• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಉಜ್ವಲ ಯೋಜನೆಯಡಿ 15 ಫಲಾನುಭವಿಗಳಿಗೆ ಉಚಿತ ಗ್ಯಾಸ್ ಕಿಟ್ ವಿತರಣೆ

October 7, 2017 by Gaju Gokarna Leave a Comment

ಹನ್ನಾವರ;

ಕಡುಬಡವರೂ ಕೂಡಾ ಹೊಗೆಯುಕ್ತ ಒಲೆಗಳಿಂದ ಮುಕ್ತಿಹೊಂದಿ ಎಲ್ಪಿಜಿ ಗ್ಯಾಸ್ ಬಳಸಬೇಕೆಂಬ ನಿಟ್ಟಿನಲ್ಲಿ ಪ್ರಧಾನಿ ಮೋದಿಯವರ ನೇತ್ರತ್ವದ ಕೇಂದ್ರ ಸರಕಾರ ಜಾರಿಗೆ ತಂದ ಉಜ್ವಲ ಯೋಜನೆಯು ಅತ್ಯಂತ ಜನಪರ ಹಾಗೂ ಮಹತ್ವಾಕಾಂಕ್ಷಿ ಯೋಜನೆಯಾಗಿದೆ ಎಂದು ಬಿಜೆಪಿ ಪ್ರಮುಖರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷರೂ ಆದ ನಾಗರಾಜ ನಾಯಕ ತೊರ್ಕೆಯವರು ಹೇಳಿದರು.
ಹೊನ್ನಾವರ ತಾಲೂಕಿನ ಹಳದಿಪುರದ ಗೋಪಿನಾಥ ದೇವಸ್ಥಾನದ ಸಭಾಭವನದಲ್ಲಿ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಹಾಗೂ ಬಿಜೆಪಿ ಕಾರ್ಯಕರ್ತರ ಸಹಕಾರದಿಂದ ಕೇಂದ್ರದ ಉಜ್ವಲ ಯೋಜನೆಯಡಿ 15 ಫಲಾನುಭವಿಗಳಿಗೆ ಉಚಿತ ಗ್ಯಾಸ್ ಕಿಟ್ ಗಳೊಂದಿಗೆ ಟ್ರಸ್ಟ್ ನ ವತಿಯಿಂದ ಉಚಿತ ಲೈಟರಗಳನ್ನು ವಿತರಿಸುತ್ತಾ ಮಾತನಾಡಿದ ಅವರು ಹೊಗೆಯಿಂದ ತಾಯಂದಿರ ಸ್ವಾಸ್ಥ್ಯ ಕೆಡುತ್ತಿರುವುದಲ್ಲದೇ ಉರುವಲಿಗಾಗಿ ಪರಿಸರ ನಾಶವಾಗುತ್ತಿರುವುದನ್ನು ಮನಗಂಡ ಕೇಂದ್ರ ಸರಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ. ಇಂತಹ ಜನೋಪಯೋಗಿ ಯೋಜನೆಯನ್ನು ಜನಸಾಮಾನ್ಯರು ಹಣ, ಸಮಯ ವ್ಯಯಿಸದೇ ಸುಲಭವಾಗಿ ಮನೆಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ನಾವೆಲ್ಲ ಕಾರ್ಯ ನಿರ್ವಹಿಸುತ್ತಿದ್ದೇವೆ. ಮುಂದಿನ ದಿನಗಳಲ್ಲೂ ಕೇಂದ್ರ ಸರಕಾರ ಇನ್ನೂ ಹತ್ತು ಹಲವಾರು ಜನೋಪಯೋಗಿ ಯೋಜನೆಗಳನ್ನು ಜಾರಿಗೆ ತರಲಿದ್ದು ಅವುಗಳನ್ನು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ನಾವೆಲ್ಲ ಹೆಚ್ಚಿನ ಶ್ರಮ ವಹಿಸುತ್ತೇವೆ ಎಂದರು.
ಮುಖಂಡರಾದ ದಿನಕರ ಶೆಟ್ಟಿ ಯವರು ಮಾತನಾಡಿ ಇದೇ ಕಾರ್ಯಕ್ರಮ ಕಾಂಗ್ರೆಸ್ಸಿಗರ ಕೈಗೆ ಸಿಕ್ಕಿದಲ್ಲಿ ಅವರು ಇದಕ್ಕೆ ಕಮಿಷನ್ ಪಡೆದುಕೊಂಡು ಕೆಲಸ ಮಾಡುತ್ತಿದ್ದರು ಆದರೆ ನಮ್ಮ ನಿಷ್ಠಾವಂತ ಕಾರ್ಯಕರ್ತರು ಯಾರಿಂದಲೂ ಒಂದು ರೂಪಾಯಿ ಸಹ ಪಡೆಯದೇ ಬಡವರ ಸಮಯ ವ್ಯರ್ಥವಾಗದಂತೆ ಸುಲಭವಾಗಿ ಗ್ಯಾಸ್ ಕಿಟ್ ಗಳನ್ನು ವರ ಮನೆಬಾಗಿಲಿಗೆ ತಲುಪಿಸಿದ್ದಾರೆ. ಅಲ್ಲದೇ ಉಚಿತವಾಗಿ ಲೈಟರಗಳನ್ನು ವಿತರಿಸುತ್ತಿರುವ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷರಾದ ನಾಗರಾಜ ನಾಯಕ ತೊರ್ಕೆಯವರ ಕಾರ್ಯವನ್ನು ಶ್ಲಾಘಿಸಿದರು.
ಸೂರಜ ನಾಯ್ಕ ಸೋನಿಯವರು ಮಾತನಾಡಿ ಮುಂದಿನ ದಿನಗಳಲ್ಲಿ ಕೇಂದ್ರ ಸರಕಾರವು ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿದ್ದು ಅವುಗಳನ್ನು ಬಡವರಿಗೆ ತಲುಪಿಸುವ ನಿಟ್ಟಿನಲ್ಲಿ ಬಿಜೆಪಿ ಕಾರ್ಯಕರ್ತರು ಸನ್ನದ್ಧರಾಗಬೇಕೆಂದು ಕರೆ ನೀಡಿದರು.
ಗ್ಯಾಸ್ ವಿತರಕರ ಪರವಾಗಿ ಆಗಮಿಸಿದ ಮಂದಾರ ಗ್ಯಾಸ್ ಏಜೆನ್ಸಿಯ ಮಾಲಕರಾದ ಲಕ್ಷ್ಮೀನಾರಾಯಣ ಭಟ್ ರವರು ಮಾತನಾಡಿ ಮುಂದಿನ ದಿನಗಳಲ್ಲಿ ಈ ಯೋಜನೆಯ ಸೌಲಭ್ಯ ಎಲ್ಲರಿಗೂ ದೊರೆಯಲಿದೆ ಆದರೆ ಸ್ವಲ್ಪ ಸಮಯ ಬೇಕಾಗುವುದು ಎಂದು ಗ್ಯಾಸ್ ಬಳಕೆಯ ಸುರಕ್ಷತೆಯ ಕುರಿತಾಗಿ ಮಾಹಿತಿ ನೀಡಿದರು. ಸಭೆಯ ಅಧ್ಯಕ್ಷತೆ ವಹಿಸಿದ ಸುಬ್ರಾಯ ನಾಯ್ಕರವರು ಮಾತನಾಡಿ ಬಿಜೆಪಿ ಕಾರ್ಯಕರ್ತರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಸಿಬ್ಬಂದಿಗಳು ಹೆಚ್ಚಿನ ಮುತುವರ್ಜಿ ವಹಿಸಿ ಈ ಯೋಜನೆಯ ಅನೂಕೂಲತೆಯನ್ನು ಜನಸಾಮಾನ್ಯರ ಮನೆ ಬಾಗಿಲಿಗೆ ಉಚಿತವಾಗಿ ತಲುಪಿಸುವುದಲ್ಲದೇ ಉಚಿತವಾಗಿ ಲೈಟರಗಳನ್ನೂ ವಿತರಿಸುತ್ತಿರುವ ನಾಗರಾಜ ನಾಯಕ ತೊರ್ಕೆಯವರ ಕಾರ್ಯಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಫಲಾನುಭವಿಗಳಾದ ಹಳದಿಪುರದ ಮೋಹಿನಿ ಹನುಮಂತ ಉಪ್ಪಾರ, ಸುಮಿತ್ರಾ ನಾಗಪ್ಪ ಅಂಬಿಗ, ಗಂಗೆ ಮಂಜುನಾಥ ಗೌಡ, ಶೋಭಾ ರಾಮಾ ಗೌಡ, ದೇವಿ ಈರು ಗೌಡ, ಕಲ್ಪನಾ ಮಂಜುನಾಥ ಪಟಗಾರ, ಸವಿತಾ ನಾಗರಾಜ ಹರಿಕಂತ, ಭವಾನಿ ದಿನಕರ ನಾಯ್ಕ, ತುಳಸಿ ಮಾಬ್ಲು ಗೌಡ, ಪಾರ್ವತಿ ದೇವು ಮುಕ್ರಿ ಮತ್ತು ಕರ್ಕಿಯ ಸುಬ್ಬಿ ಲಕ್ಷ್ಮಣ ಗೌಡ, ಗಣಪಿ ಭರಮ ಗೌಡ, ಪಾರ್ವತಿ ಗೌಡ, ಲಕ್ಷ್ಮಿ ಗಣಪತಿ ನಾಯ್ಕ, ನಾಗವೇಣಿ ಕೃಷ್ಣ ನಾಯ್ಕ ಇವರುಗಳಿಗೆ ಉಚಿತ ಸಿಲಿಂಡರ, ಲೈಟರಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖಂಡರುಗಳಾದ , ವೆಂಕಟ್ರಮಣ ಹೆಗಡೆ, ಡಾ|| ಜಿ.ಜಿ.ಹೆಗಡೆ, , ಗಾಯತ್ರಿ ಗೌಡ, ಉಮೇಶ ನಾಯ್ಕ, ರಾಜು ಭಂಡಾರಿ, ಮಂಜುನಾಥ ನಾಯ್ಕ, ಲಕ್ಷ್ಮೀನಾರಾಯಣ ಭಟ್, ಅಜಿತ ನಾಯ್ಕ, ಚಿದಾನಂದ ನಾಯ್ಕ, ಗಣಪತಿ ನಾಯ್ಕ ಇನ್ನಿತರರು ಉಪಸ್ಥಿತರಿದ್ದರು. ರತ್ನಾಕರ ನಾಯ್ಕ ಸ್ವಾಗತಿಸಿ ವಂದಿಸಿದರು.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Honavar News Tagged With: 15, ಉಚಿತ ಗ್ಯಾಸ್, ಉಜ್ವಲ ಯೋಜನೆಯಡಿ, ಕಡುಬಡವರೂ, ಕಿಟ್ ವಿತರಣೆ, ಕೂಡಾ ಹೊಗೆ, ಫಲಾನುಭವಿಗಳಿಗೆ, ಮಹತ್ವಾಕಾಂಕ್ಷಿ ಯೋಜನೆ, ಮುಕ್ತಿಹೊಂದಿ ಎಲ್ಪಿಜಿ ಗ್ಯಾಸ್, ಮುಖಂಡರಾದ ದಿನಕರ ಶೆಟ್ಟಿ

Explore More:

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,059 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar