ಹೊನ್ನಾವರ:
ಹೊನ್ನಾವರ: ತಾಲೂಕಿನ ಕಾಸರಕೋಡ ಗ್ರಾಮ ಪಂಚಾಯತಿ ವ್ಯಾಪ್ತಿಯ ರಮೇಶ ಜನ್ನಾ ತಾಂಡೇಲ್ ಈತನ ಮನೆಯಲ್ಲಿ ಬಚ್ಚಿಟ್ಟಿದ್ದ ಸುಮಾರು 1.60 ಲಕ್ಷ ರೂ. ಮೌಲ್ಯದ ಅಕ್ರಮ ಗೋವಾ ಮದ್ಯವನ್ನು ಸೋಮವಾರ ತಡ ರಾತ್ರಿ ಇಲ್ಲಿಯ ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ಗೋವಾ ರಾಜ್ಯದ 750 ಮಿಲೀ. ಸಾಮಥ್ರ್ಯದ 631 ಗ್ರೀನ್ ಲ್ಯಾಂಡ್ ಕೋಕೋನೆಟ್ ಫೆನ್ನಿಯ ಪ್ಲಾಸ್ಟಿಕ್ ಬಾಟಲಿಗಳು (473.250ಲೀ) ಹಾಗೂ 180 ಮಿಲೀ ಹನಿಗ್ರೇಡ್ ವಿಸ್ಕಿಯ 672 (120.960 ಲೀ) ಬಾಟಲಿಗಳು ಸೇರಿದಂತೆ ಒಟ್ಟೂ 1.60 ಲಕ್ಷ ರೂ. ಮೌಲ್ಯದ ಮದ್ಯವನ್ನು ಅಕ್ರಮವಾಗಿ ದಾಸ್ತಾನು ಇಡಲಾಗಿತ್ತು. ಇವುಗಳನ್ನು ವಶಪಡಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಅಬಕಾರಿ ಉಪ ಆಯುಕ್ತರ ಮಾರ್ಗದರ್ಶನದ ಮೇರೆಗೆ ಅಬಕಾರಿ ಉಪ ಅಧೀಕ್ಷಕಿ ಶುಭದಾ ಸಿ. ನಾಯಕ ಅವರು ಪತ್ತೆ ಹಚ್ಚಿ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಉಪನಿರೀಕ್ಷಕ ಶ್ರೀಧರ್ ಮಡಿವಾಳ, ಅಬಕಾರಿ ರಕ್ಷಕರಾದ ಮಹಾಂತಪ್ಪಾ ಸೂಳಿಬಾವಿ, ಶರೀಫ್ ವಾಲಿಕಾರ, ಸಿದ್ರಾಮಪ್ಪಾ, ಗುರುಪ್ರಸಾದ ಎಂ.ಸಿ, ಕೇಶವ ಟಿ. ನಾಯ್ಕ, ಮಾದೇವ ಗೊಂಡ, ನಾರಾಯಣ ಗೊಂಡ ಪಾಲ್ಗೊಂಡಿದ್ದರು.
Leave a Comment