ಹೊನ್ನಾವರ:
ಸಮಾಜ ಘಾತುಕ ಶಕ್ತಿಗಳ ಅಟ್ಟಹಾಸವನ್ನು ವಿರೋಧಿಸಿ ಹೊನ್ನಾವರ ತಾಲೂಕಾ ಸಂಘ ಪರಿವಾರದ ಮುಖಂಡರು ಹೊನ್ನಾವರದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿದರು. ನಂತರ ಹೆದ್ದಾರಿಯಲ್ಲಿ ಮೆರವಣಿಗೆ ನಡೆಸಿದ ಪ್ರಮುಖರು ತಹಸಿಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ನೀಡಿದರು.
ಹಿಂದು ಸಂಘಡನೆಯ ಪ್ರಮುಖ ವಿಶ್ವನಾಥ ನಾಯಕ ಮಾತನಾಡಿ ಕಳೆದ 4 ವರ್ಷದಿಂದ ನಮ್ಮ ಹಿಮದು ಸಂಘಟನಾಕಾರ್ಯಕರ್ತರನ್ನು ಗುರಿಯಾಗಿಸಿ ಹತ್ಯೆಯಾಗುತ್ತಿದೆ ಸಂಭದಿಸಿದ ಅಪರಾಧಿಗಳನ್ನನ್ನು ಪತ್ತೆಹಚ್ಚುವದಾಗಲಿ ಮಾಡಿಲ್ಲ .ಭಟ್ಕಳದಲ್ಲಿ ಇತ್ತಿಚಿಗೆ ನಡೆದ ಪ್ರಕರಣ ಪುರಸಭಾ ಅಧಿಕಾರಿಗಳು ಹಾಗು ಜಿಲ್ಲಾಢಳಿತದ ನಿಲಕ್ಷ ಅದನ್ನು ವಿರೋದಿಸಿದ ನಮ್ಮ ಹಿಂದು ಸಂಘಟನೆಯವರ ಮೇಲೆ ಆಯ್.ಪಿ,ಸಿ, ಸೆಕ್ಷಣ್ 395 ದರೋಡೆ ಪ್ರಕರಣ ದಾಖಲಿಸಿರುವುದು ಪಿತೂರಿಯಾಗಿದೆ . ಅನ್ಯಾಯಕ್ಕೆ ಒಳಗಾದ ಆಕುಟುಂಕ್ಕೆ ನ್ಯಾಯ ನೀಡುವ ಜೊತೆ ಪ್ರಕರಣ ಹಿಂಪಡೆಯುವಂತೆ ಆಗ್ರಹಿಸಿದರು.
ಸುಬ್ರಾಯ ನಾಯ್ಕ ಮಾತನಾಡಿ ಬಡ ವ್ಯಾಪಾರಿಗಳನ್ನು ಬಿದಿಗೆ ತಳ್ಳಿದ್ದಾರೆ .ಸರ್ಕಾರ ಹಾಗು ಜಿಲ್ಲಾಡಳಿತ ಸಮಸ್ಯೆ ಬಗೆಹರಿಸಲು ವಿಫಲವಾಗಿದೆ ಇವರ ನಿಲಕ್ಷದಿಂದಾಗಿ ಇಂತಹ ಘಟನೆ ನಡೆದಿದೆ .ತಕ್ಷಣ ರಾಮಚಂದ್ರ ನಾಯ್ಕ ಕುಟುಂಬಕ್ಕೆ 10 ಲಕ್ಷ ಪರಿಹಾರ ನೀಡುವ ಜೊತೆ ನಮ್ಮ ಹಿಂದು ಕಾರ್ಯಕರ್ತರ ಮೇಲೆ ಹಾಕಿದ ಕೇಸ್ ವಾಪಸ್ಸು ಪಡೆದು ಅವರ ಬೀಡುಗಡೆ ಮಾಡಬೇಕು . ಇಲ್ಲದೆ ಹೊದಲ್ಲಿ ಜಿಲ್ಲಾದ್ಯಂತ ಹೊರಾಟ ನಡೆಸುವ ಜೊತೆ ಮುಂದೆ ನಡೆಯುವ ಪರಿಣಾಮಕ್ಕೆ ಜಿಲ್ಲಾಡಳಿತ ಸರ್ಕಾರ ಹೊಣೆ ಎಂದರು.
ಬಹಳ ವರ್ಷಗಳಿಂದ ಶಾಂತವಾಗಿದ್ದ ಭಟ್ಕಳ ನಗರದಲ್ಲಿ ಮತ್ತೊಮ್ಮೆ ಅಶಾಂತಿ ಹೊಗೆಯಾಡುತ್ತಿದೆ. ಆತಂಕದ ವಿಷಯವೆಂದರೆ ಮತೀಯ ಗಲಭೆ ಸೃಷ್ಟಿಷಲು ಸಮಾಜ ಘಾತುಕ ಶಕ್ತಿಗಳು ವಿಭಿನ್ನ ಮಾರ್ಗವನ್ನು ಆಯ್ದುಕೊಂಡಿರುವುದು. ಭಟ್ಕಳ ನಗರದಲ್ಲಿ ಅಲ್ಪ ಸಂಖ್ಯಾತರಾಗಿರುವ ಹಿಂದುಗಳು ಕಷ್ಟಪಟ್ಟು ವ್ಯಾಪಾರ ಮಾಡಿ ಮರ್ಯಾದೆಯಿಂದ ಜೀವನ ನಡೆಸುತ್ತಿದ್ದು ಇದನ್ನು ಸಹಿಸದ ಅನ್ಯಕೋಮಿನ ಪುಂಡರು ಅಳಿದುಳಿದ ಹಿಂದೂಗಳನ್ನು ಬೀದಿಪಾಲು ಮಾಡುವ ಉದ್ದೇಶದಿಂದ ಪುರಸಭೆಯ ವಾಣಿಜ್ಯ ಸಂಕೀರ್ಣಗಳ ಸವಾಲಿನಲ್ಲಿ ಎರ್ರಾಬಿರ್ರಿ ಬೆಲೆ ಎರಿಸಿ ಹಲವು ವರ್ಷಗಳಿಂದ ವ್ಯಾಪಾರ ನಡೆಸುತ್ತಿರುವ ಹಿಂದೂ ವ್ಯಾಪಾರಸ್ಥರನ್ನು ಕಂಗಾಲು ಮಾಡುವ ಹುನ್ನಾರ ಮಾಡುತ್ತಿದೆ. ಇದರಿಂದ ನೊಂದ ವ್ಯಾಪಾರಿ ರಾಮಚಂದ್ರ ನಾಯ್ಕ ಸಾರ್ವಜನಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಬೆಂಕಿ ಹಚ್ಚಿಕೊಂಡಂತಹ ಹ್ರದಯ ವಿದ್ರಾವಕ ಘಟನೆ ನಡೆದಿದೆ. ಸಮಬಂಧಪಟ್ಟ ಅಧಿಕಾರಿಗಳು ಇದನ್ನು ತಪ್ಪಿಸದೆ ಆತನ ಸಾವಿನ ಕಾರಣರಾಗಿದ್ದಾರೆ. ಇದು ಆತ್ಮಹತ್ಯೆ ಅಲ್ಲ ಯೋಜಿತ ಕೊಲೆ. ಹಿಂದೂಗಳ ವಿಚಾರದಲ್ಲಿ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಸರ್ಕಾರ ಗಾಢನಿದ್ರೆಯಿಂದ ಎಚ್ಚೆತ್ತು ಪೀಡಿತರ ಪರಿವಾರಕ್ಕೆ 10 ಲಕ್ಷರೂ ಪರಿಹಾರ ನೀಡಬೇಕು. ಹಿಂದೂ ಅಮಾಯಕರ ಮೇಲೆ ಹಾಕಿದ ಕೇಸ್ ವಾಪಾಸ್ ಪಡೆದು 15 ಜನರನ್ನು ಬಂದಿ ಮುಕ್ತಗೊಳಿಸಬೇಕು ಮತ್ತು ಹದಗೆಡುತ್ತಿರುವ ಪರಿಸ್ಥಿತಿಯನ್ನು ಸಹಜಸ್ಥಿತಿಗೆ ತರಲು ಕಾರಣ ಕ್ರಮ ಕೈಗೊಳ್ಳಬೇಕು. ಅಮಾಯಕ ವ್ಯಾಪಾರಸ್ಥರ ಶೋಷಣೆ ನಿಲ್ಲಬೇಕು ಬೆರೆಲ್ಲಿಯು ಈ ರೀತಿಯ ಅನ್ಯಾಯ ನಡೆಯಬಾರದು. ಒಂದು ವೇಳೆ ವಿಳಂಬ ಮಾಡಿದರೆ ಸಂಘ ಪರಿವಾರದ ವತಿಯಿಂದ ಜಿಲ್ಲಾ ಬಂದ್ ಕರೆ ನೀಡಿ ಪ್ರತಿಭಟನೆ ನಡೆಸಲಾಗುವುದು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಹೆದ್ದಾರಿಯಲ್ಲಿ ಮೆರವಣಿಗೆ ನಡೆಸಿದ ಮುಖಂಡರು ತಹಸಿಲ್ದಾರರ ಮುಖೇನ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಮುಖಂಡರಾದ ಎಂ.ಜಿ.ನಾಯ್ಕ, ಸುಬ್ರಾಯ ನಾಯ್ಕ, ವಿನೋದ ನಾಯ್ಕ, ವೆಂಕ್ರಟಮಣ ಹೆಗಡೆ ಕವಲಕ್ಕಿ, ಉಮೇಶ ನಾಯ್ಕ, ಶಂಕರ ನಾಯ್ಕ, ದಾಮೋದರ ಮೇಸ್ತ, ಸುಬ್ರಹ್ಮಣ್ಯ ಶಾಸ್ರೀ, ಶಿವರಾಜ ಮೇಸ್ತ, ನಾರಾಯಣ ಹೆಗಡೆ, ಸಂಜಯ ಶೇಟ್, ವಿಜಯ ಕಾಮತ ಹಾಗೂ ಹಲವು ಹಿಂದುಪರ ಕಾರ್ಯಕರ್ತರು ಭಾಗವಹಿಸಿದ್ದರು. ರಾಜು ಭಂಡಾರಿ ಮನವಿ ಪತ್ರ ಓದಿದರು. ತಹಸೀಲ್ದಾರ ಮನವಿ ಸ್ವೀಕರಿಸಿದರು.
Leave a Comment