ಕಾರವಾರ:
ಶ್ರಾವಣ ಸೋಮವಾರದ ನಿಮಿತ್ತ ಹಣಕೋಣದ ಪ್ರಸಿದ್ದ ರಾಮನಾಥ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಬೆಳಗ್ಗೆ ನಡೆದ ರುಧ್ರಾಭಿಷೇಕ, ಪಂಚಾಮೃತಾಭಿಷೇಕ ಮೊದಲಾದ ಕಾರ್ಯಕ್ರಮಗಳಲ್ಲಿ ನೂರಾರು ಭಕ್ತರು ಭಾಗವಹಿಸಿದ್ದರು. ಕ್ಷೇತ್ರ ಪುರೋಹಿತರಾದ ಪ್ರಸನ್ನ ಪ್ರಭಾಕರ ಜೋಶಿ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಊರಿಗೆ ಯಾವದೇ ರೀತಿಯ ಸಂಕಷ್ಟ ಬರಬಾರದು ಎಂದು ಭಕ್ತರು ಪ್ರಾರ್ಥಿಸಿದರು. 24ಗಂಟೆಗಳ ಕಾಲ ನಿರಂತರ ಭಜನೆ ನಡೆಸಲು ನಿರ್ಧರಿಸಲಾಗಿದ್ದು, ಧಾರ್ಮಿಕ ಕಾರ್ಯಕ್ರಮಗಳು ಮಂಗಳವಾರ ಮದ್ಯಾಹ್ನದ ವರೆಗೆ ಮುಂದುವರೆಯಲಿದೆ. ದೇವಸ್ಥಾನ ಸಮಿತಿ ಮುಕ್ತೇಸರರಾದ ವೆಂಕಟೇಶ ನಾರಾಯಣ ನಾಯ್ಕ, ಸದಸ್ಯರಾದ ದೀರಜ ನಾಯ್ಕ, ಪ್ರದೀಪ ನಾಯ್ಕ, ಉಲ್ಲಾಸ ಜಯರಾಂ ನಾಯ್ಕ, ದೇವಿದಾಸ ನಾಯ್ಕ, ದೀಪಕ ನಾಯ್ಕ ಇತರರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.
Leave a Comment