ಹೊನ್ನಾವರ ;
ತಾಲೂಕಿನ ಅಳ್ಳಂಕಿಯ ಅಂಬೇಡ್ಕರ್ ಕಾಲೋನಿಯಲ್ಲಿ ಸಂಪ್ರಭಾ ಗ್ರಾಮೀಣಾಭಿವೃದ್ದಿ ಸಂಸ್ಥೆ (ರಿ) ಮೂಡ್ಕಣಿ, ತಾಲೂಕಾ ಯುವ ಒಕ್ಕೂಟ ಹೊನ್ನಾವರ, ಡಾ|| ಬಿ. ಆರ್. ಅಂಬೇಡ್ಕರ್ ಹಳ್ಳೇರ್ ಸಾಂಸ್ಕøತಿಕ ಕಲಾಭಿವೃದ್ಧಿ ಸಂಘ ಅಳ್ಳಂಕಿ ಇವರ ಆಶ್ರಯದಲ್ಲಿ ಸ್ವಚ್ಚ ಭಾರತ ಅಭಿಯಾನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಸಂಪನ್ಮೂಲ ವ್ಯಕ್ತಿಗಳಾದ ಗ್ರಾ.ಪಂ. ಪಿ.ಡಿ.ಓ. ಉದಯ ಬಾಂದೇಕರ್ ಮಾತನಾಡಿ ಪ್ರತಿಯೊಬ್ಬರೂ ತಮ್ಮ ಮನೆಯ ಸುತ್ತಮುತ್ತ ಸ್ವಚ್ಚವಾಗಿಟ್ಟುಕೊಳ್ಳುವುದರ ಮುಖಾಂತರ ಬರುವಂತಹ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಬಹುದು. ಪ್ಲಾಸ್ಟಿಕ್ ಬಳಕೆಯನ್ನಿ ನಿಷೇಧಿಸಬೇಕು ಅದೇ ರೀತಿ ನಮ್ಮ ಗ್ರಾಮವನ್ನು ಬಯಲು ಮಲ ವಿಸರ್ಜನೆಯಿಂದ ಮುಕ್ತಗೊಳಿಸಲು ಎಲ್ಲರ ಸಹಕಾರ ಅಗತ್ಯ ಇದಕ್ಕೆ ತಾವೆಲ್ಲರೂ ಸಹಕಾರ ನೀಡಬೇಕೆಂದು ಹೇಳಿದರು.
ಗ್ರಾ.ಪಂ. ಅಧ್ಯಕ್ಷೆ ರಾಜೇಶ್ವರಿ ನಾಯ್ಕ ಮಾತನಾಡಿ ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ಶೌಚಾಲಯವನ್ನು ಕಟ್ಟಿಕೊಳ್ಳಬೇಕೆಂದು ಹೇಳಿದರು.
ಗ್ರಾ.ಪಂ. ಸದಸ್ಯರಾದ ಚಂದ್ರಕಾಂತ ಕೊಚರೇಕರ್, ಈಶ್ವರ್ ಅಂಕೋಲೇಕರ್, ಈರಮ್ಮ ಹಳ್ಳೇರ್, ಜಿ.ಟಿ. ಹಳ್ಳೇರ್ ಮಾತನಾಡಿದರು.
ಸಮಾಜದ ಮುಖಂಡರಾದ ನಾರಾಯಣ ಡಿ. ಹಳ್ಳೇರ್, ಮಹಿಳಾ ಸಂಘದ ಅಧ್ಯಕ್ಷರಾದ ಮಂಜಿ ಜೆ. ಹಳ್ಳಿರ್, ಸಂಘದ ಅಧ್ಯಕ್ಷರಾದ ನಾರಾಯಣ ಆರ್. ಹಳ್ಳೆರ್, ದಲಿತ ಕ್ರಾಂತಿ ಪತ್ರಿಕೆಯ ವರದಿಗಾರರಾದ ಮಂಜುನಾಥ ಜಿ. ಹಳ್ಳೇರ್ ಉಪಸ್ಥಿತರಿದ್ದರು. ಗಣೇಶ ಜಿ. ಹಳ್ಳೇರ್ ನಿರೂಪಿಸಿದರು, ಗಣೇಶ ವಿ. ಹಳ್ಳೇರ್ ಸ್ವಾಗತಿಸಿದರು.
Leave a Comment