ಹೊನ್ನಾವರ ; ತಾಲೂಕಾ ಮಾವಿನಕುರ್ವಾ ವಲಯ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ 2017-18 ವಿಷ್ಣು ಶಾಸ್ತ್ರಿ ಕ್ರೀಡಾಂಗಣ ಖರ್ವಾ ಕೊಳಗದ್ದೆಯಲ್ಲ್ಲಿ ನಡೆಯಿತು.
ಕ್ರೀಡಾಕೂಟವನ್ನು ಜಿ.ಪಂ. ಸದಸ್ಯ ಸವಿತಾ ಕೃಷ್ಣ ಗೌಡ ಉದ್ಘಾಟಿಸಿ ಮಾತನಾಡಿ ಕ್ರೀಡೆ ಮನುಷ್ಯನ ಜೀವನಕ್ಕೆ ಅತ್ಯಂತ ಅಮೂಲ್ಯವಾದುದು, ಗ್ರಾಮೀಣ ಕ್ರೀಡಾ ಪ್ರತಿಭೆಗಳು ಇಂಥಹ ಕ್ರೀಡಾಕೂಟದ ಮೂಲಕ ಹೊರ ಬರಲಿ ಎಂದು ಹಾರೈಸಿದರು.
ಅಧ್ಯಕ್ಷತೆ ತಿಲಕ ಜೆ. ಗೌಡ ಅಧ್ಯಕ್ಷರು, ಗ್ರಾ.ಪಂ. ಮಾವಿನಕುರ್ವಾ ಇವರು ಕ್ರೀಡಾ ಧ್ವಜಾರೋಹಣ ನೆರವೇರಿಸಿದರು. ಮಾತನಾಡಿ ಇಲಾಖಾ ಕ್ರೀಡಾ ಕೂಟಗಳಿಗೆ ಇಲಾಖೆಯಿಂದ ಕೊಡುವ ಹಣಕಾಸಿನ ನೆರವು ಅತ್ಯಂತ ಕಡಿಮೆ. ಈ ಬಗ್ಗೆ ನಮ್ಮ ಜನಪ್ರತಿನಿಧಿಗಳು ಇಂತಹ ಕ್ರೀಡಾಕೂಟಗಳಿಗೆ ಹೆಚ್ಚು ನೆರವು ನೀಡಿ ಗ್ರಾಮೀಣ ಕ್ರೀಡಾಪಟುಗಳಿಗೆ ಒಂದು ಉತ್ತಮ ವೇದಿಕೆ ಒದಗಿಸಬೇಕು ಕ್ರೀಡಾಕೂಟವನ್ನು ಅತ್ಯಂತ ಯಶಸ್ವಿಯಾಗಿ ಸಂಘಟಿಸಿದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಇಂತಹ ಕ್ರೀಡಾಕೂಟಗಳು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಹೆಚ್ಚು ನಡೆಯಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ನಿಕಟಪೂರ್ವ ಜಿ.ಪಂ. ಸದಸ್ಯರಾದ ಕೃಷ್ಣ ಜೆ. ಗೌಡ, ಚಿಕ್ಕನಕೋಡ ಪಂಚಾಯತ ಅಧ್ಯಕ್ಷೆ ನಾಗವೇಣಿ ನಾಯ್ಕ, ತಾ.ಪಂ. ಸದಸ್ಯರಾದ ಲೋಕೇಶ ನಾಯ್ಕ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಗಿರೀಶ ಪದಕಿ ಬಿ.ಶಿರಸಿ, ಸಮನ್ವಯಾಧಿಕಾರಿಗಳಾದ ಶ್ರೀ ಜಿ.ಎಸ್. ನಾಯ್ಕ, ದೈಹಿಕ ಶಿಕ್ಷಣ ಪರಿವೀಕ್ಷಕರಾದ ಶ್ರೀ ಎಸ್.ಎನ್. ಗೌಡ, ಸೈಯದ್ ಅಲಿ, ಫಿರ್ಯಾದೆ, ಶಿಕ್ಷಣ ಸಂಯೋಜಕರಾದ ಆರ್.ಪಿ.ಹರಿಜನ, ಶಿಕ್ಷಕ ಸಂಘದ ಅಧ್ಯಕ್ಷರಾದ ಎನ್.ಎಸ್. ನಾಯ್ಕ, ಸುದೀಶ ನಾಯ್ಕ, ಕೆ.ಜಿ. ಗೌಡ, ಸಾಧನಾಬರ್ಗಿ, ಪಿ.ಎಲ್. ಚಲವಾದಿ ಹಾಗೂ ಸಿ.ಆರ್.ಪಿ ಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಅತ್ಯಂತ ಪ್ರಾಮಾಣಿಕ ಸೇವೆ ಸಲ್ಲಿಸಿ ಶಿಕ್ಷಕರ ಮೆಚ್ಚುಗೆಗಳಿಸಿದ ಹೊನ್ನಾವರ ತಾಲೂಕಾ ದೈಹಿಕ ಶಿಕ್ಷಣ ಪರಿವೀಕ್ಷಕರಾದ ಎಸ್.ಎನ್. ಗೌಡ ಇವರನ್ನು ಸನ್ಮಾನಿಸಲಾಯಿತು. ಹಾಗೂ ಹೊನ್ನಾವರದ ನೂತನ ಬಿ.ಇ.ಒ ಆಗಿ ಅಧಿಕಾರ ವಹಿಸಿಕೊಂಡ ಗಿರೀಶ ಪದಕಿ ಇವರಿಗೆ ಸ್ವಾಗತ ಕೋರಲಾಯಿತು.
ಕ್ರೀಡಾಕೂಟದ ಸಂಚಾಲಕರಾದ ಎಮ್.ಜಿ. ನಾಯ್ಕ ಇವರು ಸ್ವಾಗತಿಸಿದರು, ಆರ್.ಬಿ. ಶೆಟ್ಟಿ ಶಿಕ್ಷಕರು ಕಾರ್ಯಕ್ರಮ ನಿರೂಪಿಸಿದರು, ಎಸ್.ಜಿ ಭಟ್ ಶಿಕ್ಷಕರು ವಂದಿಸಿದರು. ಕ್ರೀಡಾಕೂಟದಲ್ಲಿ ಹಡಿನಬಾಳ, ಖರ್ವಾ, ಚಿಕ್ಕನಕೋಡ, ಗುಂಡಬಾಳ ಕ್ಲಸ್ಟರ್ಗಳ ಸುಮಾರು 300 ಕ್ಕೂ ಹೆಚ್ಚು ಕ್ರೀಡಾ ಪಟುಗಳು ಭಾಗವಹಿಸಿದರು.
Leave a Comment