ಹಳಿಯಾಳ :
ಹಿಂದೂಳಿದ, ಅಲ್ಪ ಸಂಖ್ಯಾತ, ಪರಿಶಿಷ್ಠ ಜಾತಿ ಹಾಗೂ ಪಂಗಡ ಸಮುದಾಯದ ಮಕ್ಕಳಿಗೆ ಹಾಗೂ ಆರ್ಥಿಕವಾಗಿ ಸದೃಢರಲ್ಲದ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುವ ನಿಟ್ಟಿನಲ್ಲಿ ರಾಜ್ಯ ಕಾಂಗ್ರೇಸ್ ಸರ್ಕಾರ ಸಾವಿರಾರು ಕೋಟಿ ರೂ. ವೆಚ್ಚದಲ್ಲಿ ಮೂಲಭೂತ ಸೌಕರ್ಯಗಳುಳ್ಳ ವಸತಿ ಶಾಲೆಗಳನ್ನು ನಿರ್ಮಿಸಿಕೊಡುತ್ತಿದೆ ಮತ್ತು ಹಲವಾರು ನೂತನ ಯೋಜನೆಗಳನ್ನು ಜಾರಿಗೆ ತರುತ್ತಿದ್ದು ಯೋಜನೆಗಳ ಸದುಪಯೋಗವಾಗುವಂತೆ ಎಲ್ಲರೂ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕೆಂದು ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.
ಮಂಗಳವಾರ ತಾಲೂಕಿನ ಸಾಂಬ್ರಾಣಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಜಿ.ಪಂ, ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಿಂದ 27 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಪಶು ಆಸ್ಪತ್ರೆ ಕಟ್ಟಡ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ ಹಾಗೂ ಪರಿಶಿಷ್ಠ ವರ್ಗದ ಮಕ್ಕಳ ಮುರಾರ್ಜಿ ವಸತಿ ಶಾಲೆಯ ಉಧ್ಘಾಟನೆ ಮಾಡಿ ಮೀನುಗಾರಿಕಾ ಸಂಘಕ್ಕೆ ಸಲಕರಣೆ ಕಿಟ್ ವಿತರಿಸಿ ಮಾತನಾಡಿದರು.
ಸಾಂಬ್ರಾಣಿಯಲ್ಲಿ ಬಾಲಕರ ಮೆಟ್ರಿಕ್ ಪೂರ್ವ ವಸತಿ ನಿಲಯಕ್ಕೆ ಮಂಜೂರಾದ ವಿದ್ಯಾರ್ಥಿಗಳ ಸಂಖ್ಯಾಬಲ 50 ಇದ್ದು 39 ಹೆಚ್ಚುವರಿ ಅರ್ಜಿ ಬಂದಿರುವುದರಿಂದ ಅದರಲ್ಲಿ ಬೇರೆ ತಾಲೂಕಿನಲ್ಲಿ ಸರಿದೂಗಿಸಿ 20 ವಿದ್ಯಾರ್ಥಿಗಳಿಗೆ ಇಂದೆ ಆದೇಶ ನೀಡಲು ಸಚಿವರು ಹಿಂದೂಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ಬಸವರಾಜ ಬಡಿಗೇರ ಅವರಿಗೆ ಸೂಚಿಸಿದರು. ಅದರಂತೆ ಬಡಿಗೇರ ಅವರು 15 ಹೆಚ್ಚುವರಿ ವಿದ್ಯಾರ್ಥಿಗಳಿಗೆ ದಾಖಲಾತಿಗೆ ಆದೇಶ ನೀಡಿ ಇನ್ನೂಳಿದ ಸಂಖ್ಯಾಬಲ ಹೆಚ್ಚಳಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ ಪರಿಶಿಷ್ಠ ವರ್ಗದ ಮೊರಾರ್ಜಿ ವಸತಿ ಶಾಲೆ ಪ್ರಾಚಾರ್ಯ ಪ್ರಶಾಂತ ಹೆಗಡೆ ಮಾತನಾಡಿ ವಸತಿ ಶಾಲೆಯಲ್ಲಿ 50 ವಿದ್ಯಾರ್ಥಿಗಳಿಗೆ ಅವಕಾಶವಿದ್ದು ಪ್ರಸ್ತುತ 6 ನೇ ತರಗತಿಗೆ 25 ಸಂಖ್ಯಾಬಲ ಹೊಂದಿದೆ ಎಂದರು. ಸಚಿವರು ಇನ್ನೂಳಿದ ವಿದ್ಯಾರ್ಥಿಗಳಿಗೆ ನೇಮಿಸಿಕೊಳ್ಳಲು ಹೇಳಿದರಲ್ಲದೇ ವಸತಿ ನಿಲಯಕ್ಕೆ ತಮ್ಮ ಟ್ರಸ್ಟ್ ನಿಂದ ಹಾಸಿಗೆ , ಹೊದಿಕೆಗಳನ್ನು ಪೂರೈಸಲಾಗುವುದು ಎಂದು ತಿಳಿಸಿದರು,
ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ನಾರಾಯಣ ಹೆಗಡೆ ಮಾತನಾಡಿ ಪಶು ಆಸ್ಪತ್ರೆಯನ್ನು ನಿರ್ಮಿತಿ ಕೇಂದ್ರದೀಂದ ಮುಂದಿನ 6 ತಿಂಗಳಲ್ಲಿ ನಿರ್ಮಿಸಿಕೊಡಲಾಗುವುದು ಎಂದರು. ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ರವೀಂದ್ರ ತಳೇಕರ ಮಾತನಾಡಿ ಸಾಂಬ್ರಾಣಿ ಮೀನುಗಾರಿಕೆ ಸಹಕಾರಿ ಸಂಘದಲ್ಲಿ 150 ಸದಸ್ಯರಿದ್ದು ಸಚಿವರ ಪ್ರಯತ್ನದಿಂದ ಈಗಾಗಲೇ ಸಂಘಕ್ಕೆ ಮೀನು ಸಾಗಾಣಿಕೆ ವಾಹನ ನೀಡಲಾಗಿದ್ದು ಮೂರು ಸದಸ್ಯರಿಗೆ ದ್ವಿಚಕ್ರವಾಹನ ಹಾಗೂ ಆಯ್ದ 6 ಫಲಾನುಭವಿಗಳಿಗೆ ಮೀನುಗಾರಿಕೆ ಸಲಕರಣೆ ಕಿಟ್ ವಿತರಿಸಲಾಗುವುದು ಎಂದರು.
ಜಿಪಂ ಸದಸ್ಯೆ ಲಕ್ಷ್ಮೀ ಕೊರ್ವೆಕರ, ಸಾಂಬ್ರಾಣಿ ಪ್ರೌಢಶಾಲೆಯಲ್ಲಿ ಪ್ರತಿ ವರ್ಷದಂತೆ ಎಸ್.ಎಸ್.ಎಲ್.ಸಿಯಲ್ಲಿ ಹೆಚ್ಚಿನ ಅಂಕಗಳನ್ನು ಪಡೆದ ಪ್ರತಿಭಾನ್ವಿತ ಪ್ರಥಮ, ದ್ವೀತಿಯ, ತೃತೀಯ ವಿದ್ಯಾರ್ಥಿಗಳಿಗೆ ನೀಡಲಾಗುವ ನಗದು ಪುರಸ್ಕಾರವನ್ನು ಸಚಿವರು ವಿತರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷ ಇಂದಿರಾಕಾಂತ ಕಾಮಕರ ವಹಿಸಿದ್ದರು. ಜಿಪಂ ಉಪಾಧ್ಯಕ್ಷ ಕೃಷ್ಣಾ ಪಾಟೀಲ್, ಲಕ್ಷ್ಮೀ ಕೊರ್ವೆಕರ, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಸುಭಾಷ ಕೊರ್ವೆಕರ, ತಾಪಂ ಅಧ್ಯಕ್ಷೆ ರೀಟಾ ಸಿದ್ದಿ, ಗ್ರಾಪಂ ಸದಸ್ಯರಾದ ಅನುರಾಧಾ ಸಕ್ಕನಕೊಪ್ಪ, ವಂದನಾ ಗೌಡಾ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆಯ ಉಪ ನಿರ್ದೇಶಕ ಡಾ.ಸುಬ್ರಾಯಭಟ್, ತಾಪಂ ಅಧಿಕಾರಿ ಲಕ್ಷ್ಮಣರಾವ ಯಕ್ಕುಂಡಿ, ಬಿಇಓ ಸಮೀರ ಮುಲ್ಲಾ, ಪಶು ವೈದ್ಯಾಧಿಕಾರಿ ಡಾ.ಬಿಪಿ ಹಿರೇಮಠ, ಪಿಡಬ್ಲೂಡಿ ಆರ್.ಎಚ್.ಕುಲಕರ್ಣಿ, ಹೆಸ್ಕಾಂ ಎಇಇ ರವೀಂದ್ರ ಮೆಟಗುಡ್ಡ, ನಿರ್ಮಿತಿ ಕೇಂದ್ರದ ಜಿಲ್ಲಾ ವ್ಯವಸ್ಥಾಪಕ ಹರ್ಷ, ಕುಮಾರ ಇದ್ದರು. ಶಿಕ್ಷಕಿ ಪುಷ್ಪಮಾಲಾ ಚಂದ್ರಗಿರಿ ಕಾರ್ಯಕ್ರಮನಿರ್ವಹಿಸಿದರು.
Leave a Comment