ಹಳಿಯಾಳ:
ವಿವಿಧ ಹಿಂದೂ ಸಂಘಟನೆಗಳು ಹಾಗೂ ಶಿವಪ್ರತಿಷ್ಠಾನ ನೇತೃತ್ವದಲ್ಲಿ ಕಳೆದ 6 ವರ್ಷಗಳಿಂದ ತಾಲೂಕಾ ಕೇಂದ್ರ ಹಳಿಯಾಳ ಪಟ್ಟಣದಲ್ಲಿ ದಸರಾ ಹಬ್ಬ, ನವರಾತ್ರಿ ಉತ್ಸವದ ಸಂದರ್ಭದಲ್ಲಿ ನಡೆಯುವ “ದುರ್ಗಾದೌಡ” ಧಾರ್ಮಿಕ ನಡಿಗೆ ಕಾರ್ಯಕ್ರಮದಲ್ಲಿ ಪ್ರತಿನಿತ್ಯ 8 ಸಾವಿರಕ್ಕೂ ಅಧಿಕ ಜನ ಶೃದ್ದಾಳುಗಳು ಪಾಲ್ಗೊಳ್ಳುವ ಮೂಲಕ ಅತ್ಯಂತ ಯಶಸ್ವಿ ಕಾರ್ಯಕ್ರಮವಾಗಿ ಪರಿವರ್ತನೆಯಾಗಿದೆ.
6 ವರ್ಷಗಳ ಹಿಂದೆ ಕೇವಲ 20 ಜನರಿಂದ ಪ್ರಾರಂಭವಾದ ದುರ್ಗಾದೌಡ ಕಾರ್ಯಕ್ರಮದಲ್ಲಿ ಇಂದು ಸಹಸ್ರಾರು ಜನ ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮ ಯಶಸ್ವಿಯಾಗಿದೆ. ಕರ್ನಾಟಕ ರಾಜ್ಯದ ಬೆಳಗಾವಿ ಜಿಲ್ಲೆ ಹಾಗೂ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಪಟ್ಟಣ ಹಾಗೂ ತಾಲೂಕಿನ ಕೆಲವು ಗ್ರಾಮಾಂತರ ಭಾಗದಲ್ಲಿ ಮಾತ್ರ ನಡೆಯುವ ಈ ವಿಶೀಷ್ಠ ಕಾರ್ಯಕ್ರಮದಲ್ಲಿ ಮಹಿಳೆಯರು ಮಕ್ಕಳು, ವೃದ್ದರೆÉನ್ನದೆ ಹುಮ್ಮಸ್ಸಿನಿಂದ ಸಾವಿರಾರು ಸಂಖ್ಯೆಯಲ್ಲಿ ಜನ ಪಾಲ್ಗೊಂಡು ದೇವಿಯರ ಆರಾಧನೆ ಮಾಡುತ್ತಾರೆ.
ದುರ್ಗಾದೌಡ ಹಿನ್ನೆಲೆ ಸಾರ್ವಜನೀಕರು ಸ್ವಯಂಪ್ರೇರಿತವಾಗಿ ಶ್ರಮದಾನಗಳನ್ನು ಮಾಡುತ್ತಿದ್ದು ತಮ್ಮ ಬಡಾವಣೆ, ಗಲ್ಲಿಗಳಲ್ಲಿ ಬರುವ ದೌಡನ್ನು ಸ್ವಾಗತಿಸಲು ಬೃಹತ್ ರಂಗೋಲಿಗಳು, ತಳಿರು ತೊರಣಗಳು, ಕೆಸರಿ ಪತಾಕೆಗಳು, ಭಗವಾಧ್ವಜಗಳಿಂದ ಶೃಂಗರಿಸುವುದು ಮಾತ್ರವಲ್ಲದೇ ತಮ್ಮ ಮಕ್ಕಳಿಗೆ ನವದುರ್ಗೆಯರ, ವೀರ ವನಿತೆಯರ, ರಾಧಾ ಕೃಷ್ಣ, ಭಾರತಾಂಬೆ ಇತ್ಯಾದಿ ಛದ್ಮವೇಷಗಳನ್ನು ತೊಡಿಸಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಪ್ರೇರೆಪಿಸುತ್ತಿರುವುದು ಕಾರ್ಯಕ್ರಮ ವಿಶೀಷ್ಠವಾಗಿ ರೂಪುಗೊಳ್ಳುವಂತೆ ಮಾಡಿದೆ. ಸದ್ಯ ಹಳಿಯಾಳ ಸಂಪೂರ್ಣ ಕೇಸರಿಮಯವಾಗಿದೆ.
ಪ್ರತಿದಿನ ಬೆಳಗಿನ ಜಾವ ಒಂದು ದೇವಸ್ಥಾನದಿಂದ ಮತ್ತೊಂದು ದೇವಸ್ಥಾನದ ವರೆಗೆ ನಡೆದಿರುವ ಈ ಧಾರ್ಮಿಕ ನಡಿಗೆ ಸೆ.21 ರಿಂದ ಆರಂಭಗೊಂಡಿದ್ದು, 10 ದಿನಗಳ ಕಾಲ ನಡೆಯಲಿರುವ ದುರ್ಗಾದೌಡ್ ಈಗಾಗಲೇ ಹಳಿಯಾಳ ಪಟ್ಟಣದ ಬಹುತೇಕ 40 ಕೀಮಿಗೂ ಹೆಚ್ಚು ಪ್ರದೇಶದಲ್ಲಿ ಸಂಚರಿಸಿದ್ದು ಸೆ.30 ಕ್ಕೆ ಕಾರ್ಯಕ್ರಮ ಬೃಹತ್ ಸಮಾವೇಶದ ಮೂಲಕ ಮುಕ್ತಾಯಗೊಳ್ಳಲಿದೆ.
ಪ್ರತಿದಿನ ಬೆಳಗಿನ ಜಾವ ಶ್ರದ್ಧೆಯಿಂದ ಒಂದು ದೇವಸ್ಥಾನದ ಆವರಣದಲ್ಲಿ 5.30 ಗಂಟೆಗೆ ಜಮಾವಣೆಗೊಳ್ಳುವ ಹಿಂದೂ ಧರ್ಮಿಯರು ಆ ದೇವರ ಪೂಜೆ ನೆರವೇರಿಸಿ ಭಜನೆಗಳೊಂದಿಗೆ, ವಾಧ್ಯ ಘೋಷ, ದೇವರ, ಮಹಾತ್ಮರ ಘೋಷಣೆಗಳೊಂದಿಗೆ ಮುಂದಿನ ದೇವಸ್ಥಾನದವರೆಗೆ ಧಾರ್ಮಿಕ ನಡಿಗೆ ಮಾಡುತ್ತಾರೆ.
ಈ ಮಹಾ ಮೆರವಣಿಗೆಯಲ್ಲಿ ಕೇಸರಿ ಬಣ್ಣದ ಭಗವಾಧ್ವಜ ಹಿಡಿದು ಧಾರ್ಮಿಕ ಘೋಷಣೆಗಳನ್ನು ಮೊಳಗಿಸುತ್ತಾ ಸಾಗುವ ಮಕ್ಕಳು, ಯುವಕ-ಯುವತಿಯರು, ಮಹಿಳೆಯರು, ಪುರುಷರು ಹೀಗೆ ಸಹಸ್ರ-ಸಹಸ್ರ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿರುವ ಹಿಂದೂ ಧರ್ಮಿಯರು ದುರ್ಗಾದೌಡ್ ಧಾರ್ಮಿಕ ಓಟಕ್ಕೆ ದಾಖಲೆ ಸೃಷ್ಟಿಸಿದ್ದಾರೆ.
ಬುಧವಾರ ಧಾರ್ಮಿಕ ನಡಿಗೆ ಪಟ್ಟಣದ ಗುತ್ತಿಗೇರಿಗಲ್ಲಿ, ಮೇದಾರಗಲ್ಲಿ, ತಾನಾಜಿಗಲ್ಲಿ ಆಗಮಿಸಿದಾಗ ಅಲ್ಲಿಯ ಜನ ದೌಡನ್ನು ಅದ್ದೂರಿಯಾಗಿ ಸ್ವಾಗತಿಸಿದರು ರಸ್ತೆಯ ತುಂಬೆಲ್ಲ ಬೃಹತ್ ಚಿತ್ತಾರದ ರಂಗೋಲಿಗಳು, ತಳಿರು ತೊರಣಗಳು, ಎಲ್ಲೆಡೆ ಕೇಸರಿ ಪತಾಕೆಗಳು, ಸುಮಾರು 60 ಕ್ಕೂ ಹೆಚ್ಚು ಛದ್ಮವೇಷಧಾರಿಗಳು ಅವುಗಳಲ್ಲಿ ಪ್ರಮುಖವಾದವು ಶ್ರೀರಾಮ ಸೇತು ನಿರ್ಮಾಣ ಕಾರ್ಯ, ಹನುಮಂತ ಸೀತಾಮಾತೆಗೆ ಉಂಗುರು ನೀಡುತ್ತಿರುವುದು, ನವದುರ್ಗೆಯರು, ಹಾಗೂ ಕೆಂಪು ಕೊಟೆ ಮಾದರಿ ನಿರ್ಮಾಣ, ಕೃತಕ ಜಲಪಾತ ಹೀಗೆ ಅನೇಕ ಅನೇಕ ಆಕರ್ಷಕ ಕಸರತ್ತುಗಳನ್ನು ಮಾಡುವುದರ ಮೂಲಕ ದಾಖಲೆ ಮಾಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಇನ್ನೂ 3 ದಿನಗಳ ಕಾಲ ದುರ್ಗಾದೌಡ ನಡೆಯಲಿದ್ದು ಇನ್ನೂ ಹೆಚ್ಚಿನ ವಿಶೇಷತೆಗಳನ್ನು ನೀರಿಕ್ಷಿಸಬಹುದಾಗಿದೆ.
Leave a Comment