕೃಷಿ ಅದ್ಯಯನ ಪ್ರವಾಸದಲ್ಲಿ ಪಾಲ್ಗೊಂಡಿದ್ದಾರೆ ಎಂದು ವಿವರಿಸಿದರು.
ಹೈನುಗಾರಿಕೆ, ಜಾನುವಾರುಗಳು ಇರುವ ಒಟ್ಟು 167 ಮನೆಗಳಲ್ಲಿ ಯೋಜನೆಯಿಂದ ಗೊಬ್ಬರದ ಗ್ಯಾಸ್ ನಿರ್ಮಿಸಲಾಗಿದೆ. ವಿದ್ಯುತ್ ಸಂಪರ್ಕ ಇಲ್ಲದ ಮತ್ತು ವಿದ್ಯುತ್ ಬಳಕೆಯನ್ನು ಕಡಿಮೆ ಮಾಡಲು ಬಯಸಿದ ಒಟ್ಟು 725 ಕುಟುಂಬಕ್ಕೆ ಸೋಲಾರ್ ಅಳವಡಿಕೆ ಮಾಡಲಾಗಿದೆ. ನಿರ್ಗತಿಕ, ಅನಾರೋಗ್ಯ ಪೀಡಿತರಿರುವ ಹಾಗೂ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಕಳೆದ 11 ವರ್ಷಗಳಿಂದ ಮಾಸಾಶನ ನೀಡುತ್ತ ಬರಲಾಗಿದೆ. ಜಿಲ್ಲೆಯಲ್ಲಿ 264 ಕುಟುಂಬಗಳು ಮಾಸಾಶನ ಪಡೆಯುತ್ತಿವೆ ಎಂದರು. ದುಶ್ಚಟ ಮುಕ್ತ ಸಮಾಜವನ್ನು ನಿರ್ಮಿಸುವ ನಿಟ್ಟಿನಲ್ಲಿ ಜಿಲ್ಲಾ ಜನ ಜಾಗೃತಿ ವೇದಿಕೆಯ ನೇತ್ರತ್ವದಲ್ಲಿ ಇದುವರೆಗೆ 77 ಮದ್ಯವರ್ಜನ ಶಿಬಿರಗಳನ್ನು ನಡೆಸಲಾಗಿದ್ದು, 4493 ಜನ ಮದ್ಯಪಾನದ ಚಟದಿಂದ ಮುಕ್ತರಾಗಿದ್ದಾರೆ ಎಂದು ತಿಳಿಸಿದರು.
ಯೋಜನೆಯ ಅಧಿಕಾರಿಗಳಾದ ಸ್ವಪ್ನ ಪ್ರಕಾಶ, ನಾರಾಯಣ ಪಾಲನ್, ಎಂ. ಎಸ್. ಈಶ್ವರ ಇತರರಿದ್ದರು.
ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ರನ್ನ ಬೆಳಗಲಿ
ಅಲ್ಲಿ ಈ ಯೋಜನೆ ಜಾರಿಗೆ ಆಗೀದೇಯಾ