ಕಾರವಾರ: ಪಟಾಕಿ ಅಂಗಡಿ ಪರವಾನಿಗೆ ನವಿಕರಣಕ್ಕೆ ಲಂಚ ಪಡೆಯುತ್ತಿದ್ದ ಅಗ್ನಿಶಾಮಕದಳ ಅಧಿಕಾರಿಯೊಬ್ಬರ ಮೇಲೆ ಗುರುವಾರ ಸಂಜೆ ದಾಳಿ ನಡೆಸಿದ ಎಸಿಬಿಯವರು ಆರೋಪಿಯನ್ನು ಬಂಧಿಸಿದರು.
ಜಿಲ್ಲಾ ಅಗ್ನಿ ಶಾಮಕದಳ ಅಧಿಕಾರಿ ಶ್ರೀನಿವಾಸ್ ಎಂಬಾತರು ಶಿರಸಿ ಮೂಲದ ರಘುಪತಿ ಸುಬ್ರಾಯ ಹೆಗಡೆಯವರಿಂದ 5750ರೂ ಲಂಚ ಪಡೆಯುತ್ತಿದ್ದ ವೇಳೆ ಈ ದಾಳಿ ನಡೆದಿದೆ. ಪಟಾಕಿ ಅಂಗಡಿ ಪರವಾನಿಗೆ ನವಿಕರಣಕ್ಕೆ ಶ್ರೀನಿವಾಸ್ 10 ಸಾವಿರ ರೂ ಲಂಚ ನೀಡುವಂತೆ ಕೇಳಿದ್ದರು. ಈ ಬಗ್ಗೆ ರಘುಪತಿ ಹೆಗಡೆ ಭೃಷ್ಟಾಚಾರ ನಿಗ್ರಹದಳಕ್ಕೆ ದೂರು ನೀಡಿದ್ದರು. ಗುರುವಾರ ಸಂಜೆ ಕಚೇರಿಯಲ್ಲಿ ಲಂಚ ಸ್ವೀಕರಿಸುತ್ತಿರುವ ವೇಳೆ ದಾಳಿ ನಡೆಸಿ ಆರೋಪಿ ಅಧಿಕಾರಿಯನ್ನು ವಶಕ್ಕೆ ಪಡೆಯಲಾಗಿದೆ.
Leave a Comment