ಕಾರವಾರ:
ಸಾಗವಾನಿ ಮರ ಕಡಿದು ಸಾಗಿಸುತ್ತಿದ್ದ ವೇಳೆ ದಾಳಿ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು ಕಟ್ಟಿಗೆ ಜತೆ ಆರೋಪಿಯೊಬ್ಬನನ್ನು ಬಂಧಿಸಿದ ಘಟನೆ ಕದ್ರಾದಲ್ಲಿ ನಡೆದಿದೆ.
ಮಲ್ಲಾಪುರದ ಹಿಂದುವಾಡದ ದಿಲೀಪ್ ಮನೋಹರ್ ಬಾಂದೇಕರ್ ಬಂಧಿತ ಆರೋಪಿ. ಇನ್ನೊಬ್ಬ ದೀಪಕ್ ಸುಬ್ರಾಯ್ ಬಾಂದೇಕರ್ ಎಂಬಾತರು ತಪ್ಪಿಸಿಕೊಂಡಿದ್ದಾರೆ. 3 ಸಾಗವಾನಿ ಹಾಗೂ 2 ಕಿಂದಳ ಮರಗಳನ್ನು ಕಡಿದು ಸಾಗಿಸುತ್ತಿದ್ದಾಗ ಖಚಿತ ಮಾಹಿತಿ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಕಟ್ಟಿಗೆಯನ್ನು ವಶಕ್ಕೆ ಪಡೆದಿದ್ದಾರೆ. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಬಿ ಸಾವಂತ್ ಸೂಚನೆ ಮೇರೆಗೆ ನಡೆದ ದಾಳಿಯಲ್ಲಿ ಆರ್ಎಫ್ಓ ಎಂ. ಆರ್ ಅಶೋಕ್, ಸಿಬ್ಬಂದಿ ಲಕ್ಮಣ ಚೀರು, ಗಂಗಾಧರ ಬಡಗಿ, ಗೌತಮ್, ಮಹಮದ್ ಇದ್ದರು.
Leave a Comment