ಕಾರವಾರ:
ಕರಾವಳಿಯ ವಿವಿಧ ಭಾಗದಲ್ಲಿ ಕಡಲು ಕೊರೆತ ಮುಂದುವರೆದಿದೆ.
ಮಳೆ ಪ್ರಮಾಣ ಕಡಿಮೆಯಿದ್ದರೂ ಕಡಲಿನ ಅಬ್ಬರ ಜೋರಾಗಿದೆ. ಇದರಿಂದ ಕಡಲಕೊರೆತವೂ ಹೆಚ್ಚಿದೆ. ಕಾರವಾರದ ಟಾಗೋರÀ ತೀರ, ಮಾಜಾಳಿ ಕಡಲ ತೀರ, ಅಂಕೋಲಾ ತಾಲೂಕಿನ ಹಾರವಾಡ, ನದಿಬಾಗ ಮುಂತಾದ ಕಡಲ ತೀರಗಳು ಸಮುದ್ರದ ಭೋರ್ಗರೆತದಿಂದ ಕೊರೆತಕ್ಕೆ ಒಳಗಾಗುತ್ತಿವೆ. ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ರಾಕ್ ಗಾರ್ಡನ್ ಬಳಿ ಕಡಲ ತೀರದಲ್ಲಿಯೂ ಈಚೆಗೆ ಕೊರೆತ ಉಂಟಾಗಿತ್ತು. ಪ್ರವಾಸಿಗರ ಆಕರ್ಷಣೆಗೆಂದು ಅಳವಡಿಲಾಗಿದ್ದ ಸೆಲ್ಟರ್ಗಳು ಕೂಡ ಬೀಳುವ ಸ್ಥಿತಿಯಲ್ಲಿದ್ದು ದೊಡ್ಡ ಬಂಡೆಗಳನ್ನು ಆಧಾರಕ್ಕಿರಸಲಾಗಿದೆ.
Leave a Comment