ಹೊನ್ನಾವರತಾಲೂಕಿನಕರ್ಕಿಯದಯಾನಂದ ವಿದ್ಯಾಭಾರತಿಗುರುಕುಲದಲ್ಲಿ 71ನೇ ಸ್ವಾತಂತ್ರ್ಯೋತ್ಸವದ ಶುಭ ಸಂದರ್ಭದಂದು ಬೆಳಕು ಗ್ರಾಮೀಣಾಭಿವೃದ್ಧಿಟ್ರಸ್ಟ್ ವತಿಯಿಂದ ಹಮ್ಮಿಕೊಂಡ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನಕಾರ್ಯಕ್ರಮದ ಪೂರ್ವದಲ್ಲಿನಾಗರಾಜ ನಾಯಕತೊರ್ಕೆಯವರುಧ್ವಜಾರೋಹಣ ನೆರವೇರಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸ್ವಾತಂತ್ರ್ಯಕ್ಕಾಗಿತ್ಯಾಗ, ಬಲಿದಾನಗೈದ ಮಹನೀಯರನ್ನು ಸ್ಮರಿಸುವುದು ನಮ್ಮೆಲ್ಲರಆದ್ಯಕರ್ತವ್ಯವಾಗಿದೆ. ದೇಶಕ್ಕಿಂತ ಮಿಗಿಲಾದದ್ದುಯಾವುದೂಇಲ್ಲ. ಮಕ್ಕಳಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ದೇಶಭಕ್ತಿಯ ಮನೋಭಾವನೆ ಬೆಳೆಸಬೇಕು ಹಾಗೂ ಮಕ್ಕಳಲ್ಲಿ ಒಂದಲ್ಲಾಒಂದುರೀತಿಯ ಪ್ರತಿಭೆಅಡಗಿರುತ್ತದೆ.ಮಕ್ಕಳ ಪ್ರತಿಭೆಯನ್ನು ಗುರುತಿಸಿ ಅವರಆಯ್ಕೆ ಮತ್ತುಅಭಿಪ್ರಾಯಕ್ಕೆ ಮಾನ್ಯತೆ ನೀಡಬೇಕುಎಂದುಪಾಲಕರಿಗೆ ಸಲಹೆ ನೀಡಿದರು.ಸರಕಾರದಯಾವುದೇಅನುದಾನವಿಲ್ಲದೇಇದ್ದರೂಅಚ್ಚುಕಟ್ಟಾಗಿ ಶಿಸ್ತುಬದ್ಧವಾಗಿ ಈ ಶಿಕ್ಷಣ ಸಂಸ್ಥೆಯನ್ನು ನಡೆಸುತ್ತಿರುವುದು ಶ್ಲಾಘನೀಯಎಂದುನುಡಿದುಮುಂದಿನ ದಿನಗಳಲ್ಲೂ ಈ ಸಂಸ್ಥೆಗೆ ತಮ್ಮ ಸಹಾಯ ಸಹಕಾರವಿರುವುದಾಗಿ ತಿಳಿಸಿದರು.
ಮುಖ್ಯ ಅತಿಥಿಗಳಾದ ನಿವೃತ್ತಉಪನ್ಯಾಸಕ ಜಿ.ಎಚ್.ನಾಯ್ಕರವರು ಮಾತನಾಡಿ ಪ್ರತಿಭೆಗಳನ್ನು ಹುರಿದುಂಬಿಸುವುದರೊಂದಿಗೆ ಸಾಮಾಜಿಕ ಸೇವೆಯಲ್ಲಿಯೂ ತೊಡಗಿಸಿಕೊಂಡಿರುವ ನಾಗರಾಜ ನಾಯಕತೊರ್ಕೆಯವರಕಾರ್ಯವನ್ನು ಶ್ಲಾಘಿಸಿ ಅವರಿಂದ ಸ್ಫೂರ್ತಿಗೊಂಡು ಮುಂದಿನ ಬಾರಿಯ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ ನಗದು ಬಹುಮಾನವನ್ನು ಘೋಷಿಸಿದರು.ಇನ್ನೋರ್ವಅತಿಥಿಎನ್. ಎಸ್. ಹೆಗಡೆಯವರು ಮಾತನಾಡಿ ಸ್ವಚ್ಛತೆ, ಶಾಂತಿ, ಪರಸ್ಪರರೊಂದಿಗೆ ಪ್ರೀತಿವಿಶ್ವಾಸಒಗ್ಗಟ್ಟಿನ ಮನೋಭಾವವನ್ನುಬೆಳೆಸಿಕೊಂಡಲ್ಲಿ ನಮ್ಮಊರು, ಜಿಲ್ಲೆ, ರಾಜ್ಯ ಆ ಮೂಲಕ ಇಡೀದೇಶವೇಅಭಿವೃದ್ಧಿ ಸಾಧಿಸಲಿದೆಎಂದರು.
ನಂತರಟ್ರಸ್ಟ್ ವತಿಯಿಂದ ಮಖ್ಯಾಧ್ಯಾಪಕರಾದ ಮಹೇಶ್ವರಪ್ಪ,ವಿಷ್ಣು ಭಂಡಾರಕರ್, ಲಕ್ಷ್ಮೀ ಅಳಗೋಡ, ಇವರನ್ನು ಸನ್ಮಾನಿಸಿ ಗೌರವಿಸುವುದರೊಂದಿಗೆ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಾದ ನಮೃತಾ ನಾಯ್ಕ, ರಶ್ಮಿ ಹಬ್ಬುಅವರನ್ನು ಪುರಸ್ಕರಿಸಲಾಯಿತು.ಮಹೇಶ್ವರಪ್ಪ, ವಿಷ್ಣು ಭಂಡಾರಕರ್, ಲಕ್ಷ್ಮೀ ಅಳಗೋಡ,ಸತೀಶ ಭಟ್ಅವರು ಮಾತನಾಡಿ ಸಂತಸ ವ್ಯಕ್ತಪಡಿಸಿದರು.ಶಿಕ್ಷಕಿ ದೀಪ್ತಿ ಹೆಗಡೆ ಸ್ವಾಗತಿಸಿದರು .ಶೀಲಾ ಮೇಸ್ತ ನಿರೂಪಿಸಿದರು.ಶಿಕ್ಷಕಿ ಅಂಜನಾ ನಾಯ್ಕ ವಂದಿಸಿದರು.
Leave a Comment