• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ರಾಜಕೀಯ ಕ್ಷೇತ್ರದಲ್ಲಿ ಕೇಲವು ನಾಯಕರು ಕ್ಷಣಿಕ ಸುಖಕ್ಕಾಗಿ ಬಲಿ ಬಿಳುತ್ತಿದ್ದಾರೆ;ಸಚಿವ ಆರ್.ವಿ.ದೇಶಪಾಂಡೆ

September 12, 2017 by Sachin Hegde Leave a Comment

ಹಳಿಯಾಳ: ರಾಜಕೀಯ ಕ್ಷೇತ್ರದಲ್ಲಿ ಕೇಲವು ನಾಯಕರು ಕ್ಷಣಿಕ ಸುಖಕ್ಕಾಗಿ ಬಲಿ ಬಿಳುತ್ತಿದ್ದಾರೆ. ಹಾಗಾಗಬಾರದು ಪಕ್ಷದಲ್ಲಿ ಭಿನ್ನಾಭಿಪ್ರಾಯ ಇರಬಾರದು, ಪಕ್ಷದ ಸಂಘಟನೆಗೆ ಇದು ಮಾರಕವಾಗುತ್ತದೆ ಆದ್ದರಿಂದ ಪಕ್ಷದ ಸಂಘಟನೆಗೆ ನಿಷ್ಠೆಯಿಂದ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸುವ ಮೂಲಕ ಪಕ್ಷವನ್ನು ಅಧಿಕಾರಕ್ಕೆ ತಂದು ಜನರು ಜನಪ್ರತಿನಿಧಿಗಳ ಮೇಲಿಡುವ ಆಶಯವನ್ನು ಈಡೇರಿಸಿ ಅಭಿವೃದ್ದಿಪಥದಲ್ಲಿ ಸಾಗಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಕರೆ ನೀಡಿದರು.
ಪಟ್ಟಣದ ಸೆಂಟ್ ಮೀಲಾಗ್ರಿಸ್ ಸಮುದಾಯ ಭವನದಲ್ಲಿ ಏರ್ಪಡಿಸಲಾದ ಹಳಿಯಾಳ ಗ್ರಾಮೀಣ ಮತ್ತು ನಗರ, ಭೂತ, ವಾರ್ಡ ಮತ್ತು ಘಟಕ ಸಮೀತಿಯ ಸದಸ್ಯರ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.
ಜನರ ಆಶೀರ್ವಾದದಿಂದ ನಾವು ವೇದಿಕೆಯಲ್ಲಿ ಕುಳಿತುಕೊಂಡಿದ್ದೇವೆ ಜನರ ವಿಶ್ವಾಸಕ್ಕೆ ಸ್ಪಂದಿಸುವ ಮೂಲಕ ಸಿದ್ದರಾಮಯ್ಯನವರು ನೀಡಿದ ಭರವಸೆಯನ್ನು ಈಡೇರಿಸಿ ಬಡವರ, ರೈತರ, ಮಹಿಳೆಯರ, ಯುವಕ ಯುವತಿಯರ, ದಿನ, ದಲಿತರ ಎಲ್ಲಾ ವರ್ಗಗಳ ಅಭಿವೃದ್ದಿಗಾಗಿ ಜಾತ್ಯಾತೀತವಾಗಿ ಶ್ರಮಿಸಿದ್ದಾರೆ. ಎಲ್ಲಾ ಜಾತಿ ಧರ್ಮಗಳನ್ನು ಕೇವಲ ಕಾಂಗ್ರೇಸ್‍ನಲ್ಲಿ ಮಾತ್ರ ನೋಡಲು ಸಾಧ್ಯ. ರಾಷ್ಟ್ರದ ಅಭಿವೃದ್ದಿಗೆ ಸಾಮಾಜಿಕ ನ್ಯಾಯಕ್ಕೆ ಆರ್ಥಿಕವಾಗಿ ಬೆಳೆಯಬೇಕಾದರೇ ನಿಮ್ಮೆಲ್ಲರ ಸಹಕಾರದಿಂದ ಮಾತ್ರ ಸಾಧ್ಯವೆಂದ ದೇಶಪಾಂಡೆ ಸಾಮಾನ್ಯ ನ್ಯಾಯ ಬಿಜೆಪಿ ಪಕ್ಷದ ಶಬ್ದಕೊಶದಲ್ಲಿಯೇ ಇಲ್ಲ ಜಾತಿ ಭೇದ ಮಾಡುವುದು, ಬರಿ ಭಾಷಣ ಮಾಡಿ ಭರವಸೆ ನೀಡುವುದು ಇದರಿಂದ ದೇಶದ ಪ್ರಗತಿ ಸಾಧ್ಯವಿಲ್ಲ ಎಂದು ಬಿಜೆಪಿಯನ್ನು ಟಿಕಿಸಿದರು.
ಎಐಸಿಸಿ ವಿಭಾಗೀಯ ಉಸ್ತುವಾರಿ ಕಾರ್ಯದರ್ಶಿ ಮಾಣಿಕ್ಯಂ ಠಾಕೂರ ಮಾತನಾಡಿ ಹಳಿಯಾಳ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ದಿಗಳ ಬಗ್ಗೆ ಸಂತಸ ವ್ಯಕ್ತಪಡಿಸಿ ಸರ್ಕಾರದ ಅಭಿವೃದ್ದಿ ಕಾರ್ಯಕ್ರಮಗಳ ಬಗ್ಗೆ ಬೂತಮಟ್ಟದಲ್ಲಿ ಪ್ರತಿ ಮನೆಗೆ ಹೋಗಿ ಜನರಿಗೆ ಮಾಹಿತಿ ನೀಡಬೇಕು. ಹಳಿಯಾಳ-ಜೋಯಿಡಾ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟೂ 206 ಬೂತಗಳಿದ್ದು ಹಳಿಯಾಳ ತಾಲೂಕಿನಲ್ಲಿ 114ಬೂತಗಳಿದ್ದು ಕಾರ್ಯಕರ್ತರು ತಮ್ಮ ಬೂತಗಳ ವ್ಯಾಪ್ತಿಯಲ್ಲಿ ಶ್ರಮಿಸಿದರೇ ಪಕ್ಷದ ಗೆಲುವು ಖಂಡಿತ. 7 ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಆರ್.ವಿ.ದೇಶಪಾಂಡೆ ಅವರನ್ನು ಈ ಬಾರಿ 20 ಸಾವಿರ ಅಂತರದಿಂದ ಗೆಲ್ಲಿಸಬೇಕೆಂದು ಕರೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಮಾತನಾಡಿ ಮೋದಿ ಸರ್ಕಾರ ಬಂದಾಗಿನಿಂದ ಅಚ್ಚೇ ದಿನ್ ಬರಲೇ ಇಲ್ಲ ಒಳ್ಳೆಯ ದಿನ ಕಾಂಗ್ರೇಸ್ ಆಡಳಿತದಲ್ಲಿ ಮಾತ್ರ ಇತ್ತು ಮೋದಿಜಿಯವರೇ ನಮಗೆ ನಿಮ್ಮ ಭಾಷಣ ಬೇಕಿಲ್ಲ ಎಂದು ಕಿಡಿ ಕಾರಿದರು.
ಕೆಪಿಸಿಸಿ ರಾಜ್ಯ ಕಾರ್ಯಾಧ್ಯಕ್ಷ ಎಸ್.ಆರ್.ಪಾಟೀಲ್ ಮಾತನಾಡಿ ಕಾಂಗ್ರೇಸ್ ಪಕ್ಷ ಚುನಾವಣೆ ಸಮಯದಲ್ಲಿ ನೀಡಿದ 165 ಭರವಸೆಗಳಲ್ಲಿ 159ಭರವಸೆಯನ್ನು ಈಡೇರಿಸುವ ಮೂಲಕ ಜನರ ವಿಶ್ವಾಸ ಗಳಿಸಿದೆ. ಸಿದ್ದರಾಮಯ್ಯನವರು ನೀರಾವರಿಗಾಗಿ ಬಜೆಟ್‍ನಲ್ಲಿ 63ಸಾವಿರ ಕೋಟಿ ಹಣವನ್ನು ಮೀಸಲಿಟ್ಟಿದ್ದು ಮುಂದಿನ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷದ ಗೆಲುವು ಖಚಿತ ಎಂದರು.
ಕಾಂಗ್ರೇಸ್ ಜಿಲ್ಲಾಧ್ಯಕ್ಷ ಭೀಮಣ್ಣಾ ನಾಯ್ಕ, ಕೆಪಿಸಿಸಿ ಸದಸ್ಯ ಪ್ರಶಾಂತ ದೇಶಪಾಂಡೆ, ವಿಧಾನ ಪರಿಷತ್ ಸದಸ್ಯ ಜಿ.ಆರ್.ಪಾಟೀಲ್ ಕಾಂಗ್ರೇಸ್ ಸರ್ಕಾರದ ಸಾಧನೆ ಬಗ್ಗೆ ಮಾತನಾಡಿದರು. ವೇದಿಕೆಯಲ್ಲಿ ಜಿಪಂ ಉಪಾಧ್ಯಕ್ಷ ಸಂತೋಷ ರೇಣಕೆ, ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ವೇರೋನಿಕಾ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುಭಾಷ ಕೊರ್ವೆಕರ, ಜಿಪಂ ಸದಸ್ಯರಾದ ಲಕ್ಷ್ಮೀ ಕೊರ್ವೆಕರ, ಕೃಷ್ಣಾ ಪಾಟೀಲ್, ವಕ್ಫ್ ಬೋರ್ಡ ಜಿಲ್ಲಾಧ್ಯಕ್ಷ ಖಯ್ಯಾಮ ಮುಗದ, ತಾಪಂ ಅಧ್ಯಕ್ಷೆ ರೀಟಾ ಸಿದ್ದಿ, ಎಪಿಎಮ್‍ಸಿ ಅಧ್ಯಕ್ಷ ಶ್ರೀನಿವಾಸ ಘೋಟ್ನೇಕರ, ಪುರಸಭೆ ಅಧ್ಯಕ್ಷ ಉಮೇಶ ಬೊಳಶೆಟ್ಟಿ. ಪುರಸಭೆ ಸದಸ್ಯ ಸತ್ಯಜೀತ ಗಿರಿ ಕಾರ್ಯಕ್ರಮ ನಿರ್ವಹಿಸಿದರು.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Haliyal News Tagged With: ಅಭಿವೃದ್ದಿಪಥದಲ್ಲಿ ಸಾಗಬೇಕೆಂದು, ಒಗ್ಗಟ್ಟಾಗಿ ಶ್ರಮಿಸುವ ಮೂಲಕ ಪಕ್ಷ, ಕೇಲವು ನಾಯಕರು ಕ್ಷಣಿಕ ಸುಖಕ್ಕಾಗಿ ಬಲಿ ಬಿಳುತ್ತಿದ್ದಾರೆ, ದಲಿತರ ಎಲ್ಲಾ ವರ್ಗಗಳ, ದಿನ, ಪಕ್ಷದ ಸಂಘಟನೆ, ಪಕ್ಷದಲ್ಲಿ ಭಿನ್ನಾಭಿಪ್ರಾಯ ಇರಬಾರದು, ಬಡವರ, ಮಹಿಳೆಯರ, ಯುವಕ ಯುವತಿಯರ, ರಾಜಕೀಯ ಕ್ಷೇತ್ರ, ರೈತರ, ಸಚಿವ ಆರ್.ವಿ.ದೇಶಪಾಂಡೆ

Explore More:

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,185 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar