ಕಾರವಾರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಆಶ್ರಯದಲ್ಲಿ ಡೆಂಗ್ಯೂ ಜ್ವರ ಕುರಿತು ಜಾಗೃತಿ ಹಾಗೂ ಉಚಿತ ಚಿಕಿತ್ಸಾ ಶಿಬಿರವನ್ನು ಜಿಲ್ಲಾ ಆಯುಷ್ ಇಲಾಖೆಯ ವತಿಯಿಂದ ಸೆಪ್ಟಂಬರ್ 13 ರಂದು ಬೆಳಗ್ಗೆ 10 ರಿಂದ ಮದ್ಯಾಹ್ನ 2 ಗಂಟೆಯವರೆಗೆ ಭಟ್ಕಳ ತಾಲೂಕು ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ಶಿಬಿರದಲ್ಲಿ ಆಯುರ್ವೇದ ತಜ್ಞವೈದ್ಯರು ಮತ್ತು ಇಲಾಖೆ ಸಿಬ್ಬಂದಿಗಳು ಡೆಂಗ್ಯೂ ಜ್ವರ ಲಕ್ಷಣಗಳಿರುವ ರೋಗಿಗಳನ್ನು ಪರೀಕ್ಷಿಸಿ ಆಯುರ್ವೇದ ಔಷಧಿಗಳನ್ನು ಮಾತ್ರ ನೀಡುುವರು. ಭಟ್ಕಳ ತಾಲೂಕಿನ ಸಾರ್ವಜನಿಕರು ಶಿಬಿರದಲ್ಲಿ ಭಾಗವಹಿಸಿ ಸದುಪಯೋಗಪಡೆದುಕೊಳ್ಳಬೇಕೆಂದು ಜಿಲ್ಲಾ ಅಯಷ್ ಅಧಿಕಾರಿ ಡಾ. ಸಿ.ಆರ್. ಬಸವರಾಜಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment