ಕಾರವಾರ:
ಮೆಡಿಕಲ್ ಕಾಲೇಜಿನಲ್ಲಿ ಉದ್ಯೋಗ ನೀಡುವದಾಗಿ ನಂಬಿಸಿದ ಶೇಖರಪ್ಪ ಎಂಬಾತ ಚಾಮರಾಜ ನಗರದ ರಾಮು ಗೌಡ ಹಾಗೂ ಮಾದವಿ ಗೌಡರನ್ನು ಕಾರವಾರಕ್ಕೆ ಕರೆಯಿಸಿಕೊಂಡಿದ್ದ.ಮೆಡಿಕಲ್ ಕಾಲೇಜಿನಲ್ಲಿ ಉದ್ಯೋಗ ಒದಗಿಸಲು 2ಸಾವಿರ ರೂ ಹಣ ಕೇಳುತ್ತಿದ್ದಾರೆ ಎಂದು ಅವರನ್ನು ನಂಬಿಸಿದ್ದ. ಅವರ ಬಳಿ ಅಷ್ಟು ಹಣವಿಲ್ಲದಿದ್ದಾಗ ಇದ್ದ 1700ರೂ ದೋಚಿ ಪರಾರಿಯಾಗಿದ್ದು, ಊಟಕ್ಕೂ ಗತಿಯಿಲ್ಲದ ದಂಪತಿ ಅಂಗಡಿಯೊಂದರ ಮುಂದೆ ಮಲಗಿದ್ದರು. ಈ ವೇಳೆ ರಾಮು ಗೌಡರಿಗೆ ಪಾರ್ಶವಾಯು ತಗುಲಿತು. ಇದನ್ನು ಗಮನಿಸಿದ ಮಕ್ಕಳ ಪಕ್ಷದ ರಾಘು ನಾಯ್ಕ, ಅವರನ್ನು ಆಸ್ಪತ್ರೆಗೆ ದಾಖಲಿಸಲು ಸಹಕರಿಸಿದರು. ಊಟ ಒದಗಿಸಿ ಯಶವಂತಪುರಕ್ಕೆ ತೆರಳುವ ರೈಲಿನ ಮೂಲಕ ಊರಿಗೆ ಕಳುಹಿಸಿಕೊಟ್ಟರು.
Leave a Comment