ಭಟ್ಕಳ: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಗುಂಡಿಕ್ಕಿ ಕೊಂದಿರುವುದು ಒಂದು ಹೇಯ ಕೃತ್ಯವಾಗಿದ್ದು ಇದು ಖಂಡನೀಯ ಎಂದು ಭಟ್ಕಳ ತಾಲೂಕ ಕಾರ್ಯನಿರತ ಪತ್ರಕರ್ತರ ಸಂಘ ಹೇಳಿದೆ. ಈ ಕುರಿತು ಪತ್ರಿಕಾ ಹೇಳಿಕೆಯನ್ನು ನೀಡಿರುವ ಸಂಘದ ಅಧ್ಯಕ್ಷ ರಾಧಾಕೃಷ್ಣ ಭಟ್ಟ ಹಾಗೂ ಪ್ರಧಾನ ಕಾರ್ಯದರ್ಶಿ ಭಾಸ್ಕರ ನಾಯ್ಕ ರಾಜ್ಯದಲ್ಲಿ ಇಂತಹ ಘಟನೆ ಮರುಕಳಿಸದಂತೆ ರಾಜ್ಯ ಸರಕಾರ ಸೂಕ್ತ ಭದ್ರತೆಯನ್ನು ವದಗಿಸಬೇಕು. ಹಾಗೂ ಗೌರಿ ಲಂಕೇಶ್ ಅವರ ಹತ್ಯೆಯ ತನಿಖೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು, ಹಂತಕರ ಬಂಧನಕ್ಕೆ ವಿಳಂಬವಿಲ್ಲದೇ ಮುಂದಾಗಬೇಕು ಎಂದೂ ಮುಖ್ಯ ಮಂತ್ರಿಯವರನ್ನು ಆಗ್ರಹಿಸಿದೆ.
Leave a Comment