ಕಾರವಾರ:
ಮಗನ ಸಾವಿಗೆ ಕಾರಣರಾದ ಪೊಲೀಸರ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಹೊನ್ನಾವರದ ಮುಹಮ್ಮದ್ ಹನೀಫ್ ಕೊಚ್ಚುಭಾವ್ ಎಂಬಾತರು ಗುರುವಾರ ಜಿಲ್ಲಾಡಳಿತ ಹಾಗೂ ಪೊಲೀಸ್ ವರಿಷ್ಠರಿಗೆ ಮನವಿ ಸಲ್ಲಿಸಿದ್ದಾರೆ.
2016ರ ಅಗಷ್ಟನಲ್ಲಿ ಕಾರವಾರ ಪೊಲೀಸರು ಸುಳ್ಳು ಅತ್ಯಾಚಾರ ಪ್ರಕರಣದಲ್ಲಿ ಮುಹಮ್ಮದ್ ತೌಫೀಕ್ (23)ರನ್ನು ಬಂಧಿಸಿ ಚಿತ್ರಹಿಂಸೆ ನೀಡಿದ್ದರಿಂದ ಆತ ಮೃತ ಪಟ್ಟಿದ್ದು, ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದಾರೆ. ಬಂಧನದ ನಂತರ ಕರೆ ಮಾಡಿದ ಪೊಲೀಸರು ಮುಹಮ್ಮದ್ ತೌಫೀಕ್ನನ್ನು ಆಸ್ಪತ್ರೆಗೆ ದಾಖಲಿಸಿರುವದಾಗಿ ತಿಳಿಸಿದರು. ಆಸ್ಪತ್ರೆಯಲ್ಲಿ ಆತನ ಸ್ಥಿತಿ ಚಿಂತಾಜನಕವಾಗಿದ್ದು, ಬಂಧನವಾದ ಮೂರು ದಿನಗಳಲ್ಲಿ ಕಿಡ್ನಿ, ಎದೆ, ಹೊಟ್ಟೆಗೆ ಬಲವಾದ ನೋವು ಕಾಣಿಸುತ್ತಿತ್ತು. ಎಂದಿಗೂ ಆಸ್ಪತ್ರೆಗೆ ತೆರಳದ ದೃಡಕಾಯದ ತನ್ನ ಮಗನನ್ನು ಪೊಲೀಸರು ಹಿಂಸಿಸಿ ಸಾಯಿಸಿದ್ದಾರೆ. 20 ದಿನಗಳ ಬಂಧನದಲ್ಲಿ ಆತನಿಗೆ ಚಿತ್ರಹಿಂಸೆ ನೀಡಲಾಗಿದೆ ಎಂದು ಮುಹಮ್ಮದ್ ಹನೀಫ್ ಕೊಚ್ಚುಭಾವ್ ಆರೋಪಿಸಿದರು.
Leave a Comment