ಕಾರವಾರ: ಕರಾವಳಿ ಹಾಗೂ ಮಲೆನಾಡಿನಲ್ಲಿ ಸೋಮವಾರ ಮಳೆ ಸುರಿದಿದೆ. ಎರಡು ದಿನಗಳ ಕಾಲ ಬಿಡುವು ನೀಡಿದ್ದ ಮಳೆ ಸೋಮವಾರ ಧಾರಾಕಾರವಾಗಿ ಸುರಿಯಿತು.
ಅಂಕೋಲಾ, ಕುಮಟಾ, ಕಾರವಾರ ನಗರ ಪ್ರದೇಶದಲ್ಲಿ ಮಳೆ ವ್ಯಾಪಕವಾಗಿತ್ತು. ಹೊನ್ನಾವರ ಹಾಗೂ ಭಟ್ಕಳ ಗ್ರಾಮೀಣ ಭಾಗಗಳಲ್ಲಿ ಬಿಟ್ಟು ಬಿಟ್ಟು ಮಳೆ ಸುರಿಯಿತು. ಮಳೆ ಹೆಚ್ಚಿದ್ದರಿಂದ ನದಿಗಳು ತುಂಬಿ ಹರಿದವು. ರಾಷ್ಟ್ರೀಯ ಹೆದ್ದಾರಿ ಇಕ್ಕೆರಡು ಬದಿಗಳಲ್ಲಿ ನೀರು ನಿಂತಿದ್ದು, ಪ್ರಯಾಣಿಕರು ತೊಂದರೆ ಅನುಭವಿಸಿದರು. ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 0.8 ಮಿ.ಮೀ ಮಳೆಯಾಗಿದ್ದು ಸರಾಸರಿ 0.3 ಮಿ.ಮೀ ಮಳೆ ದಾಖಲಾಗಿದೆ. ಸಪ್ಟಂಬರ್ ತಿಂಗಳ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ 253.1 ಮಿ.ಮೀ ಇದ್ದು ಇದುವರೆಗೆ ಸರಾಸರಿ 221.9 ಮಿ.ಮೀ. ಮಳೆ ದಾಖಲಾಗಿದೆ.
ಅಂಕೋಲಾ 0 ಮಿ.ಮೀ, ಭಟ್ಕಳ 0 ಮಿ.ಮೀ, ಹಳಿಯಾಳ 0.0 ಮಿ.ಮೀ. ಹೊನ್ನಾವರ 0 ಮಿ.ಮೀ, ಕಾರವಾರ 0 ಮಿ.ಮೀ, ಕುಮಟಾ 0.8 ಮಿ.ಮೀ, ಮುಂಡಗೋಡ 0.0 .ಮಿ.ಮೀ, ಸಿದ್ದಾಪುರ 0 ಮಿ.ಮೀ, ಶಿರಸಿ 0 ಮಿ.ಮೀ., ಜೋಯಡಾ 0 ಮಿ.ಮೀ, ಯಲ್ಲಾಪುರ 0 ಮಿ.ಮೀ. ಮಳೆಯಾಗಿದೆ.
ಜಲಾಶಯ ನೀರಿನ ಮಟ್ಟ: ಜಿಲ್ಲೆಯ ಜಲಾಶಯಗಳ ಇಂದಿನ ನೀರಿನ ಮಟ್ಟ :.
ಕದ್ರಾ: 34.50ಮೀ (ಗರಿಷ್ಟ), 31.55 ಮೀ (ಇಂದಿನ ಮಟ್ಟ), 3201 ಕ್ಯೂಸೆಕ್ಸ್ (ಒಳಹರಿವು) 3802 ಕ್ಯೂಸೆಕ್ಸ (ಹೊರ ಹರಿವು) ಕೊಡಸಳ್ಳಿ: 75.50ಮೀ (ಗರಿಷ್ಟ), 70.40 ಮೀ. (ಇಂದಿನ ಮಟ್ಟ), 2303 ಕ್ಯೂಸೆಕ್ಸ್ (ಒಳ ಹರಿವು) 1710 (ಹೊರ ಹರಿವು ) ಸೂಪಾ: 564ಮೀ (ಗ), 547.85 ಮೀ (ಇ.ಮಟ್ಟ), 3796.019 ಕ್ಯೂಸೆಕ್ಸ್ (ಒಳ ಹರಿವು), 133.75(ಹೊರ ಹರಿವು ) ತಟ್ಟಿಹಳ್ಳ: 468.38ಮೀ (ಗ), 450.93 ಮೀ (ಇ.ಮಟ್ಟ), (ಒಳ ಹರಿವು ಇರುವದಿಲ್ಲ) 57.ಕ್ಯೂಸೆಕ್ಸ (ಹೊರ ಹರಿವು) ಬೊಮ್ಮನಹಳ್ಳಿ: 438.38 ಮೀ (ಗ), 435.80 ಮೀ (ಇ.ಮಟ್ಟ), 245 ಕ್ಯೂಸೆಕ್ಸ್ (ಒಳ ಹರಿವು) 1148 ಕ್ಯೂಸೆಕ್ಸ್ (ಹೊರ ಹರಿವು) ಗೇರುಸೊಪ್ಪ: 55ಮೀ (ಗ), 50.47 ಮೀ (ಇ.ಮಟ್ಟ) 1901 ಕ್ಯೂಸೆಕ್ಸ್ (ಒಳ ಹರಿವು) 2810 ಕ್ಯೂಸೆಕ್ಸ್ (ಹೊರ ಹರಿವು ) ಲಿಂಗನಮಕ್ಕಿ 1819 ಅಡಿ (ಗ), 1797.35 ಅ (ಇಂದಿನ ಮಟ್ಟ). 4418 ಕೂಸೆಕ್ಸ (ಒಳ ಹರಿವು) 1486.93 ಕ್ಯೂಸೆಕ್ಸ್(ಹೊರ ಹರಿವು ) ಕಂಡು ಬಂದಿದೆ.
Leave a Comment