ಕಾರವಾರ:
ಉತ್ತರ ಕನ್ನಡ ಜಿಲ್ಲೆಯಲ್ಲಿ ವರುಣನ ಆರ್ಭಟ ಜೋರಾಗಿದೆ. ಜಿಲ್ಲೆಯಾದ್ಯಂತ ಉತ್ತಮ ಮಳೆ ಸುರಿಯುತ್ತಿದೆ. ಎಲ್ಲಡೆ ಕಪ್ಪುಮೊಡ ಕವಿದ ವಾತಾವರಣವಿದ್ದು, ಆಗಾಗ ಮಾತ್ರ ಸೂರ್ಯನ ದರ್ಶನವಾಗುತ್ತಿದೆ.
Àಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 176.5ಮಿ.ಮಿ ಮಳೆಯಾಗಿದೆ. ಈವರೆಗೆ ಸರಾಸರಿ 16 ಮಿಮಿ ಮಳೆ ದಾಖಲಾಗಿದೆ. ಜೂನ್ ತಿಂಗಳ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ 698.2 ಮಿಮಿ ಇದ್ದು, ಇದುವರೆಗೆ ಸರಾಸರಿ 487.2 ಮಿ.ಮಿ ಮಳೆ ದಾಖಲಾಗಿದೆ. ಈ ವೇಳೆ ಅಂಕೋಲಾ 59 ಮಿ.ಮೀ, ಭಟ್ಕಳ 10 ಮಿ.ಮೀ, ಹಳಿಯಾಳ 0 ಮಿ.ಮೀ. , ಹೊನ್ನಾವರ 10.1 ಮಿ.ಮೀ, ಕಾರವಾರ 47.4 ಮಿ.ಮೀ, ಕುಮಟಾ 25.4 ಮಿ.ಮೀ, ಮುಂಡಗೋಡ 0 ಮಿ.ಮೀ, ಸಿದ್ದಾಪುರ 3.2 ಮಿ.ಮೀ, ಶಿರಸಿ 14 ಮಿ.ಮೀ., ಜೋಯಡಾ 3.6 ಮಿ.ಮೀ, ಯಲ್ಲಾಪುರ 3.8 ಮಿ.ಮೀ, ಮಳೆಯಾಗಿದೆ.
* ಏರಿದ ಜಲಾಶಯಯ ಮಟ್ಟ
ಮಳೆ ತೀವೃಗೊಂಡಂತೆ ಜಲಾಶಯಗಳ ನೀರಿನ ಮಟ್ಟವೂ ಏರಿಕೆಯಾಗಿದೆ. ಕದ್ರಾ ಜಲಾಶಯ 34.50 ಮೀ (ಗರಿಷ್ಟ), 31.35ಮೀ (ಇಂದಿನ ಮಟ್ಟ), ಕೊಡಸಳ್ಳಿ 75.50ಮೀ (ಗರಿಷ್ಟ), 68.40 (ಇಂದಿನ ಮಟ್ಟ), ಸೂಪಾ 564ಮೀ (ಗ), 530.10 ಮೀ (ಇ.ಮಟ್ಟ), ತಟ್ಟಿಹಳ್ಳ 468.38ಮೀ (ಗ), 450.05ಮೀ (ಇ.ಮಟ್ಟ), ಬೊಮ್ಮನಹಳ್ಳಿ 438.38ಮೀ (ಗ), 435.41ಮೀ (ಇ.ಮಟ್ಟ), ಗೇರುಸೊಪ್ಪ 55ಮೀ (ಗ), 48.91ಮೀ (ಇ.ಮಟ್ಟ), ಲಿಂಗನಮಕ್ಕಿ 1819 ಅಡಿ (ಗ), 1747.40 ಅ (ಇಂದಿನ ಮಟ್ಟವನ್ನು ಕಾಯ್ದುಕೊಂಡಿದೆ.
Leave a Comment