ಹೊನ್ನಾವರ,ಶ್ರೀ ಚೆನ್ನಕೇಶವ ಪ್ರೌಢಶಾಲೆ, ಕರ್ಕಿಯ ಸಮರ್ಪಣಾ ತರಬೇತಿ ಕೇಂದ್ರದ ಸಂಪನ್ಮೂಲ ವ್ಯಕ್ತಿಗಳಿಂದ ಮತ್ತು ಸೇತುಬಂಧ ಟ್ರಸ್ಟ್ ಕರ್ಕಿ ಇವರ ಸಹಭಾಗಿತ್ವದಲ್ಲಿ ದಿ.11ರಂದು-ಬುಧವಾರದಿಂದ 10 ದಿನಗಳ ಕಾಲ ಉಚಿತವಾಗಿ ಎನ್. ಟಿ.ಎಸ್. ಇ. ಮತ್ತು ಎನ್.ಎಮ್. ಎಮ್. ಎಸ್ ಪರೀಕ್ಷಾ ಪೂರ್ವ ತರಬೇತಿ ನಡೆಯಲಿದೆ.
ಈ ತರಬೇತಿಯನ್ನು ಜಿಲ್ಲಾ ಉಪನಿರ್ದೇಶಕರಾದ ಪಿ.ಕೆ.ಪ್ರಕಾಶ ವಿದ್ಯುಕ್ತವಾಗಿ ಉಧ್ಘಾಟಿಸಲಿದ್ದಾರೆ. ಈ ಶೈಕ್ಷಣಿಕ ವರ್ಷ ದಲ್ಲಿ ಪರೀಕ್ಷೆಗೆ ನೋಂದಣಿ ಮಾಡಿಕೊಂಡ ತಾಲೂಕಿನ ಎಲ್ಲಾ ವಿಧ್ಯಾರ್ಥಿಗಳು ಈ ತರಬೇತಿಯ ಪ್ರಯೋಜನ ಪಡೆಯಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಗಿರೀಶ್ ಪದಕಿ ಮತ್ತು ತರಬೇತಿ ಕೇಂದ್ರದ ಸಂಚಾಲಕರಾದ ಶ್ರೀಕಾಂತ ಹಿಟ್ನಳ್ಳಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment