ಕಾರವಾರ:
ರಾಜ್ಯ ಕಾಂಗ್ರೆಸ್ ಸರ್ಕಾರದ ವೈಪಲ್ಯಗಳನ್ನು ಖಂಡಿಸಿ ಬಿಜೆಪಿ ಜಿಲ್ಲಾ ಘಟಕದವರು ಭಾನುವಾರ ಸುಭಾಷ್ ವೃತ್ತದ ಬಳಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪೃತಿಕೃತಿ ದಹಿಸಿ ಪ್ರತಿಭಟಿಸಿದರು.
ಈ ವೇಳೆ ಮಾತನಾಡಿದ ಬಿಜೆಪಿ ಮುಖಂಡ ನಾಗರಾಜ ನಾಯಕ, ರಾಜಕೀಯ ವಿರೋಧಿಗಳನ್ನು ಹೆಣೆಯಲು ಕಾಂಗ್ರೆಸ್ ಸರ್ಕಾರ ಭೃಷ್ಟಾಚಾರ ನಿಗ್ರಹ ದಳವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದರು. ಎಸಿಬಿ ಅಧಿಕಾರಿಗಳ ಒತ್ತಡದಿಂದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ದ ಗಣಿ ಇಲಾಖೆ ಉಪ ಕಾರ್ಯದರ್ಶಿ ಎಚ್. ಬಸವರಾಜ್ ಆರೋಪ ಮಾಡಿದನ್ನು ಅವರೇ ಒಪ್ಪಿಕೊಂಡು ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದು, ಇದರಲ್ಲಿ ಮುಖ್ಯಮಂತ್ರಿ ಕೈವಾಡವಿರುವದು ಸ್ಪಷ್ಟವಾಗಿದೆ. ಭೃಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ದ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದ ನಂತರ ಬಿಜೆಪಿ ನಾಯಕರ ವಿರುದ್ದ ಪ್ರಕರಣಗಳನ್ನು ದಾಖಲಿಸಿ ಅದನ್ನು ಎಸಿಬಿ ಮೂಲಕ ಕೆದಕುತ್ತ ಹಿಂಸೆ ನೀಡುತ್ತಿದ್ದಾರೆ. ಸ್ವಾರ್ಥ ಸಾಧನೆಗಾಗಿ ಎಸಿಬಿಯನ್ನು ದುರುಪಯೋಗ ಪಡಿಸಿಕೊಳ್ಳುವದು ಲಜ್ಜೆಗೇಡಿತನ ಎಂದು ಆರೋಪಿಸಿದರು.
ಐಟಿ ದಾಳಿಗೆ ಒಳಗಾದ ಇಂದನ ಸಚಿವ ಡಿಕೆ ಶಿವಕುಮಾರ ರಕ್ಷಣೆಗೆ ಕಾಂಗ್ರೆಸ್ ನಿಂತಿದೆ. ಸಚಿವರೆಲ್ಲರೂ ಆಡಳಿತದಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ವಿರೋಧ ಪಕ್ಷದವರನ್ನು ಹೆದರಿಸುವ ಕಾಯಕದಲ್ಲಿ ಕಾಂಗ್ರೆಸ್ ತೊಡಗಿದೆ ಎಂದು ದೂರಿದರು. ಅಧಿಕಾರ ದುರುಪಯೋಗ, ಸೃಜನಪಕ್ಷಪಾತ, ಭೃಷ್ಟಾಚಾರದ ಬಾರದಿಂದ ನಲುಗಿರುವ ಕಾಂಗ್ರೆಸ್ ಸರ್ಕಾರ ತಾನಾಗಿಯೇ ಕುಸಿದು ಬೀಳಲಿದೆ ಎಂದು ಹೇಳಿದರು. ಜನರ ಸಮಸ್ಯೆ ಆಲಿಸದ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರದಲ್ಲಿ ಮುಂದುವರೆಯುವ ಅರ್ಹತೆಯನ್ನು ಹೊಂದಿಲ್ಲ ಎಂದು ಕಿಡಿಕಾರಿದರು.
ಬಿಜೆಪಿ ನಗರಾಧ್ಯಕ್ಷ ಮನೋಜ ಭಟ್ಟ, ಪ್ರಮುಖರಾದ ಉದಯ ಬಶೆಟ್ಟಿ, ನಾಗರಾಜ ಜೋಶಿ, ಪ್ರಸಾದ ಕಾರವಾರಕರ್, ಮಾಲಾ ಹುಲಸ್ವಾರ, ಡಾ ಗಜೇಂದ್ರ ನಾಯಕ ಇತರರಿದ್ದರು.
Leave a Comment