ಹೊನ್ನಾವರ:
ತಾಲೂಕಿನ ಮಾವಿನಕುರ್ವಾದ ಪ್ರಸಿದ್ಧ ಶ್ರೀ ಗೋಪಾಲಕೃಷ್ಣ ದೇವರ ಸನ್ನಿಧಿಯಲ್ಲಿ `ಅನಂತ ಚತುರ್ದಶಿ’ ಅಂಗವಾಗಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿದವು.
ಬೆಳಿಗ್ಗೆ ಶ್ರೀ ದೇವರ ಸನ್ನಿಧಿಯಲ್ಲಿ ದೇವತಾ ಪ್ರಾರ್ಥನೆ, ಅನಂತ ಚತುರ್ಥ ವೃತಾಚರಣೆ, ವಿಶೇಷ ಪುಷ್ಪಾಲಂಕಾರ, ಮಹಾಮಂಗಳಾರತಿ, ಮಹಾನೈವೇದ್ಯ, ಹಾಗೂ ಶರಾವತಿ ನದಿಯ ತಟದಲ್ಲಿ ಯಮುನಾ ಪೂಜೆಯೊಂದಿಗೆ ವೃತ ಕಲಶ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು. ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ವೈದಿಕರಾದ ನರಸಿಂಹ ಸುಬ್ರಾಯ ಭಟ್ಟ, ಪಾಂಡುರಂಗ ಭಟ್ಟ ಹಾಗೂ ಚರಡಪ್ಪ ಅವರ ನೇತೃತ್ವದಲ್ಲಿ ವಿಜೃಂಭಣೆಯಿಂದ ಜರುಗಿತು. ಮಹಾಪೂಜೆಯ ನಂತರ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು.
ರಾತ್ರಿ 7 ಗಂಟೆಯಿಂದ ಕುಮಟಾ ಕಲಾವಿದರಿಂದ ಗುಮಟೆ ವಾದ್ಯ ಕಾರ್ಯಕ್ರಮ ನಡೆಯಿತು. ಊರಿನ ಹಾಗೂ ಪರಸ್ಥಳಿಕರು ಭಕ್ತಮಹಾಶಯರು ಸಾಗರೋಪಾದಿಯಲ್ಲಿ ಶ್ರೀ ದೇವರ ಸನ್ನಿದಿಗೆ ಆಗಮಿಸಿ ಶ್ರೀ ದೇವರ ಪ್ರಸಾದ ಸ್ವೀಕರಿಸಿ ಪುನೀತರಾದರು.
Leave a Comment